ವಿಷಯಕ್ಕೆ ಹೋಗು

ಮಿತ್ರ ದುಖಃ

ವಿಕಿಸೋರ್ಸ್ದಿಂದ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

ಶಿವರಾಮ ಮಹಾದೇವ ಪರಾಂಜಪೆ78864ಮಿತ್ರ ದುಖಃ೧೯೨೦ಗೋವಿಂದ ಹಣಮಂತ ಹೊಸೂರ

ಮಿತ್ರ-ದುಃಖ.

ಸುಲಲಿತ ಗದ್ದ ಪುಸ್ತಕವು

ಸುಪ್ರಸಿದ್ಧ ರಾಷ್ಟ್ರಭಕ್ತ

ಶಿವರಾಮ ಮಹಾದೇವ ಪರಾಂಜಪೆ,

ಸಂಪಾದಕ, ಸ್ವರಾಜ್ಯ ಪತ್ರ, ಪುಣೆ

ಇವರಿಂದ ಹೊಸದಾಗಿ ಬರೆಯಲ್ಪಟ್ಟ

ಎಂಬೀ ಮರಾಠಿ ಪುಸ್ತಕದ

ಭಾಷಾಂತರವು.

...........................

ಲೇಖಕ

ಗೋವಿಂದ ಹಣಮಂತ ಹೊಸೂರ,

"ಕರ್ನಾಟಕ ವಿದ್ಯಾ ವಿನೋದಿ."

.......................

ಇದನ್ನು

ಭಿಕಾಜಿ ಪರಶುರಾಮ ಕಾಳೆ, ಮ್ಯಾನೇಜರ,

ಶ್ರೀ ಶೇಷಾಚಲ ಪ್ರಿಂಟಿಂಗಪ್ರೆಸ್ಸ ಆನಂದವನ, ಇವರು

ಪ್ರೊ. ಪರಾಂಜಪೆ ಇವರ ಪರವಾನಿಗೆ ಪಡೆದು

ಭಾಷಾಂತರಿಸಿ ಪ್ರಸಿದ್ದಿಸಿರುವರು.

..........................

೧೯೨೦

..........

ಬೆಲೆ ಆಣೆ.

Page

ಮಿತ್ರ-ದು:ಖ.

ಆಕಾಶದಲ್ಲಿ ಸ್ವಾಭಾವಿಕ ಗತಿಯಿಂದ ತಿರ ಗುತ್ತಿದ್ದ ಚಂದ್ರನು ಒಂದು ದಿವಸ ವಿ ತ್ರ-ಸೂರ್ಯನಿಗೆ ಭೆಟ್ಟಿಯಾದನು. ದೂರಿ ನ ಗುಡ್ಡವು ಕಣ್ಣಿಗೆ ನುಣ್ಣಗೆ ಎಂಬೀ ಭೂಮಂಡಲದ ನಾಣ್ಣುಡಿಯಂತೆ ದೂರ ತೋ ಭಾಸ್ಕರೋ ರಮ್ಮ ಎಂಬ ಉಕ್ತಿಯು ಚಂದ್ರಲೋಕ ದಲ್ಲಿ ಪ್ರಚಲಿತವಿತ್ತು ಆ ತತ್ವಕ್ಕನುಸರಿಸಿ ಚಂದ್ರನು ಸೂರ್ಯ ನಿಂದ ಯಾವಾಗಲೂ ಸಾಧ್ಯವಿದ್ದ ಮಟ್ಟಿಗೆ ದೂರವೇ ಇರು ತಿದ್ದನು; ಪ್ರತಿ ತಿಂಗಳ ಮುವತ್ತು ದಿವಸಗಳಲ್ಲಿ ಇವನು ಮಿತ್ರನ ಸಮೀಪಕ್ಕೆ ಕ್ವಚಿತ್ತಾಗಿಯೇ ಹೋಗುತ್ತಿದ್ದನು. ಆದರೆ ಒಮ್ಮೆ ಒಂದು ಅಮಾವಾಸ್ಯೆಯ ದಿವಸ ಇವರೀರ್ವರು ತೀರ ಸಮಿದಲ್ಲಿ ಗಂಟು ಬಿದ್ದರು. ಇವರಲ್ಲಿ ಯಾವಾಗಲೂ - ಷ ಸ್ನೇಹವಿತ್ತೆಂತ; ಒಬ್ಬನು ಹಗಲು ಹೊರಬಿದ್ದ ಮತ್ತೊಬ್ಬನು ಆಗ ಮೋರೆ ಸಹ ತೋರಿಸದೆ ರಾತ್ರಿಯಲ್ಲಿ ಕರಬೀಳತಕ್ಕವನು. ಹೀಗೆ ಇವರ ದಿನಚರ್ಯೆಯಾಗಿತ್ತು ಇದರ ಹೊರತು ಒಬ್ಬನ ಮೋರೆ ದಕ್ಷಿಣಕ್ಕಾದರೆ, ಇನ್ನೂ ಬೃನ ಮೋರೆ ಉತ್ತರಕ್ಕೆ; ಈ ಪ್ರಕಾರ ಇವರು ವರ್ಷದಲ್ಲಿ ಎಷ್ಟೋ ದಿವಸಗಳನ್ನು ಕಳೆಯುತ್ತಿದ್ದರು. ಇದಕ್ಕೂ ಎಶೇ ಸವೇನಂದರೆ, ಇವರೀರ್ವರ ಸ್ವಭಾವದಲ್ಲಿಯೂ ಕ್ವಚಿತ್ತೇ ಸಾ ಮ್ಯವಿತ್ತು. ಒಬ್ಬನ ಸ್ವಭಾವವು ಬಹಳ ಉಗ್ರವಾದರೆ, ಇನ್ನೂ ಬೃನ ಪ್ರಕೃತಿ ಗುಣವು ತೀರ ಶಾಂತವು. ಹೀಗೆ ಇವರ ಸ್ಥಿತಿ ಯಾಗಿತ್ತು; ಮತ್ತು ಕಾಲಮಾನದಿಂದ ಅದರಲ್ಲಿ ಈ ವರೆಗೆ ಏನೂ ಸ್ಥಿತ್ಯಂತರವಾಗಿರುವದಿಲ್ಲ. ದಾಯಾದಿಗಳಾದ ಇಬ್ಬರು ಅಣ್ಣ ತಮ್ಮಂದಿರಂತೆ ಇವರೀರ್ವರ ಅವಸ್ಥೆಯಿತ್ತು. ಇವರು ಪರಸ್ಪರರಿಂದ ಶಕ್ಯವಿದ್ದಷ್ಟು ದೂರವಿದ್ದು, ತಮ್ಮಷ್ಟಕ್ಕೆ ತಾವಿ ರುತ್ತಿದ್ದರು. ಆದರೂ ಇವರು ಪರಸ್ಪರರನ್ನು ದ್ವೇಷಿಸುತ್ತಿದ್ದ ರೆನ್ನುವ ಹಾಗಿದ್ದಿಲ್ಲ. ಹೆಚ್ಚಾಗಿ ಪ್ರೇಮವೂ ಇಲ್ಲ- ದ್ವೇಷವು ಇಲ್ಲ. ಈ ಪ್ರಕಾರದ ಸವಿನುಡಿಯ ಮಧ್ಯಮ ತರದ ಆಚರಣೆ ಯು ಇವರಲ್ಲಿತ್ತು. ಆದರೆ ಅಲ್ಪ ಪ್ರಮಾಣದ ಭಾಗಾದಿತನ ದಹಗೆತನದ ಅಂತಃಕರಣದಿಂದ ಇವರು ಪರಸ್ಪರರನ್ನು ನೋಡು ತಿದ್ದರು.
ಈ ಸ್ಥಿತಿಯಲ್ಲಿ ಒಂದು ದಿನ ಮೇಲೆ ಹೇಳಿದಂತೆ ಇವ
ರೀರ್ವರ ಭೆಟ್ಟಿಯಾಯಿತು. ತನ್ನ ಸುಖದುಃಖಗಳನ್ನು ಚ೦ ದ್ರನಿಗೆ ತಿಳಿಸಬೇಕೆಂದು ಸೂರ್ಯನು ಎಷ್ಟೋ ಪಕ್ಷ-ಮಾಸಗ ಳಿಂದ ಅವನ ಭೆಟ್ಟಿಯ ನಿರೀಕ್ಷಣೆಯಲ್ಲಿದ್ದನು. ಕಡೆಗೆ ಅದು ಒಂದು ಅಮಾವಾಸ್ಯೆಯ ದಿವಸ ಬೆಳಗಿನ ಜಾವಿನಲ್ಲಿ ಆ ಸುಸಂ ಧಿಯು ಪ್ರಾಪ್ತವಾಯಿತು.
ಆ ಕಾಲದಲ್ಲಿ ಆಕಾಶದಲ್ಲಿ ಇವರಿಬ್ಬರ ಹೊರತು ಮ
ರನೆಯವರು ಯಾರೂ ಇದ್ದಿಲ್ಲ. ಎಲ್ಲ ಕಡೆಗೂ ನಿಶ್ಯಬ್ದವೆ. ಗಿದ್ದು, ಪ್ರಾತಃಕಾಲದ ಶಾಂತತೆಯು ನಾಲ್ಕೂ ದಿಕ್ಕುಗಳಲ್ಲಿ ಸಂಪೂರ್ಣವಾಗಿ ಪ್ರಸ್ಥಾಪಿತವಾಗಿತ್ತು. ರಾತ್ರಿಯು ಈ ಮೊದಲೇ ಕಳೆದು ಹೋಗಿತ್ತು; ಹಾಗು ನಿಶೆಯ ಪ್ರಿಯಕರ ನಾದ ತಮೋರಾಜನಾದರೂ ಆಕೆಯ ಹಿಂದಿನಿಂದ

ಎಲ್ಲಿಯೊ ಹೋಗಿಬಿಟ್ಟಿದ್ದನು. ಚಂದ್ರ-ಸೂರ್ಯರ ಭೆಟ್ಟಿಯ ಆದಿವಸವ
ವರ್ಪಾಋತುವಿನ ಇಲ್ಲವೆ ಶರದೃತುವಿನ ದಿನವಲ್ಲದ್ದರಿಂದ ಆಕಾ ಶದ ವಿಸ್ತಾರವಾದ ಅಂಗಳದಲ್ಲಿ ಯಾವದೊಂದು ಮೇಘದ ತೀರ ಸಣ್ಣ ತುಣುಕು ಸಹ ಎಲ್ಲಿಯೂ ಕಾಣುತ್ತಿದ್ದಿಲ್ಲ. ಆ ಇಡಿ ಆಕಾಶವು ಕಸ ಉಡಿಗಿ ಸ್ವಚ್ಛ ಮಾಡಿದಂತೆ ತೋರುತ್ತಿ ತು, ಸೂರ್ಯನ ಸಾರಥಿಯಾದ ಅರುಣನು ರವಿ-ರಧವನ್ನು ಮೆಲ್ಲಮೆಲ್ಲನೆ ಹೊಡೆಯುತ್ತಿದ್ದನು. ಆ ರಥದ ಏಳೂ ಕುದುರೆ ಗಳ ಖುರ ಪುಟಗಳ ಸಪ್ಪಳವು ತೀರ ಮುಂದಾಗಿದ್ದರಿಂದ; ಅದು ಕ್ವಚಿತ್ತಾಗಿಯೇ ಕೇಳಿಸುತ್ತಿತ್ತೆಂದರೂ ಸಲ್ಲಬಹುದು. ಈ ಪ್ರಕಾರದ ಸುಶಾಂತ ಸಮಯದಲ್ಲಿ ಎಷ್ಟೋ ದಿವಸಗಳನಂತರ ಭೆಟ್ಟಿಯ ಯೋಗವು ಒದಗಿ ಬಂದ ಬಳಿಕ ಪರಸ್ಪರರಲ್ಲಿ ಆಗ ತಕ್ಕ ಔಪಚಾರಿಕ ಕ್ಷೇಮ ಸಮಾಚಾರಗಳು ನಡೆದಿರಲು, ಸೂ ರ್ಯನ ಮುಖವು ತುಸ ಮೌನವಾಗಿ ತೋರಿತು. ಆಗ ಚe ದ್ರನು ಕಾರಣವೇನೆಂದು ಸೂರ್ಯನಿಗೆ ಕೇಳಲು, ಸೂರ್ಯ ನು ಒಂದು ದೀರ್ಘ ನಿಟ್ಟುಸಿರನ್ನು ಬಿಟ್ಟು ಚಂದ್ರನಿಗೆ ತನ್ನ ಸ್ಥಿತಿಯನ್ನು ಹೇಳತೊಡಗಿದನು. ಆದರೆ ಅದನ್ನು ಹೇಳುವ ಮೊದಲು, ಇಬ್ಬರು ಜೀವದ ಗೆಳೆಯರು ಪರಸ್ಪರರ ಹಿತಗೋಷ್ಟಿಗಳನ್ನು ಮಾತಾಡುವಾಗ ಒಬ್ಬನು ತನ್ನ ಕೈಯ ನ್ನು ಸಹಜವಾಗಿ ಮತ್ತೊಬ್ಬನ ಹೆಗಲ ಮೇಲೆ ಚಲ್ಲ ಮಾತಾ ಡುವಂತೆ , ಸೂರ್ಯನು ತನ್ನ ಕೈಯನ್ನು ಹೆಗಲ ಮೇಲೆ ಒಗೆಯುವದಕ್ಕಾಗಿ ತನ್ನ ಹತ್ತಿರಕ್ಕೆ ಬರುವದನ್ನು ಕಂಡ ಕೂಡಲೆ ಚಂದ್ರನು ತುಸು ದೂರ ಸರಿದು ನಿಂತು, ಸೂ ರ್ಯನನ್ನು ಕುರಿತು-"ಮಿತ್ರಾ, ನನ್ನ ಪೂರ್ಣ ಲಕ್ಷ್ಯವಿದೆ; ನೀನು ಹೇಳುವದೆಲ್ಲವನ್ನೂ ನಾನು ಆಸ್ಥೆಯಿಂದ ಕೇಳುತ್ತಲಿದ್ದೇನೆ. ಅಂದಮೇಲೆ ಅಷ್ಟೊಂದು ಹತ್ತಿರಕ್ಕೆ ಬರುವ ತೊಂದರೆಯ ನೇತಕ್ಕೆ ವಹಿಸುತ್ತೀ?” ಎಂದು ನುಡಿದನು.

ಚಂದ್ರನ ಈ ತಿರಸ್ಕಾರ ವಾಣಿಯನ್ನು ಕೇಳಿ, ಮಿತ್ರನ

ಮೋರೆಯು ಇಪ್ಪಾಯಿತು. ಇವನಲ್ಲಿ ಯಾವ ಪ್ರೇಮವು ಕ್ಷಣ ಹೊತ್ತು ಉಕ್ಕೇರಹತ್ತಿತ್ತೊ ಅದೆಲ್ಲವೂ ಈಗ ಒಮ್ಮೆಲೆ ಬತ್ತಿ ಹೋಯಿತು. ಇವನ ಉತ್ಸಾಹವು ಸಂಪೂರ್ಣವಾಗಿ ಅಡಗಿಬಿ ಟ್ಟಿತು; ಮತ್ತು ಇವನಿಗೆ ಯಾವ ಅಖಂಡ ದುಃಖವು ತುಸು ಮಟ್ಟಿಗಾದರೂ ಮರವಾಗುತ್ತ ನಡೆದಿತ್ತೋ, ಆ ಎಲ್ಲ ದುಃ ಖವು ಪುನಃ ಅವನ ಮನಸ್ಸಿನಲ್ಲಿ ಜಾಗೃತವಾಯಿತು. ಸೂರ್ಯನ ಸೂಚನೆಯ ಮೇರೆಗೆ ಅರುಣನು ಸೂರ್ಯನ ರಥವನ್ನು ಚ೦ ದ್ರನ ಬಳಿಗೆ ಒಯ್ಯುವದಕ್ಕಾಗಿ ತುಸು ಒಲಿಸಹತ್ತಕ್ಕನ ನಿದ್ದನು; ಅಷ್ಟರಲ್ಲಿ ಆ ಗತಿಯನ್ನು ತೊರೆದು ಮೊದಲಿನಂತೆ ಸಾಗಲು ಅವನಿಗೆ ಸೂರ್ಯನಿಂದ ಪುನಃ ಆಜ್ಞೆಯು ಮಾಡಲ್ಪ ಟಿತು. ಬಳಿಕ ಸೂರ್ಯನು ಮತ್ತೊಂದು ನಿಟ್ಟುಸಿರು ಗರೆದು ಚಂದ್ರನನ್ನು ಕುರಿತು_ಇಂದ್ರಾ, ಇದೇ ಇದೇಯೇ ನನ್ನ ಮ್ಯಾನತೆಯ ಕಾರಣವು. ನಾನು ಇಂದು ನಿಸ್ತೇಜನೇ ಕಾಗಿರುವೆನೆಂಬದನ್ನು ಇಷ್ಟು ದಿವಸಗಳಲ್ಲಿ ಈ ದಿನವೇ ನೀನು ನನ್ನನ್ನು ಕೇಳಿದೆ. ನನ್ನ ಮೊಗವು ಮ್ಯಾನವಾಗಿದೆಯೋ, ತೇಜಃಪುಂಜವಾಗಿದೆಯೋ ಎಂಬ ಬಗ್ಗೆ ಚಿಂತೆಯನ್ನು ತಾಳಿ ವಿಚಾರಮಾಡುವವನು ಇಷ್ಟು ದಿವಸಗಳಲ್ಲಿ ನೀನೊಬ್ಬನೇ ನನಗೆ ಗಂಟುಬಿದ್ದೆ. ನನ್ನ ಕಡೆಗೆ ಯಾರಾದರೂ ನೋಡಿದರಷ್ಟೆ ನನ್ನ ಸ್ಥಿತಿಯು ಚೆನ್ನಾಗಿದೆಯೋ ಇಲ್ಲವೋ ಎಂಬದು ಅವರಿಗೆ ತಿಳಿ ಯುವದು. ಆದರೆ ಯಾವನೊಬ್ಬ ಮನುಷ್ಯನು ತನ್ನ ಕಡೆಗೆ ನೋಡಹತ್ತಿದನೆಂದರೆ ಕೂಡಲೆ ತನ್ನ ಮೊಲೆಯನ್ನು ಹಿಂದಿರು ಗಿಸಿಬಿಡುವನು. ಅಂದ ಮೇಲೆ ನನ್ನ ನಿಜ ಸ್ಥಿತಿಯು ಮಂ ದಿಗೆ ಹೇಗೆ ತಿಳಿಯಬೇಕು? ಈ ಜಗತ್ತಿನಲ್ಲಿ ಸದ್ಯಕ್ಕೆ ಇಷ್ಟು ಜನರಿದ್ದಾರೆ, ಮತ್ತು ಮುಂದೆ ಇಲ್ಲಿ ಅಸಂಖ್ಯ ಜನರಾಗಬ
ಹುದು; ಆದರೆ ಆ ಎಲ್ಲರಿಂದ ನನಗೇನೂ ಪ್ರಯೋಜನವಿಲ್ಲ. ಚಂದ್ರಾ, ಇಲ್ಲಿ ಇಷ್ಟು ಜನ ಮನುಷ್ಯರಿದ್ದಾರೆ, ಆದರೆ ಅವರಲ್ಲಿ ನನ್ನವನೆಂಬುವವನು ಒಬ್ಬನೂ ಇರದಿರುವದು ಎಷ್ಟು ಖೇದದ ಸಂಗತಿಯಾಗಿದೆ? ಈ ವಿಸ್ತಾರವಾದ ವಿಶ್ವವಲಯ ದಲ್ಲಿ ಒಬ್ಬ ಯಃಕಶ್ಚಿತ ಪ್ರಾಣಿಗೆ ಕೂಡ ಸ್ನೇಹಿತರು, ಬಂಧುಬಾಂಧವರು ಮತ್ತು ನೆರೆ ಹೊರೆಯವರು ಹೀಗೆ ಅಷ್ಟೇಷ್ಟರು ಇರುತ್ತಾರೆ; ಹಾಗು ಅವರು ಪರಸ್ಪರರ ಬಳಿಗೆ ಹೋಗು ತಾರೆ-ಬರುತ್ತಾರೆ, ಒಬ್ಬರು ಮತ್ತೊಬ್ಬರಿಗೆ ಪ್ರೇಮದಿಂದ ಭೆಟ್ಟಿಯಾಗುತ್ತಾರೆ, ಮತ್ತು ಪರಸ್ಪರರು ಆನಂದದಿಂದ ಮಾತುಕಥೆಯಾಡುತ್ತ ಕೂಡುತ್ತಾರೆ. ಆದರೆ ಚಂದ್ರಾ, ಈ ಮಿತ್ರಸ್ನೇಹದ ಸೌಖ್ಯವು ಈ ನಿನ್ನ ಸೂರ್ಯನ ಹಣೆಯಲ್ಲಿ ಬರೆ ದಿಲ್ಲ. ಯಾರಾದರೂ ನನ್ನ ಬಳಿಗೆ ಬಂದು, ನನಗೆ ಪ್ರೇಮಾ ಲಿಂಗನ ಕೊಟ್ಟು, ನನ್ನೊಡನೆ ಒಂದೆರಡು ಗಳಿಗೆಯ ವರೆಗೆ ನಾಲ್ಕು ಸುಖದುಃಖದ ಮಾತುಗಳನ್ನಾಡಬಹುದೆಂಬ ಸುಖವು ನನ್ನ ದೈವದಲ್ಲಿಯೇ ಇಲ್ಲ. ಇದಕ್ಕೆ ನೀನಾದರೂ ಏನು ಮಾ ಡುವೆ ಚಂದ್ರಾ, ಬೇರೆಯವರ ಗೊಡವೆಯೇಕೆ, ಇದರ ಅನುಭ ನವು ಈಗ ನಿನ್ನಿಂದಲೇ ನನಗಾಗಲಿಲ್ಲವೇನು? ಸುಧಾಕರಾ ನನ್ನ ಸುಖದುಃಖಗಳ ಬಗ್ಗೆ ಇಷ್ಟು ಕಳಕಳಿಯಿಂದ ಪ್ರಶ್ನೆ ಮಾ ಡುತ್ತಿರುವ ನೀನು, ನಿನ್ನ ಹೆಗಲ ಮೇಲೆ ಕೈಯಿಕ್ಕಿ ಅಡ್ಡಾಡು ಕೆಲವು ಹಿತದ ಮಾತುಗಳನ್ನಾಡಬೇಕೆಂದು ನನ್ನ ಮನಸ್ಸಿನ ಬರಲು, ನಾನು ಅದರಂತೆ ನನ್ನ ರಥವನ್ನು ನಿನ್ನ ಕಡೆಗೆ ಒಲಿ ಸುವ ಬಗ್ಗೆ ಸ್ವಲ್ಪ ಸೂಚನೆಯನ್ನು ಆರುಣನಿಗೆ ಮಾಡಿದ್ದನ್ನು ಆದರೆ ಅಷ್ಟಕ್ಕೆ ನೀನು ಅಂಜಿ ಹಿಂದಕ್ಕೆ ಸರಿದು ನಿಂತೆ; ಹಾಗು ನಿನ್ನ ಉಪಾಧಿಕ ಭಾಷಣದಿಂದ ನನಗೆ ದೂರನಿಂತು ಮಾತಾ ಡುವ ವಿಷಯಕ್ಕೆ ಪರ್ಯಾಯದಿಂದ ಸೂಚಿಸಿದೆ. ಆದರೆ
ಮಿತ್ರಾ, ಆ ಕಾಲಕ್ಕೆ ನೀನೊಬ್ಬನೇ ಬೆದರಿದೆಯಂತಲ್ಲ; ನಿನ್ನ ನ್ನು ನೋಡಿ ನಾನೂ ಮನಸ್ಸಿನಲ್ಲಿ ಬಹಳ ಅಂಜಿಕೊಂಡೆನು; ಮತ್ತು ಅದರಿಂದ ತೀರ ಹತಾಶನಾದೆನು. ಆಗ ಈ ಮಿತ್ರನ ದೈವದಲ್ಲಿ ಮಿತ್ರಸೌಖ್ಯ ವಿಲ್ಲೆಂಬ ಸಂಗತಿಯು ನನ್ನ ಮನಸ್ಸಿನ ಲ್ಲಿ ಮರ್ತಿಮಂತವಾಗಿ ನಿಂತು ಬಿಟ್ಟಿತು; ಮತ್ತು ಅದರಿಂ ದ ನಾನು ಅತಿಶಯವಾಗಿ ಜರ್ಜರನಾದೆನು. 'ಲೋಕದವ ರಿಂದ ನಾನು ಜಗನ್ನಿ ತ್ರನೆಂದು ಕರೆಯಲ್ಪಡುತ್ತಿದ್ದರೂ, ನನ್ನ ಪರಮ ಸ್ನೇಹಿತನು ಜಗತ್ತಿನಲ್ಲಿ ಯಾರೂ ಇರುವದಿಲ್ಲ, ಎಂಬೀ ನಿಸರ್ಗ ರಹಸ್ಯವು ನನ್ನ ಮನಸ್ಸಿನಲ್ಲಿ ಮನೆಮಾಡಲು, ಅದರಿಂದ ನನಗೆ ಮರಣೋನ್ಮುಖ ದುಃಖವಾಯಿತು. ಆದರೆ ಅದೆಲ್ಲವ ನ್ಯೂ ನುಂಗಿಕೊಂಡು ಇಷ್ಟು ದೂರಿನಿಂದಲೇ ಯಾಕಾಗಿಲ್ಲ ದು ನನ್ನ ಕ್ಷೇಮಸಮಾಚಾರವನ್ನು ಕೇಳುವವನು ಯಾವನೊ ಬ್ರನು ಕೂಡಿದ್ದಾನೆಂಬದರಲ್ಲಿ ಸಂತೋಷವನ್ನು ತಳೆದು, ಚ೦ ದಾ, ನಾನು ಈ ಸುಸಂಧಿಯ ಲಾಭವನ್ನು ಹೊಂದುವದಕ್ಕಾ ಗಿ ನಿನ್ನೊಡನೆ ಮಾತಾಡಬೇಕೆಂದು ಸಂಕಲ್ಪಿಸಿದ್ದೇನೆ. “ಇಂ ದು ನಾನು ಇಷ್ಟೇಕೆ ಮಾನವಾಗಿ ತೋರುತ್ತಿದ್ದೇನೆ ೦ದು ನೀನು ನನಗೆ ಕೇಳಿದಿಯಷ್ಟೇ? ಆದರೆ ಚಂದ್ರಾ, ನಾನು ಇಂದೇ ಅಷ್ಟೊಂದು ಮ್ಯಾನವಾಗಿ ತೋರುತ್ತಿದ್ದೇನೆಂತಲ್ಲ. ನಾನು ಸ್ನೇಹ ಸೌಖ್ಯದಿಂದ ಶೂನ್ಯನಾಗಿರುವೆನೆಂಬದು ನನ್ನ ಮನಸ್ಸಿ ನಲ್ಲಿ ಬಿಂಬಿಸಿದಾಗಿನಿಂದ ನನ್ನ ಮುಖವು ನಿಜವಾಗಿದೆ. ನನ್ನ ಮೋರೆಯ ಎದುರಿಗೆ ಮೇಘಗಳು ಅಡ್ಡ ಬಂದಾಗ ಮಾತ್ರ ನಾನು ಮ ನವಾಗಿ ತೋರುವೆನೆಂದು ಪೂರ್ಣ ಶೋಧ ಮಾಡದ ಎಷ್ಟೋ ಕಗ್ಗ ಜನರು ತಿಳಿದಿರುತ್ತಾರೆ. ಆದರೆ ಅವರ ಆ ಮಾತು ಸತ್ಯವಾದದ್ದಲ್ಲ. ಮಿತ್ರಲಾಭವಿಲ್ಲೆಂಬ ಕಡುದುಃಖಮೇಘಪಟಲಗಳಿಂದ ನನ್ನ ಅಂತಃಕರಣವು ವ್ಯಾಪಿಸಿರುವದರಿಂ
ದ ನಾನು ಸದಾ ಮ್ಯಾನವಾಗಿಯೇ ಕಾಣುತ್ತೇನೆ. ವಸ್ತು ಸ್ಥಿತಿ ಯು ಹೀಗಿರುವದು. ಆದರೆ ಮಿತ್ರಾ, ಇದರ ನಿವಾರಣವು ಯಾರಿಂದಾಗುವಂತಿದೆ ? ಎಂದು ನುಡಿದು, ಅತ್ಯಂತ ದುಃಖದಿಂದಲೂ ನಿರಾಶೆಯಿಂದಲೂ ಉಸರ್ಗರೆಯುತ್ತ ಸೂ ರ್ಯನು ಕೆಲಹೊತ್ತಿನ ವರೆಗೆ ಸುಮ್ಮನೆ ಕುಳಿತು ಬಿಟ್ಟನು.

ii

ಆದರೆ ಹಲವು ದಿನಗಳಿಂದ ಅವನ ಮನಸ್ಸಿನಲ್ಲಿ ಸಂಚಿತ ವಾದ ದುಃಖವು ಅವನನ್ನು ಬಹಳ ಹೊತ್ತಿನ ವರೆಗೆ ಸುಮ್ಮನಿ ರಗೊಡಲಿಲ್ಲ. ಆ ದುಃಖವು ಆವೇಶದಿಂದ ಹೊರಗೆ ಬರಲು ಪ್ರಯತ್ನ ಮಾಡಹತ್ತಿತು; ಅವನ ಶೋಕವು ಒತ್ತರಿಸಿತು; ಕಂಠವು ಬಿಗಿಯಿತು; ಹಾಗು ಕಣ್ಣುಗಳು ಅಶ್ರುಗಳಿಂದ ತುಂ ಬಿದಂತಾದವು. ಆಗ ಸೂರ್ಯನು ಕಣ್ಣುಗಳನ್ನು ಇರಿಸಿಕೊ ಳ್ಳುತ್ತ ಚಂದ್ರನೊಡನೆ ಹೀಗೆ ಮಾತಾಡತೊಡಗಿದನು:-

"ಚಂದ್ರಾ, ನನ್ನ ಮ್ಯಾನತೆಗೆ ಇನ್ನೂ ಒಂದು ಕಾರ ಣವಿರುವದು. ಮಿತ್ರಾ, ನೀನು ಪರಮ ಧನ್ಯನು, ತಿಂಗಳೊಳಗೆ ಸರಾಸರಿ ಹದಿನೈದು ದಿವಸ ನೀನು ಪ್ರಕಾಶಮಾನನಾಗುತ್ತೋ; ಹಾಗು ಉಳಿದ ಹದಿನೈದು ದಿವಸಗಳಲ್ಲಿ ಬೇಕಾದ ಹಾಗೆ ನಿನಗೆ ವಿಶ್ರಾಂತಿಯನ್ನು ಪಡೆಯಲಿಕ್ಕೆ ಅನುಕೂಲವಿರುತ್ತದೆ; ಆದರೆ ನನ್ನ ಸ್ಥಿತಿಯು ಇದಕ್ಕೆ ವಿಪರೀತವಿದೆ. ನನ್ನ ಇಷ್ಟು ದುಃಖ ಕ್ಯ, ಶೋಕಕ್ಕೂ ಕಾರಣವೇನಂದರೆ, ಒಬ್ಬ ಸಾಧಾರಣ ಮನುಷ್ಯನಿಗೆ ಯಾವದೊಂದು ರಾತ್ರಿಯಲ್ಲಿ ನಿಯಮಿತ ವೇಳೆ ಗಿಂತ ಹೆಚ್ಚು ಹೊತ್ತಿನ ವರೆಗೆ ನಿದ್ದೆಯು ಹತ್ತದಿದ್ದರೆ, ಮತ್ತು ಅವನಿಗೆ ಸಾಕಷ್ಟು ವಿಶ್ರಾಂತಿಯು ದೊರೆಯದಿದ್ದರೆ, ಮರು ದಿವಸವೇ ಅವನು ಎಷ್ಟು ಮ್ಲಾನವಾಗಿ ತೋರುತ್ತಿರುತ್ತಾನೆ?
ಹಾಗು ಮರುದಿನ ರಾತ್ರಿ ಅವನಿಗೆ ಬೇಗ ನಿದ್ದೆ ಹತ್ತಿ ವಿಶ್ರಾಂ ತಿ ದೊರೆಯುವ ಕುರಿತು, ಎಷ್ಟೋ ಉಪಾಯಗಳು ಯೋಜಿ ಸಲ್ಪಡುತ್ತವೆ. ಅವನ ಹೆಂಡಿರು-ಮಕ್ಕಳು ಅವನ ತಲೆಯಮೇ ಲೂ, ಕಣ್ಣ ಮೇಲೂ ಪಡ್ಡಗಳನ್ನು ಹಾಕುವರು; ವೈದ್ಯರು' ಮಾತ್ರೆ-ಗುಳಿಗೆಗಳನ್ನು ಕೊಡುತ್ತಾರೆ; ಡಾಕ್ಟರರು ಹಲವು ಔಷಧಗಳನ್ನು ಕೊಡುತ್ತಾರೆ; ಆದರೆ ಗೆಳೆಯಾ, ಆ ಯಕಃಶ್ಚಿತ ಮನುಷ್ಯನ ಪ್ರಕೃತಿಯು ಸುಧಾರಿಸುವ ಬಗ್ಗೆ ಅಷ್ಟೊಂದು ಉಪ ಚಾರಗಳು ನಡೆದಿರಲು, ನಿನ್ನ ಈ ಭಗವಾನ್' ಸೂರ್ಯನಕಡೆಗೆ, ಅವನ ಪ್ರಕೃತಿ ಮಾನದ ಕಡೆಗೆ, ಮತ್ತು ಅವನ ಮ್ಯಾನತೆಯ ವಿಷಯಕ್ಕೆ ಯಾರೂ ಹಣಿಕಿಸಹ ಹಾಕುವದಿಲ್ಲವಲ್ಲ! ಚಂದ್ರಾ, ಎಷ್ಟು ದಿವಸಗಳಿಂದ ನನಗೆ ನಿದ್ದೆಯಿಲ್ಲೆಂಬದರ ಕಲ್ಪನೆಯ ದರೂ ನಿನಗದೆಯೇನು? ನಾನು ನನ್ನ ಈ ದುಃಖವನ್ನು ಯಾರಿಗೆ ಹೇಳಬೇಕು? ಮತ್ತು ಒಂದು ವೇಳೆ ನಾನು ಅದನ್ನು ಹೇಳಹ ತಿದರೂ ಅದು ತಮಗೆ ಕೇಳಬರುವಷ್ಟು ನನ್ನ ಹತ್ತರಕ್ಕೆ ಬಂದು ತುಸು ಹೊತ್ತು ಸಮಾಧಾನದಿಂದ ನಿಂತು ಕೇಳಿಕೊ ಳ್ಳುವವರಾದರೂ ಯಾರಿದ್ದಾರೆ? ಚಂದ್ರಾ, ಹೇಳಿದರೆ ನಿನಗೆ ಸುಳ್ಳೆನಿಸೀತು;ಆದರೆನನ್ನ ಜನ್ಮಾರಭ್ಯ ನಿದ್ದೆಯು ಹೇಗಿರುತ್ತದೆ ಬದು ನನಗೆ ಗೊತ್ತಿರುವದಿಲ್ಲ. ಮನುಷ್ಯನ ಕಣ್ಣಿನ ರೆಪ್ಪೆಗಳಲ್ಲಿ ಮೇಲಿನ ರೆಪ್ಪೆಯು ಕೆಳಗಿನ ರೆಪ್ಪೆಯನ್ನು ಆಗಾಗ್ಗೆ ಬಡಿಯು ತಿರುತ್ತದೆ. ಆದರೆ ನಾನು ಇಡೀ ಜಗತ್ತಿನಲ್ಲಿ ಸಂಚಾರ ಮಾ ಡುವವನಿದ್ದು, ನನ್ನ ರೆಪ್ಪೆಗಳನ್ನು ಕೂಡ ಅಲ್ಲಾಡಿಸುವ ಸಾ ಮರ್ಥವು ನನಗಿಲ್ಲೆಂಬದು ಎಂಥ ಖೇದದ ಸಂಗತಿಯು! ಮನು ಷ್ಯನ ಎರಡೇ ಕಣ್ಣುಗಳ ಮಾನದಿಂದ ನನಗೆ ಹನ್ನೆರಡು ಅಕ್ಷ್ಮಿ ಗಳು ಲಭಿಸಿದಾಗ, ನಾನು ಎಷ್ಟೋ ಪಟ್ಟು ಆನಂದತಾಳಿ ದ್ದೆನು. ಮನುಷ್ಯನ ಆರು ಪಟ್ಟು ಹೆಚ್ಚು ವಿಶ್ರಾಂತಿಯನ್ನು
ಪಡಕೊಳ್ಳುವ ಅಧಿಕಾರವು ನನಗೆ ಪ್ರಾಪ್ತವಾಯಿತೆಂದು ಅಗ ನಾನು ಭಾವಿಸಿದ್ದೆನು. ಆದರೆ ಆ ನನ್ನ ಹನ್ನೆರಡು ಕಣ್ಣಗೆ ಟೊಳಗಿನ ಒಂದು ಕಣ್ಣಿನ ರೆಪ್ಪೆಯನ್ನು ಸಹ ಮುಚ್ಚುವದು ಶಕ್ಯವಿಲ್ಲೆಂಬದು ನನಗೆ ತಿಳಿದು ಬಂದ ಮೇಲೆ, ನನ್ನಂಥ ಹತ ಭಾಗ್ಯ ಪ್ರಾಣಿಯು ಅನ್ವರಾರೂ ಇಲ್ಲೆಂಬದು ನನ್ನ ಮನವು ಕೆಯಾಯಿತು; ಮತ್ತು ಅಂದಿನಿಂದ ನನ್ನ ಮನಸ್ಸಿನಲ್ಲುಂಟಾದ ಚಡಪಡಿಕೆಯ ಕಲ್ಪನೆಯು ಸಹ ಪರರಿಗಾಗುವದು ಶಕ ವಿಲ್ಲ.”

ಚಂದ್ರಾ, ದಿನಾಲು ಇಷ್ಟು ದೊಡ್ಡ ರಾತ್ರಿಯು ಆಗು ತಿದ್ದು, ಆ ರಾತ್ರಿಯಲ್ಲಿ ನಾನು ಬೇಕಾದಷ್ಟು ಹೊತ್ತಿನ ವರೆಗೆ ಮಲಗಿಕೊಳ್ಳಬಹುದೆಂದು ಯಾವನೊಬ್ಬ ತಿಳಿಗೇಡಿ ಮನುಷ್ಯನು ಕೇಳಬಹುದು; ಆದರೆ ಮಿತ್ರಾ, ನನ್ನ ಪಾಲಿಗೆ ರಾತ್ರಿಯೇ ಇಲ್ಲೆಂಬದು ನಿನಗೆ ಗೊತ್ತಿದ್ದ ಸಂಗತಿಯಾಗಿದೆ. ರಾತ್ರಿಗಳು ಎರಡನೆಯವರ ಸಲುವಾಗಿ ಆಗುತ್ತವೆ; ನನ್ನ ಸಲುವಾಗಿ ಒಂದು ರಾತ್ರಿಯು ಕೂಡ ಉಂಟಾಗುವದಿಲ್ಲ. ನಾನು ಎಲ್ಲ ಜನರ ಹಿತಕ್ಕಾಗಿಯೇ, ವಿಶ್ರಾಂತಿಗಾಗಿಯೂ, ಒಂದರ ಹಿಂದೊಂದರಂತೆ ಹಗಲು-ರಾತ್ರಿಗಳನ್ನುಂಟು ಮಾಡುತ್ತೇನೆ; ಆದರೆ ನನಗೋಸುಗ ಯಾರೂ ಎಂದೂ ಒಂದು ರಾತ್ರಿಯನ್ನು ಸಹ ನಿರ್ಮಿಸುವದಿಲ್ಲ. ಬೇರೆಯವರೆಲ್ಲರೂ ಹಗಲಲ್ಲಿಯೂ, ಇರು ಟಿನಲ್ಲಿಯ ಬೇಕಾದ ಹಾಗೆವಿಶ್ರಾಂತಿಯನ್ನು ಪಡೆಯುತ್ತಾರೆ; ಮತ್ತು ಮರುದಿನ ಪನಃ ದುಡಿಯಲಿಕ್ಕೆ ಸಿದ್ಧವಾಗುತ್ತಾರೆ. ಆದರೆ ನನಗೆ ಹಗಲು, ಹಾಗು ರಾತ್ರಿ ಇವು ಒಂದೇಸಮವಾಗಿವೆ. ಅದ ರಿಂದ ವಿಶ್ರಾಂತಿಯನ್ನು ಹೊಂದದೆಯೇ, ನಾನು ಎರಡನೇ ದಿನ ಸದ ಕೆಲಸವನ್ನು ಪುನಃ ಆರಂಭಿಸಬೇಕಾಗುತ್ತದೆ. ರಾತ್ರಿಯ ನಿದ್ದೆಯ, ಹಾಗು ವಿಶ್ರಾಂತಿಯ ಮಾತು ಒತ್ತಟ್ಟಿಗಿರಲಿ,ಕ್ಷಣ ಹೊತ್ತು ಎಲ್ಲಿಯಾದರೂ ಒಟ್ಟಿಗೆ ನಿಲ್ಲಲಿಕ್ಕೆ, ಅಥವಾ ಮ
ತೊಟ್ಟಿಗೆ ಸ್ವಲ್ಪ ಕುಳಿತು ವಿಶ್ರಾಂತಿಯನ್ನು ತಕ್ಕೊಳ್ಳಲಿಕ್ಕೆ ಕೂಡ ನನಗೆ ಅವಕಾಶವಿರುವದಿಲ್ಲ. ಪ್ರವಾಸಿಗರು, ನಾಲ್ಕೆಂ ಟು ಹರದಾರಿ ನಡೆದ ಬಳಿಕ ಯಾವದೊಂದು ಬಾವಿಯ ದಂಡೆ ಯಲ್ಲಿ, ಅಥವಾ ನದಿಯ ತೀರದಲ್ಲಿ ಕೆಲಹೊತ್ತು ಕುಳಿತು ವಿಶ್ರಾಂತಿಯನ್ನು ತಕ್ಕೊಳ್ಳುವರು; - ಆನಂತರ ಅವರು ಮತ್ತೆ ಮುಂದಿನ ಹಾದಿಗೆ ಹತ್ತು ವರು. ಆದರೆ ಈ ನಿನ್ನ ದುರ್ದೆ. ವಿಯಾದ ಪ್ರವಾಸಿಗನು ನಡುವೆ ಎಲ್ಲಿಯೂ ಒಂದು ಕ್ಷಣ ಸಹ ನಿಲ್ಲದೆ ಒಂದೇಸವನೆ ಸಾವಿರಾರು ಹರದಾರಿಗಳ ದಾರಿ ಯನ್ನು ಕ್ರಮಿಸುತ್ತಿರಬೇಕಾಗುತ್ತದೆ! ಒಂದು ವೇಳೆ ನಾನು ದಾರಿಯಲ್ಲಿ ಎಲ್ಲಿಯಾದರೂ ತುಸು ಹೊತ್ತು ತಡೆದರೆ ವಿಶ್ರಾಂತಿ ಯ ಸ್ಥಳವಾದರೂನನ್ನ ಮಾರ್ಗದಲ್ಲಿ ಸಿಗುತ್ತದೆ? ಚಂದ್ರಾ, ಈ ನಮ್ಮ ಕೆಳಗಿನ ಭೂಮಂಡಲದ ಮೇಲೆ ಪ್ರವಾಸಿಗರಿಗೆ ಒಂದೇಸವನೆ ಬಿಸಿಲು ಹತ್ತಬಾರದೆಂದೂ, ಅವರಿಗೆ ವಿಶ್ರಾಂ ತಿಗೆ ಅನುಕೂಲವಾಗುವಂಥ ಸ್ಥಳವಿರಬೇಕೆಂದೂ ಎಷ್ಟೋ ಜನ ಪುಣ್ಯಾತ್ಮರು ರಹದಾರಿಗಳ ಎಡಬಲಗಳಲ್ಲಿ ವಿಶಾಲವಾದ ಮರಗಳನ್ನು ಬೆಳಿಸಿ ಆ ನೆಳಲಿನಿಂದಲೂ, ನಾಲ್ಕೆಂಟು ಹರದಾ ರಿಗಳ ಅಂತರದಿಂದ ಚಿಕ್ಕ ದೊಡ್ಡ ಕೆರೆಬಾವಿಗಳನ್ನು ಕಟ್ಟಿಸಿ ನೀರಿನ ಅನುಕೂಲತೆಯಿಂದಲೂ ಸಂತುಷ್ಟಿಯನ್ನುಂಟು ಮಾಡಿ ರುತ್ತಾರೆ. ಆದರೆ ನಿನ್ನ ಮಿತ್ರನು ಅಖಂಡ ಪ್ರವಾಸಿಗನಾಗಿ ದಾರೀ ಕ್ರಮಿಸಹತ್ತಿದಂದಿನಿಂದ ಇದು ವರೆಗೂ ಅವನಿಗೆ ದಾ ರಿಯಲ್ಲಿ ಬಿಸಿಲು ಹತ್ತಬಾರದೆಂದು ಗಿಡಬೆಳಿಸುವ, ಹಾಗು ತೃ ಪಾಶಮನಾರ್ಥವಾಗಿ ಕೆರೆಬಾವಿಗಳನ್ನು ತೊಡಿಸುವ ಪುಣ್ಯ ವಂತನಾದ ಒಬ್ಬ ಪರೋಪಕಾರಿಯ ಜನ್ಮವೆತ್ತಲಿಲ್ಲ. ಗೆಳೆಯಾ, ನನ್ನ ಪ್ರವಾಸದ ದಾರಿಯು ಮಿತಿಮೀರಿದ ಬೆಳಕಿನಿಂದ ಪ್ರಕಾ ಶಿಸುವಂಥದೂ, ಆತಿಶಯವಾದ ಬಿಸಿಲಿನಿಂದ ಕಾದು ಉರಿಯು
ವಂಥದೂ ಇರುವದರಿಂದ ಅಲ್ಲಿ ಎಂಥ ದಟ್ಟ, ಹಾಗು ದೊಡ್ಡ ಮರಗಳಿದ್ದರೂ ಅವು ಕಮರಿ, ಇಲ್ಲವೆ ಸುಟ್ಟು ಹೋಗತಕ್ಕವೇ. ಅಂಥಲ್ಲಿ ಹೊಸಗಿಡಗಳನ್ನು ಹಚ್ಚುವವರಾದರೂಯಾರು? ಮತ್ತು ಯಾವನಾದರೂ ಹಚ್ಚ ಹೋದರೆ, ಅವು ಅಲ್ಲಿ ನಾಟುವ ಬಗೆ ಯಾದರೂ ಹೇಗೆ? ಚಂದ್ರಾ, ನಿನ್ನ ಮಿತ್ರನ ಅನಿಷ್ಟ ಕಾಲು ಗುಣದ ಯೋಗದಿಂದ ಅವನು ಯಾವ ಯಾವ ದಾರಿಯಿಂದ ಹೋಗುವನೋ, ಆ ದಾರಿಯ ಎಡಬಲಗಳಲ್ಲಿ ಒಂದು ಹನಿ ನೀರು ಸಹ ಉಳಿಯಲಾರದು. ನಾನು ಸದಾ ಮಹಾಸಾಗರದ ನೀರನ್ನು ಶೋಷಿಸುತ್ತಿರುತ್ತೇನೆ; ನನ್ನ ಶೋಷಣದಿಂದ ದೊಡ್ಡ ಹೊಳೆಗಳ ಬತ್ತಿ ಬಯಲಾಗುವವು. ಇಂಥ ಅಪಾತ ದಾ ಕಾರನ ದಾರಿಯಲ್ಲಿ ಅದಾವನು ಕೆರೆಬಾವಿಗಳನ್ನು ತೋಡತೊ ಡಗುವನು? ಹಾಗು ಅವು ಅಲ್ಲಿ ಉಳಿಯುವ ಬಗೆಯಾದರೂ ಹೇಗೆ? ಮಿತ್ರಾ, ನನಗೆ ಅದಾವ ಅನುಕೂಲತೆಯ ಆಗುವ ಸಂಭವವಿಲ್ಲ; ಆದ್ದರಿಂದ ನಾನು ಬಿಸಿಲು-ಬಾಯಾಂಕಗಳನ್ನು ಲೆಕ್ಕಿಸದೆ ಒಂದೇಸವನೆ ದಾರೀಕ್ರಮಿಸುತ್ತಿರಬೇಕಾಗುತ್ತದೆ.

ನನ್ನ ಬಿಸಿಲ ತಾಪವು ತಮಗೆ ಆಗಬಾರದೆಂದು ಆ ಬಿಸಿಲ ನಿವಾರಣಾರ್ಥವಾಗಿ ತಮ್ಮ ತಲೆಯ ಮೇಲೆ ಕೊಡಿಯನ್ನು ಹಿಡಿ ದುಕೊಳ್ಳುವ ಒಂದು ಹೊಸಯುಕ್ತಿಯನ್ನು ಮನುಷ್ಯರು ಕಂಡು ಹಿಡಿದಿರುವರು! ಮಿತ್ರಾ, ಅವರ ಬುದ್ದಿಶಾಲಿತ್ಯವನ್ನು ಕಂಡು ನನಗೆ ಕ್ಷಣ ಹೊತ್ತು ಪರಮ ಸಂತೋಷವೆನಿಸುತ್ತದೆ. ರಾಜಮಹಾರಾಜರಂತೂ ಛತ್ರವನ್ನು ಹಿಡಿಯುವ ತೊಂದರೆಯು ಕಂಡ ತಮಗಾಗಬಾರದೆಂದು ಆ ಕೆಲಸಕ್ಕಾಗಿ ಬೇರೊಬ್ಬನನ್ನು ನಿಯೋಜಿಸಿ ಸುಖಬಡುತ್ತಾರೆ!! ನಾನೂ ಅವರ ಆ ಯುಕ್ತಿ ಯ ಲಾಭವನ್ನು ಮಾಡಿಕೊಳ್ಳುವ ಸಲುವಾಗಿ ನನಗೋಸ್ಕರ ಒಂದು ಸುದೀರ್ಘವಾದ ಛತ್ರವನ್ನು ಮಾಡಿಸಿದನು; ಹಾಗು
ಅದನ್ನು ಹಿಡಿಯುವ ಸಲುವಾಗಿ ಒಂದು ಸಂಬಳದ ಆಳನ್ನು ಸಹ ಗೊತ್ತು ಮಾಡಿದೆನು. ಆದರೆ ಮಿತ್ರಾ, ನನಗೆ ಶೀತಲತೆಯ ಸ್ಪರ್ಶವು ಕೂಡ ಆಜನ್ಮದಲ್ಲಾಗುವ ಯೋಗವಿಲ್ಲದ್ದರಿಂದ ಆ ಚಾಕರನಾದರೂ ನನಗೆ ಹೇಗೆ ಲಭಿಸಿಯಾನು? ಅವನು ಆ ಛತ್ರವನ್ನು ತಕ್ಕೊಂಡು ನನ್ನ ಸಮೀಪಕ್ಕೆ ಬರುತ್ತಿದ ಕೂಡ ಲೆ ಮೊದಲು ಆ ಛತ್ರವು ಸುಟ್ಟು ಬೂದಿಯಾಯಿತು; ಕ್ಷಣಾರ್ಧದಲ್ಲಿ ಅವನೂ ಸುಟ್ಟ ಬದನೇಕಾಯಂತಾಗಿ ಸತ್ತು ಹೋದನು.

“ಪರದುಃಖವು ಶೀತಲವಿರುತ್ತದೆ ೦ದು ಮಾನವರಲ್ಲಿ
ಒಂದು ನಾಣ್ಣುಡಿಯದೆ; ಆದರೆ ಛತ್ರ ಅಡಿಯುವ ಆ ಮನು ಷ್ಯನು ಸತ್ತದ್ದದರಿಂದ ಜಾಗೃತವಾದ ಈ ನಿನ್ನ ಮಿತ್ರ-ಸೂರ ನ ದುಃಖವು ಅವನಿಗೆ ಶೀತಲವಾಗಿ ತೋರಲಿಲ್ಲ. ಇಷ್ಟೇ ಅಲ್ಲ, ಆದರೆ ಪಾಪ! ಆ ಬಡವನ ಮರಣದಿಂದ ಈ ಸೂರ್ಯನಿಗೆ ಹೆಚ್ಚಾದ ಸಂತಾಪವಾಯಿತು.

ಈ ಪ್ರಕಾರದ ದುಃಖಾತಿರೇಕದ ಸ್ಮರಣದಿಂದ ಎಲ್ಲರಿ

ಗೂ ಸ್ವಾಭಾವಿಕವಾಗಿ ಉಂಟಾಗುವಂತೆ ಸೂರ್ಯನಿಗೂ ಒಂದು ತರದ ಬೆವರೂ ನಡುಗ ಹುಟ್ಟಿದವು; ಹಾಗು ಅವನ ಕಣ್ಣುಗಳಲ್ಲಿ ದುಃಖಾಶ್ರುಗಳು ಸಂಚರಿಸತೊಡಗಿದವು. ಆದರೆ ಸೂರ್ಯನ ಅತ್ಯುಷ್ಣ ಪ್ರಕೃತಿಯ ಮೂಲಕ ಆ ಬೆವರ ಹನಿಗಳೂ ಕಣ್ಣೀರುಗಳೂ ಅವನ ದೇಹದಿಂದ ಉದುರಿ ನೆಲಕ್ಕೆ ಬೀಳಲಿಲ್ಲ. ಅವು ಅಲ್ಲಿಂದಲೇ ಅಡಗಿಹೋದವು. ಮನದಣಿ ಕಣ್ಣೀರು ಹೋಗುವದರಿಂದ ದುಃಖವು ಕಡಿಮೆಯಾಗಿ ಸ್ವಾಭಾ ವಿಕವಾದ ಶಾಂತಿಯು ಮನುಷ್ಯರಿಗೆ ದೊರೆಯುತ್ತದೆ. ಆದರೆ ಆ ಸಾಧನವು ಕಡಸೂರ್ಯನಿಗೆ ಸಾಧ್ಯವಿಲ್ಲದ್ದರಿಂದ ಮಿತ್ರ 'ನ ಅಂತಃಕರಣ ವೃತ್ತಿಯು ಬೆಂದು ಬೆಂಡಾಯಿತು. ಅದನ್ನು
ನೋಡಿ ಭ್ರಾತೃದುಃಖದಿಂದ ಚಂದ ನಮನಸ್ಸು ವಿಶೇಷ ವಾಗಿ ಕಳವಳಗೊಂಡಿತು. ಮತ್ತು ಅವನು ಕಾರಣವಿಲ್ಲದೆ ಅತ್ತಿತ್ತ ಸುಳಿದಾಡುವ ಗಾಳಿಯ ಒಂದು ಸುಳುವಿಗೆ ಒಂದು ಬೀಸಣಿಕೆಯನ್ನು ತಕ್ಕೊಂಡು ಸೂರ್ಯನಿಗೆ ಗಾಳಿಬೀಸಲಿಕ್ಕೆ ಸೂಚಿಸಿದನು. ಚಂದ್ರನ ಸೂಚನೆಯನ್ನು ಮನ್ನಿಸಿ, ಆ ಗಾಳಿ ಯ ಸುಳುವು ಒಬ್ಬ ಪರಿಚಾರಿಕೆಯಂತೆ ತನ್ನ ಕೆಲಸವನ್ನು ಬಹು ಚನ್ನಾಗಿ ಮಾಡಿತು. ಅದರಿಂದ ಮಿತ್ರನಿಗೆ ಸ್ವಲ್ಪ ಸಮಾಧಾನವೆನಿಸಿತು. ಆದರೆ ಸ್ವಾಭಾವಿಕವಾಗಿ ತಣ್ಣಗಿದ್ದ ಆ ಗಾಳಿಯು ಕೂಡ ಕೆಲಹೊತ್ತಿನಲ್ಲಿ ಸೂರ್ಯನಿಗೆ ಬೆಚ್ಚಗಾ ದಂತ ತೋರಿತು; ಹಾಗು ಅದರಿಂದ ಅವನ ದುಃಖದ, ಹಾಗು ಸಂತಾಪದ ಜ್ವಾಲೆಗಳು ಒತ್ತರದಿಂದ ಏಳಹತ್ತಿದವು. ಆಗ ಅವನು ಆ ದುಃಖವನ್ನು ಸಹಿಸಲಾರದೆ ಚಂದ್ರನಿಗೆ ಹೇಳಿದನೇ ನಂದರೆ:-

ಚಂದ್ರಾ, ಮಾಡುವದೇನು? ಈ ದುಃಖದಿಂದ ಯಾ ವಾಗಲೂ ನನಗೆ ಸಂತಾಪವಾಗುತ್ತದೆ. ಆದರೆ ಆ ಸಂತಾಪ ವನ್ನು ಕಳಕೊಳ್ಳಲಿಕ್ಕೆ ನನ್ನಲ್ಲಿ ಒಂದೂ ಸಾಧನವಿಲ್ಲ. ಮನು ಷ್ಯರಿಗಾದರೆ ತುಸು ಸಂತಾಪವಾದರೂ, ಅವರು ಯಾವ ದೊಂದು ವಿಶಾಲವಾದ ಶೀತೋದಕದ ಜಲಾಶಯದಲ್ಲಿ ಮನದ ಣಿಯಾಗಿ ಈಸು ಬೀಳುತ್ತಾರೆ; ಮತ್ತು ಅದರಿಂದ ಅವರ ಸಂ ತಾಪವು ಪರಿಹುದು ಅವರಿಗೆ ಬಹಳ ಸಮಾಧಾನವೆನಿಸು ಇದೆ; ಆದರೆ ನನ್ನ ಹತ್ತಿರ ಆ ಸಾ ಧ ನ ವೂ ಇಲ್ಲ, ನನ್ನ ಕೆಳಗಿರುವ ಈ ಶೀತೋದಕದಿಂದ ತುಂಬಿದ ಬಹು ದೊಡ್ಡ ಸಮುದ್ರವು ಎಲ್ಲ ಕಡೆಗೂ ಪಸರಿಸಿರುತ್ತದೆ. ಅದನ್ನು ನೋಡಿದೊಡನೆಯೇ ಇದರಲ್ಲಿ ಒಮ್ಮೆಲೆ ದುಮುಕಿ ಬಿಡಬೇ ಕೆನ್ನುವ ಹಾಗೆನಿಸುತ್ತದೆ; ಹಾಗು ಇದರ ಈ ಅಗಾಧ
ಗಾಂಭೀರ್ಯವನ್ನೂ , ಅತ್ಯಂತ ವಿಸ್ತಾರವನ್ನೂ ಕಂಡು ಯಾ ನಾಗೊಮ್ಮೆ ಇದರಲ್ಲಿ ಮನದಣಿಯಾಗಿ ಸ್ನಾನ ಮಾಡೇನೋ ಎಂದು ಮನಸ್ಸಿನಲ್ಲಿ ಆಗಾಗ್ಗೆ ಮೋಹವುಂಟಾಗುತ್ತದೆ. ಇದ ರ ಶೀತಲತೆಯು ಅತ್ಯಂತ ಮೋಹಕ, ಹಾಗು ಚಿತ್ತಾಕರ್ಷಕ ವಾಗಿರುವದರಿಂದ ಆಕಾಶದೊಳಗಿನ ಈ ಅತ್ಯುನ್ನತ ಪ್ರದೇಶ ದಿಂದ ಈ ಸಮುದ್ರದೊಳಗೆ ಪಾರಿಕೊಂಡು ಯಾವದೊಂದು ದೊಡ್ಡ ಚಿನ್ನದ ಮೀನದಂತೆ ಯಾವಾಗಲೂ ಅಲ್ಲಿ ಈಸುತ್ತಿರ ಬೇಕೆಂದೂ, ಇಲ್ಲವೆ ತೋಫಿನೊಳಗಿಂದ ಹೊರಟ ಕಾದ ಕೆಂಪ ಗುಂಡಿನಂತೆ ನೀರನ್ನು ಕೆಯ್ಯುತ್ತ ಇತ್ತಿಂದತ್ತ ಅತ್ತಿಂದಿತ್ತ ಓಡಾಡುತ್ತಿರಬೇಕೆಂದೂ ನನಗೆನಿಸುತ್ತದೆ! ಬಹು ಎತ್ತರದ ಪ್ರದೇಶದಿಂದ ಹಾರಿದ ಮಾನದಿಂದ ಹಾರುವಿಕೆಯಾದರೂ ಅತಿ ಆಳವಾಗಿ ಹೋಗುವದೆಂದನ್ನು ವಂತೆ, ಆಕಾಶದೊಳಗಿನ ನನ್ನಿ ಅತ್ಯುನ್ನತ ಪ್ರದೇಶದಿಂದ ಹಾರಿದರೆ, ನಾನು ನಿಶ್ಚಯವಾಗಿ ಸಮುದ್ರದ ತಳವನ್ನು ಸೇರುವೆನು; ಮತ್ತು ಅಲ್ಲಿಗೆ ಹೋದ ಬಳಿಕ, ದುರ್ಯೋಧನನು ಸಮಂತಕದೊಳಗಿನ ಆ ಸರೋವ ರದ ಬುಡಕ್ಕೆ ಹೋಗಿ 2ಜಲಸ್ತಂಭವನ್ನು ರಚಿಸಿ ಹ್ಯಾಗೆ ಕುಳಿ ತಿದ್ದನೋ, ಹಾಗೆ ನಾನೂ ನನ್ನಲ್ಲಿಯ ಸಂತಾಪ ಶಾಂತ ಮಾಗುವ ವರೆಗೆ ಅಲ್ಲಿಯೇ ಈ ಸಮುದ್ರದ ಬುಡದಲ್ಲಿ ಹುಟ್ಟಿ ದ್ದ ಯಾವದೊಂದು ಗಿಡಕ್ಕಾಗಲಿ, ಬಳ್ಳಿಗಾಗಲಿ ಗಟ್ಟಿಯಾಗಿ ಅವಚಿಕೊಂಡು ಕೊಡಬೇಕೆನ್ನುತ್ತೇನೆ. ಆದರೆ ಚಂದ್ರಾ, ನನ್ನ ದೈವದಲ್ಲಿ ಈ ಸುಖವೂ ಇಲ್ಲವಲ್ಲ? ನನ್ನೆದುರಿಗಿನ ಈ ಸಮು ದ್ರದೊಳಗಿನ ಶೀತ ಜಲವನ್ನು ನಾನು ಬರೇ ಕಣ್ಣಿನಿಂದ ನೋಡ ಬೇಕು ಮಾತ್ರ! ಹಾಗು ಮನದೊಳಗೆ ತಳಮಳಿಸಬೇಕು. ಇಷ್ಟೇ ನನ್ನ ಹಣೆಯಲ್ಲಿ ಬರೆದಿರುವದೆಂದು ನನಗೆ ತೋರು ಇದೆ. ಕೆಲವು ಮತಿಮಂದ ಜನರು ತಿಳಿದಿರುವದೇನಂದರೆ,
ಪ್ರತಿ ದಿವಸ ಸಾಯಂಕಾಲದಲ್ಲಿ ಅರುಣಾಚಲ ಪರ್ವತದ ಎತ್ತ ರಪ್ರದೇಶದಿಂದ ನಾನು ಪಶ್ಚಿಮ ಸಮುದ್ರದಲ್ಲಿ ಹಾರಿಕೊಳ್ಳು ತೇನೆಂದೂ, ಹಾಗು ಸಂಪೂರ್ಣ ರಾತ್ರಿಯನ್ನು ಅ ಸಮುದ್ರ ದಲ್ಲಿ ವಿಹರಿಸುತ್ತ ಕಳೆದು ವಿಶ್ರಾಂತಿ ಹೊಂದಿ ಹರುಷಗೊಂಡು ಮರುದಿವಸ ಬೆಳಿಗ್ಗೆ ಉದಯಾಚಲದ ದಿನ್ನೆ ಯನ್ನೇರಿ ಮೇಲಕ್ಕೆ ಬರುತ್ತೇನೆಂದೂ ಅನ್ನು ತ್ತಾರೆ. ಆದರೆ ಈ ಕಲ್ಪನೆಯು ಅವರ ಬುದ್ಧಿ ಮಾಂದ್ಯತ್ವವನ್ನು ಮಾತ್ರ ವ್ಯಕ್ತಗೊಳಿಸುತ್ತದೆ. ವಿತ್ತಾ, ಅಂಥ ಸುದೈವವು ನನಗೆಲ್ಲಿಯದೆ? ಜಗತ್ತಿನೊಳಗಿನ ತೀರ ಕ್ಷುದ್ರ ಅಂತಃಕರಣದ ಜನರು ಸಹ ಅವಶ್ಯವಿದ್ದಾಗ ಹಾಗು ಪ್ರಸಂಗ ಎಶೇಷದಲ್ಲಿ ಒಬ್ಬರಿಗೊಬ್ಬರು ಸಹಾಯಮಾಡು ತಾರೆ; ಆದರೆ ಜಗತ್ತಿನಲ್ಲಿ ಮಹಾಭೂತಗಳೆಂದೆನಿಸಿಕೊಳ್ಳುವ ನಾವು ಎಂದೂ ಪರಸ್ಪರರಿಗೆ ಸಹಾಯ ಮಾಡುವಂತಿಲ್ಲ. ನಿನ್ನ ತಣ್ಣೀರಿನಲ್ಲಿ ಸ್ನಾನಮಾಡುವೆನೆಂದು ನಾನು ಒಮ್ಮೆ ಸಮುದ್ರವನ್ನು ಕುರಿತು ಕೇಳಿಕೊಂಡಿದ್ದೆನು; ಆದರೆ ಅದು ಬರಬೇಡರೆಂದು ಖಂಡಿ ತವಾಗಿ ಹೇಳಿಬಿಟ್ಟಿತು.ಲಗ ಸಮುದ್ರವು ನಿರ್ದಯವಾಗಿ ನುಡಿದ ದೈನಂದರೆ,-“ದೂರಿನಿಂದಲೇ ನೀನು ನನ್ನ ಜಲರಾಶಿಯನ್ನು ಶೋಷಿಸುತ್ತಿರುವದಷ್ಟು ಸಾಕಾಗಿದೆ. ಸ್ನಾನ ಮಾಡಲಿಕ್ಕೆಂದು ನೀನು ಒಮ್ಮೆ ನನ್ನ ಬಲ ಶರೀರದಲ್ಲಿ ಪ್ರವೇಶದೆಯೆಂದರೆ ತೀರಿತು; ಅಷ್ಟರಲ್ಲಿ ನೀನು ನನ್ನನ್ನು ಸುಟ್ಟ ಸೂರೆಂ ಡೇಬಿಡುವೆ. ಆದ್ದರಿಂದ ನೀನು ನನ್ನಿಂದ ದೂರಿರುವದೇ ಯೋ ಗ್ಯವು! ಅಗಸ್ತ್ರ ಖುಷಿಯು ಒಮ್ಮೆ ತನ್ನ ಒಂದು ಆಚಮ ನದಿಂದ ನನ್ನನ್ನು ಬತ್ತಿಸಿ ಬಿಟ್ಟದ್ದನು; ರಾಗು ಶ್ರೀ ರಾಮ ಚ೦ದ್ರನು ತನ್ನ ಬಾಣದಿಂದ ನನ್ನನ್ನು ಗಾಯಗೊಳಿಸಿದ್ದನು. ಆ ವೇದನೆಗಳನ್ನು ನಾನು ಇನ್ನೂ ಮರೆತಿರುವದಿಲ್ಲ. ಹೀಗಿ ದ್ದು, ಈಗ ನಿನಗೆ ನನ್ನ ಬಲದಲ್ಲಿ ಸ್ನಾನಕ್ಕೆ ಅಪ್ಪಣೆಕೊಟ್ಟು,
ನಾನು ನನ್ನನ್ನು ಪ್ರನಃ ಸುಡಿಸಿಕೊಂಡು ದುಃಖಪಡಲೇನು? ಇದರ ಹೊರತು ನಿನಗೆ ಬೇಡೆನ್ನ ಲಿಕ್ಕೆ ಮತ್ತೂ ಒಂದು ಕಾರ ಣವಿರುತ್ತದೆ. ಅದೇನೆಂದರೆ, ನನ್ನ ಅಂತಃಶರೀರದಲ್ಲಿ ಈ ಮೊದಲೇ ಒಂದು ಅಗ್ನಿಯು ಸೇರಿಕೊಂಡಿರುತ್ತದೆ. ಆ ವಡವಾ ನಲದಿಂದ ನನ್ನ ಅಂತರಂಗವು ಸುಡುವದರಿಂದ ನಾನು ಪ್ರತಿ ನಿತ್ಯ ಎಷ್ಟು ವಿಹ್ವಲನಾಗುತ್ತೇನೆಂಬದು ಸರ್ವ ಶ್ರುತವಿದೆ. ಅಂದಮೇಲೆ ನಿನ್ನ ೦ಧ ಮತ್ತೊಂದು ಅಗ್ನಿ ಯ ಗುಂಡಿಗೆ ನನ್ನ ಅಂತರಂಗದಲ್ಲಿ ಇಂಬುಗೊಡಬೇಕೆಂಬದು ನನಗೆ ಕೊಂಚ ವೂ ಉಚಿತವೆನಿಸುವದಿಲ್ಲ.”

ಸಮುದ್ರಣಾಧನ ಈ ಪ್ರತ್ಯುತ್ತರವನ್ನು ಕೇಳಿ, ನಾನು ನಿರುತ್ತರನಾದೆನು. ನನ್ನಿಂದ ಪರರಿಗೆ ಈ ಪರಿ ಮರ ಣಾಂತ ದುಃಖವಾಗುತ್ತಿದ್ದರೆ, ನಾನು ಅವರನ್ನು ಆ ದುಃಖಕ್ಕೊಳಪಡಿಸದೆ, ನನ್ನ ದುಃಖವನ್ನು ನಾನೇ ಸಹಿಸುತ್ತ ಸುಮ್ಮನಿರುವದು ಲೇಸೆಂದು ಮನಸ್ಸಿನಲ್ಲಿ ಬಗೆದು, ಅಂದಿನಿಂದ ನಾನು ಸ್ನಾನದ ಆ ಉಸಾಬರಿಯನ್ನೇ ಬಿಟ್ಟು ಟ್ಟಿರುವೆನು, ಎಂದು ನುಡಿದ ಬಳಿಕ ದುಃಖಾತಿರೇಕದಿಂದ ಕೆಲಹೊತ್ತಿನವರೆಗೆ ಸೂರ್ಯನ ಬಾಯಿಂದ ಶಬ್ದಗಳೇ ಹೊರಡದಾದವು. ಆಗ ಅವನು ರಥದೊಳಗಿನ ತನ್ನ ಪೀಠದ ಲೋಡಿಗೆ ಒರೆದುಕೊಂಡು ಕುಳಿತು ತುಸು ವಿಶ್ರಾಂತಿಯನ್ನು ಅನುಭವಿಸಹತ್ತಿದನು.

iii

ಒಡೆಯನ ಆ ಅನುಕಂಪನೀಯ ಸ್ಥಿತಿಯನ್ನು ಕಂಡು ಅರುಣನು ಸೂರ್ಯನ ದುಃಸ್ಥಿತಿಯ ಆ ಕಥೆಯನ್ನು ಮುಂದೆ ಸಾಗಿಸಿದನು. ಆಗ ಅರುಣನು ಚಂದ್ರನನ್ನು ಕುರಿತು-----"ಶಶದ ರಾ, ಈ ಸಂಕಟಪರಂಪರೆಗಳಿಂದ ನಮ್ಮ ಒಡೆಯನ ಅವಸ್ಥೆ
ಏನಾಗಿದೆಯೆಂಬದನ್ನು ನೀನು ಕಣ್ಣಾರೆ ನೋಡುತ್ತಲೇ ಇರುವೆ, ಅವನ ಕೂಡ ನಾವೂ ಈ ಸಂಕಟಗಳಿಗೀಡಾಗಿದ್ದೇವೆ, ಅದರೆ ಮಾಡುವದೇನು? ಸ್ವತಃ ಯಜಮಾನನ ಕಷ್ಟಗಳೇ ನಿವಾರಣವಾಗದಿರುವಲ್ಲಿ, ನಮ್ಮ ೦ಧ ಆತನ ಸಾರಥಿ ಮೊದಲಾದ ವರ ಕಷ್ಟದ ಪರಿಮಾರ್ಜನ ಮಾಡುವವರಾರು? ನನ್ನ ಅವಸ್ಥೆ ಯನ್ನು ನೋಡು. ಹೇಳಿ ಕೇಳಿ ನಾನು ಹೆಳವನು; ಸುಮ್ಮ. ನೆ ರಥದಲ್ಲಿ ಕುಳಿತು ಕುದುರೆಗಳನ್ನು ಹೊಡೆಯುವ ಕೆಲಸವು ನನ್ನ ಕಡೆಗಿದೆ. ಅಂತೇ ನಾನು ರಾ ಗಾದರೂ ಈ ಕೆಲಸ ವನ್ನು ಈ ವರೆಗೂ ಮಾಡುತ್ತಿರುತ್ತೇನೆ; ಆದರೆ ರಧದಲ್ಲಿ ಒಂದೇ ಸವನೆ ಕೂತು ಕೂತು ಸಹ ನನ್ನ ವೆಯ್ಯು ತೀರ ನೋಂದು ಹೋಗಿದೆ. ಹೀಗಿದ್ದರೂ ನನಗೆ ಬರೇ ಕೂತು ಕೊಂಡೇ ಕೆಲಸ ಮಾಡುವದದೆ; ಆದರೆ ನಮ್ಮ ರಾದ ಈ. ಕುದುರೆಗಳ ಕಡೆಗೆ ನೋಡಿದರೆ, ನನ್ನ ಹೃದಯವು ವಿದಾರಣ ವಾಗಿ ಹೋಗುತ್ತದೆ; ದಾಗು ನನ್ನ ಹೃದಯವು ದುಃಖ ದಿಂದ ಹೇಗೆ ವಿದಾರಣವಾಗುತ್ತದೆ, ಹಾಗೆಯೇ ನನ್ನಿ ಕುದು ರೆಗಳ ಹೃದಯಗಳು ಸತತವಾಗಿ ಓದುವ ಪುಶ್ರಮದಿಂದ ವಿದಾರಣವಾಗುತ್ತಿರಬಹುದೆಂದು ನನಗೆ ತೋರುತ್ತದೆ. ಆ ಒಡಪ್ರಾಣಿಗಳಿಗೆ ಒಂದೇ ಸಮನೆ ಓಡಬೇಕಾಗುತ್ತದೆ. ಅವು ಗಳಿಗೆ ವಿಶ್ರಾಂತಿಯೆಂಬುದು ಗೊತ್ತೇ ಇಲ್ಲ; ಉಳಿದವರ ರಥ ಗಳ, ಹಾಗು ಟಾಂಗಾಗಳ ಕುದುರೆಗಳು ಕಾಲಕಾಲಕ್ಕೆ ನೀರು ಕುಡಿಯತ್ತವೆ, ಹುಲ್ಲು ತಿನ್ನುತ್ತವೆ; ಮತ್ತು ವಿಶ್ರಾಂ ತಿಯನಂತರ ಹೊಸ ಹುರುಪಿನಿಂದ ತಮ್ಮ ಕೆಲಸಕ್ಕೆ ಒಯ್ಯಲ್ಪ ಡುತ್ತವೆ. ಆದರೆ ಸೂರ್ಯನ ಈ ಕುದುರೆಗಳಿಗೆ ಮೇವು, ನೀರು ಮುಂತಾದವುಗಳೊಂದೂ ಸಿಗುವದಿಲ್ಲ. ಉ ದಯಾಚಲ ದ ತಪ್ಪಲಿನಲ್ಲಿ ಹುಟ್ಟಿದ ಎಳೆ ಎಳೆ ಕರಿಕೆಯನ್ನು ತಿನ್ನು ವದ
ಕ್ಕಾಗಿ, ಅವು ನನ್ನ ಕೈಯ ಲಗಾಮಿನ ಎಳತವನ್ನು ಕೂಡ ಲೆಕ್ಕಿಸದೆ ತಮ್ಮ ಗೋಣುಗಳನ್ನು ತುಸು ಬೊಗ್ಗಿ ಸ ಹತ್ತುತ್ತವೆ; ಆದರೆ ಸುಮಾರು ಮೂವತ್ತು ಗಳಿಗೆಗಳಲ್ಲಿ ಸಂ ಪೂರ್ಣ ಗೋಲಾರ್ಧವನ್ನು ದಾಟುವದಾಗಲಿಕ್ಕಿಲ್ಲೆಂಬ ಅಂಜಿ ಕೆಯಿಂದ ನಾನು-ಅವುಗಳ ನಿರ್ದಯನಾದ ಸಾರಥಿಯು - ಅವು ಗಳ ಬೆನ್ನ ಮೇಲೆ ಯಾವಾಗ ಈ ಚಬಕದಿಂದ ಚನ್ನಾಗಿ ಹೊಡೆ ಯುವೆನೋ, ಆ ಕಾಲಕ್ಕೆ ಈ ಕಬಕ ದ ಪೆಟ್ಟು ಕುದುರೆಗಳ ಮೈಗೆ ಎಷ್ಟು ಬಲವಾಗಿ ತಾಕುವದೋ, ಅದಕ್ಕಿಂತಲೂ ನೂ ರಾರು ಪಟ್ಟು ಹೆಚ್ಚು ಅದು ನನ್ನ ಅಂತರಂಗಕ್ಕೆ-ಹೃದಯಕ್ಕೆ ತಗಲುವದು! ಆದರೆ ಅದಕ್ಕೆ ನಾನೇನು ಮಾಡಲಿ? ಆ ಪಾತ ಕದ ದೋಷವು ನನ್ನ ಕಡೆಗೆ ಯತ್ನಿಂಹವೂ ಇಲ್ಲ; ಆದರೆ ಇದಕ್ಕೂ ಹೆಚ್ಚು ನಿಷ್ಟುರತೆಯನ್ನು ನಾನು ಪ್ರತಿದಿವಸ ಮಧ್ಯಾಹ್ನ ದಲ್ಲಿ ತಾಳಬೇಕಾಗುತ್ತದೆ. ಮಧ್ಯಾ: ಸ್ನ ದಲ್ಲಿ ಬಿಸಿಲು ತಾಸ ದಿಂದ ಸರ್ವತ್ರದಲ್ಲಿಯ ಉ೨ ಉರಿ ಆಗುತ್ತಿರುತ್ತದೆ. ಆ ಕಾಲಕ್ಕೆ..... ಹೀಗೆಂದು ನುಡಿದು ಅರುಣನು ತುಸು ತಡೆದು ತನ್ನ ಕುದುರೆಗಳ ಮೈ ಬೆವರನ್ನು ಒರಿಸಿ, ಅವುಗಳನ್ನು ಜಪ್ಪ ರಿಸಿ ಪುನಃ ಅವನು ಹೇಳುತ್ತಾನೆ. “ಚಂದ್ರಾ, ನಮ್ಮಿ ಕುದು ರೆಗಳ ಸ್ಥಿತಿಯು ಬಹಳ ಕರುಣಾಸ್ಪದವಾಗಿರುತ್ತದೆ. ಓಡು ವಾಗ ಅವು ತನ್ನ ಮೊಲೆಗಳನ್ನು ಸ್ವಾಭಾವಿಕವಾಗಿ ಕೆಳಗಡೆ ಭೂಮಿಯ ಕಡೆಗೆ ಮಾಡಿ ಓಡುತ್ತಿರುತ್ತವೆ; ಅದರಿಂದ ಸೃಥ್ವಿತಲದ ಮೇಲೆ ಏನೇನು ನಡೆದಿರುತ್ತದೆಂಬುದು ಸಹಜ ವಾಗಿಯೇ, ಅವುಗಳ ಕಣ್ಣಿಗೆ ಬೀಳುತ್ತದೆ. ಅವು ಮಧ್ಯಾಹ್ನ ಹೊತ್ತಿನಲ್ಲಿ ಭೂಮಿಯ ನಾಲ್ಕೂ ಕಡೆಗೆ ನೋಡುತ್ತವೆ; ಆ ಕಾಲಕ್ಕೆ ಎಲ್ಲಿಯ ರಥವಾಗಲಿ, ಟಾಂಗೆಯಾಗಲಿ, ಕುದು
ರೆಯಾಗಲಿ ಅಡ್ಡಾಡುತ್ತಿರುವದು ಅವುಗಳ ಕಣ್ಣಿಗೆ ಕಾಣು ವದಿಲ್ಲ. ಎಲ್ಲ ರಥಗಳೂ, ಟಾಂಗಗಳೂ ಮಧ್ಯಾಹ್ನ ಕಾಲ ದಲ್ಲಿ ಯಾವದೊಂದು ಗಿಡದ ನೆಳಲಿನಲ್ಲಿ, ಇಲ್ಲವೆ ನದೀ ತೀರದ ಲ್ಲಿ ವಿಶ್ರಾಂತಿಗಾಗಿ ಬಿಡಲ್ಪಟ್ಟಿರುತ್ತವೆ; ಮತ್ತು ಅವುಗಳ ಕುದು ರೆಗಳು ಮನದಣಿಯಾಗಿ ನೀರು ಕುಡಿಯುತ್ತಿರುತ್ತವೆ, ನೀರಲ್ಲಿ ಮುಳುಗಿ ಏಳು ತ್ತಿ ರು ವೆ; ಇಲ್ಲವೆ ಮೇವು-ದಾಣಿ ಗಳನ್ನು ತಿಂದು ಕಣ್ಣು ಮುಚ್ಚಿ, ವಿಶ್ರಾಂತಿ ಸೌಖ್ಯವನ್ನು ಪಡೆಯುತ್ತಿರುತ್ತವೆ. ಭೂಮಿಯ ಮೇಲಿನ ಆ ಪಶುಗಳ ಭಾಗ್ಯವನ್ನು ನೆನೆದು ಈ ನಮ್ಮ ಜಗತ್ರಕಾಶಕನಾದ ಸೂ ರ್ಯನಾರಾಯಣನ ರಥದ ಅಶ್ವಗಳು ತಮ್ಮ ದುರ್ಭಾಗ್ಯವನ್ನು ಸ್ಕರಿಸಿ, ಬಹು ದೀರ್ಘಗಳಾದ ಉಗುರುಗಳನ್ನು ಬಿಡಹತ್ತು ಇವೆ. ಭೂಮಂಡಲದೊಳಗಿನ ಕುದುರೆಗಳು ಮಧ್ಯಾಹ್ನ
ದಲ್ಲಿ ನೀರು ಕುಡಿಯುವದನ್ನು ಕಂಡು, ತಾವೂ ಆಗ ನೀರು ಕುಡಿಯಬೇಕೆಂದು ಈ ಬಡಪ್ರಾಣಿಗಳು ಇಚ್ಚಿಸುತ್ತವೆ. ಆದರೆ ಆ ಕಾಲಕ್ಕೆ ಇವು ಸೂರ್ಯನ ರಥದ ಕುದುರೆಗಳಾದರೂ ಒಟ್ಟಿನಲ್ಲಿ ಇವು ಪಶುಗಳೇ ಇರುವದರಿಂದ ಇವು ಸಹಜವಾ ಗಿಯೇ ಬಹು ಕಷ್ಟದಿಂದ ಮೋಸ ಹೋಗುತ್ತವೆ! ಈ ಕುದು ರೆಗಳು ಆಕಾಶದಲ್ಲಿ ಒತ್ತರದಿಂದ ಓಡುತ್ತಿರುವಾಗ ಇವುಗಳ ಸುತ್ತ ಮುತ್ತು ಈ ನೀಲಿಬಣ್ಣದ ಆಕಾಶವು ಸರ್ವತ್ರ ದಲ್ಲಿಯೂ ವ್ಯಾಪಿಸಿರುವದರಿಂದ, ಇದು ಯಾವದೊಂದು ವಿಸ್ತ್ರ ತಜಲಾಶಯವಿರುವದೆಂದು ಇವುಗಳಿಗೆ ಭ್ರಮೆಯುಂಟಾಗು ಇದೆ; ಮತ್ತು ನಮ್ಮಿ ಸೂರ್ಯನ ಕಿರಣಗಳಿಂದುಂಟಾ ಗುವ ಮೃಗಜಲದ ತೆರೆಗಳು ಭೂಮಿಯ ಮೇಲೆ ಹರಿಣಗ ಳನ್ನು ಹೇಗೆ ಮೋಸಗೊಳಿಸುವವೋ, ಹಾಗೆಯೇ ಆ ಮೃಗ ಜಲಗಳ ತೆರೆಗಳು ಈ ಆಕಾಶದಲ್ಲಿ ನಮ್ಮನ್ನೂ, ನಮ್ಮ ಕುದು
ಗಳನ್ನೂ ಆಗಾಗ್ಗೆ ಮೋಸಗೊಳಿಸಿ ನಿರಾಶೆಪಡಿಸುತ್ತವೆ. ಇಗೋ, ತೆರೆಗಳು ಕಾಣಹತ್ತಿದವು, ಈಗ ನೀರು ಬಂದಾವು, ಇನ್ನು ಮೇಲೆ ನಮ್ಮ ಬಾಯಾರಿಕೆಯು ಖಂಡಿತವಾಗಿ ಶಾಂತವಾದೀ ತೆಂದು ಅನ್ನು ಇನ್ನು , ಈ ಕುದುರೆಗಳು ಹ್ಯಾಗೆ ಹೆಚ್ಚು ಹೆಚ್ಚು ಓಡಹತ್ತುವವೋ, ಪಾಗೆ ಈ ನೀಲವರ್ಣದ ಆಕಾಶ ಸಮುದ್ರದೊಳಗಿನ ಮೃಗಜಲದ ತೆರೆಗಳಾದರೂ ಹಿಂದೆ ಹಿಂದ ಕೈ ಸರಿಯುತ್ತ ಹೋಗುತ್ತವೆ. ಈ ಪ್ರಕಾರ ಕುದುರೆಗಳು ಮೋಸಹೊಂದಿ ನಿರಾಶೆಪಡುತ್ತಿರುವಾಗ ಅವುಗಳ ಮೈಯ ಬೆವರ ಹನಿಗಳೂ, ನನ್ನ ಕಣ್ಣುಗಳೊಳಗಿನ ಅಶ್ರುಗಳೂ ಒಂದೇ ಸವನೆ ಧಾರೆಗಟ್ಟಿ ಹರಿಯುತ್ತಿರುತ್ತವೆ. ಆದರೆ ಮಾಡುವದೇನು? ದುರ್ದೈವವು ಯಾರಿಗೂ ಬಿಟ್ಟಿಲ್ಲ! ಸೂರ್ಯ ರಥದ ಕುದುರೆಗೆ ಳಾದ್ದರಿಂದ ತಾವು ಭೂಮಂಡಲದೊಳಗಿನ ಕುದುರೆಗಳಿಗಿಂತ ಅದ್ವಿತೀಯ ಪಶುಗಳೆಂಬ ಅಭಿಮಾನವು ಈ ಮೂರ್ಖಪಶುಗ ಆಗೆ ಆಗಾಗ್ಗೆ ಉಂಟಾಗುತ್ತದೆ. ಆದರೆ ಪೃಥ್ವಿಯ ಮೇಲಿನ ಕುದುರೆಗಳೇ ಅಲ್ಲ, ಕತ್ತೆಗಳಿಗೆ ಸಿಗುವಷ್ಟು ಮೇವು-ದಾಣಿ ಗಳು ಸಹ ಸಿಗದೆ, ಸೂರ್ಯನ ರಥದ ಕುದುರೆಗಳೆಂದು ರಣ ಗುಟ್ಟುವ ಬಿಸಿಲಿನಲ್ಲಿ ಒದ್ದಾಡುವ ಬಹುಮಾನವು ಮಾತ್ರ ತಮಗೆ ಸಂಪೂರ್ಣವಾಗಿ ಲಭಿಸಿರುವದೆಂಬದು ಪಾಪ! ಆ ಪಶುಗಳಿಗೇ ಗೊತ್ತು!! ನನ್ನ ಕುದುರೆಗಳು ಹೀಗೆ ಯಾವಾಗಲೂ ಪೇಚಾಡುತ್ತಿರುತ್ತವೆ. ಮಳೆಗಾಲದ ಯಾವ ದೊಂದು ದಿವಸ ಇವುಗಳಿಗೆ ತುಸು ನೀರಿನ ಸ್ಪರ್ಶವು ಆಗು ಇದೆ. ಎಲ್ಲ ಮೇಘಗಳು ಬಹುಶಃ ಅ೦ಜುಬುರುಕ ಸ್ವಭಾ ವದವೇ ಇರುತ್ತವೆ. ಅದರಿಂದ ಅವು ನಮಗೆ ಹೆದರಿ, ದೂರ ದೂರಿಂದಲೇ ಅಡ್ಡಾಡುತ್ತಿರುತ್ತವೆ. ಯಾವದೊಂದು ಘನ ವಾದ ಮೇಘದ ಕೆಲವು ಭಾಗವು ನಮ್ಮೆದುರಿಗೆ ಬಂದು ಅದ
ಕೈ ತಾಕಿ, ರಬರಧದ ಗಾಲಿಗಳ ಅಚ್ಚು ಕೊಂಕಬಾರದೆಂ ತ, ಇಲ್ಲವೆ ಆ ರಥವು ಒಗ್ಗಾಲಿಯಾಗಿ ಬೀಳಬಾರದೆ ತಲೂ, ನಮ್ಮ ಹಾದಿಯನ್ನು ಯಾವಾಗಲೂ ಸ್ವಚ್ಛ ಹಾಗು ನಿರ್ಧಾಸ್ಯವಾಗಿಡುವ ಕೆಲಸದ ಮೇಲೆ ನಿಯಮಿಸಿದ ಗಾಳಿದೇ ದನು ಆ ಮೇಘಗಳನ್ನು ತನ್ನ ಪರುಗಾಳಿಯೆಂಬ ಕಸಬೊರಿಗೆ ಯಿಂದಾಗಲಿ, ಸಂಕಿಯಿಂದಾಗಲಿ ದೂಡಿ ಬಿಡುವ ದಕ್ಷತೆ ಯನ್ನು ವಹಿಸಿರುತ್ತಾನೆ. ಆದರೆ ಅವನ ದೃಷ್ಟಿ ತಪ್ಪಿಸಿ ಯಾವ ದೊಂದು ಕಲ್ಲೆದೆಯು ಮೇಘವು ನಮ್ಮ ಸುದೈವದಿಂದ ನಮ್ಮ ದಾರಿಯಲ್ಲಿ ನಮಗೆ ಗಂಟು ಬಿದ್ದರೆ, ಹಾಗು ನಮ್ಮ ಸುದೈವ ದಿಂದ ನಮ್ಮ ಯಜಮಾನನ ದೃಷ್ಟಿಯು ಅದರ ಮೇಲೆ ಬೀಳದಿದ್ದರೆ, ಈ ನಮ್ಮ ರಥದ ಕುದುರೆಗಳು ಅತ್ಯಂತ ಹಸಿದ ಶಾಚಿಗಳಂತೆ ಆ ಮೇಘದ ಮೈ ಮೇಲೆ ಒಮ್ಮೆಲೆ ಏರಿ ಹೋಗುತ್ತವೆ; ಆ ಮೇಘದ ಶರೀರದಲ್ಲಿ ಸೇರುತ್ತವೆ; ಆದ ನ್ನು ತುಂಡು ತುಂಡಾಗಿ ಮಾಡಿಬಿಡುತ್ತವೆ; ಅದರೊಳಗಿನ ತಣ್ಣೀರನ್ನು ಗಟ ಗಟವೆಂದು ಕುಡಿಯುತ್ತವೆ; ಅದರಲ್ಲಿಯ ಆಣೇಕಲ್ಲುಗಳನ್ನು ಕೂಡ ಕಡವೆಂದು ಕಡಿದು ತಿನ್ನುತ್ತವೆ; ಮತ್ತು ಆ ಮೇಘದಿಂದ ಯವರೊಂದು ಕಾರಂಜಿಯ ತುಂ, ತುರವನಿಗಳಂತೆ ಬಹು ಎತ್ತರದಿಂದ ಸಳಸಳವೆಂದು ಸಾರುವ ಹಲವು ಜಲಧಾರೆಗಳ [ವಿರುದ್ಧ ಮಳೆಯ ಕೆಳಗೆ ಕ್ಷಣ ಹೊತ್ತು ನಿಂತು ಈ ಕುದುರೆಗಳು ತಮ್ಮ ಸಂತಸ್ತ ದೇಹಗಳಗೆ ಸಂತರ್ಪಣವನ್ನು ಮಾಡಿಸುತ್ತಿರುತ್ತವೆ! ಆ ವೇಳೆಯಲ್ಲಿ ಇವುಗಳ ಸಮಾಧಾನವಾಗುವದನ್ನು ನೋಡಿ, ನನಗೂ ಸಮಾ ಧಾನವಾಗುತ್ತದೆ. ಆಗ ಇವುಗಳ ವೇಗವು ತುಸು ಕಡಿಮೆ ಯಾದರೂ ನಾನು ಇವುಗಳಿಗೆ ಚ ಬಕದಿಂದ ಹೊಡೆಯುವದಿಲ್ಲ
ಈ ಪ್ರಕಾರ ಆರುಣನ ಭಾಷಣವು ನಡೆದಿರಲು, ಸೂ ರ್ಯನಿಗೆ ತುಸು ತುಸು ಜಾಗ್ರತೆಯಾಗಹತ್ತಿತ್ತು; ಅರುಣನು ನಡೆಸಿದ ಜಲವರ್ಣನೆಯು ಕೇಳಿಸುತ್ತಿದ ಬಳಿಕಂತ ಅವನು ಸಂಪೂರ್ಣವಾಗಿ ಎಚ್ಚತ್ರನು. ಸೂರ್ಯನು ಹೀಗೆ ಬಾಗ್ರತ ನಾದದ್ದು ಆರುಣನಿಗೆ ತಿಳಿಯಲು ಅವನು ತನ್ನ ಭಾಷಣವನ್ನು ಅಲ್ಲಿಗೇ ನಿಲ್ಲಿಸಿಬಿಟ್ಟನು.

iv

ಬಳಿಕ ಸೂರ್ಯನು ಪನಃ ಚಂದ್ರನನ್ನು ಕುರಿತು, ------ ಚಂದ್ರಮಾ, ಅರುಣನು ಇದೀಗ ವರ್ಣಿಸಿದ ಪ್ರಸಂಗವು ಪ್ರ ತ್ಯಕ್ಷ ಒದಗಿರುವ ಕಾಲಕ್ಕೆ ಅಪ್ಪಿ ತಪ್ಪಿ ನಮ್ಮ ಹಾದಿಯಲ್ಲಿ ತಡಹಾಯು, ಆ ಪೀಫರ ಸಮಾಗಮದಿಂದ ನನ್ನ ರಥದ ಕುದುರೆಗಳು ಅದರ ಜಲ ಸಂಯದಲ್ಲಿ ನುಸಿದು, ವಿಶೇಷ ವಾದ ಆನಂದ ಸಾಮ್ರಾಜ್ಯದಲ್ಲಿ ಅಕಸ್ಮಾತ್ತಾಗಿ ಪ್ರವೇಶಿಸಿ ದಾಗ-ನನ್ನ ಮನಸ್ಸು ಆ ಸುಖಸಾಮ್ರಾಜ್ಯದ ಪಾಲುಗಾ ರಾಗಕ್ಕೆ ಹಾತೊರೆಯುತ್ತದೆ; ಹಾಗು ಆ ಜಲಸಮುದ್ಧ ಯದಲ್ಲಿಯ ಒಂದು ಕಣವಾದರೂ ನನಗೆ ಲಭಿಸೀತೇನೆಂಬ ಉತ್ಕಟೇಚ್ಛೆಯ ಲೋಭದಿಂದ ನಾನು ನನ್ನ ಕರಗಳನ್ನು ಮು೦ ದಕ್ಕೆ ಚಾಚುತ್ತೇನೆ; ಆದರೆ ಆಗ ನನ್ನ ಅಖಂಡ ದುರ್ದೈ ವವು ದೂತ್ತೆಂದು ನನ್ನ ಎದುರಿಗೆ ಬಂದು ನಿಲ್ಲುವದರಿಂದ ನಾನು ನನ್ನ ಕೈಗಳನ್ನು ಮುಂದೆ ಚಾಚುವೆನೋ ಇಲ್ಲವೋ, ಇಷ್ಟರಲ್ಲಿಯೇ ಆ ತುಪಾರಗಳು, ಅದೇಕೆ ಆ ಸಂಪೂರ್ಣ ಜಲ ಸಮುಚ್ಚಯವು ಹೇಳಹೆಸರಿಲ್ಲದಾಗುವದು! ಆಗ ನನ್ನಿ ಕುದುರೆಗಳು ತಮ್ಮ ಗೋಣುಗಳನ್ನು ಹಿಂದಕ್ಕೆ ಬೊಗ್ಗಿಸಿ, ನನ್ನನ್ನು ಒಳ್ಳೇ ಸಿಟ್ಟಿನಿಂದ ನೋಡತೊಡಗುತ್ತವೆ. ಈ ಪ್ರಕಾ ರದ ಅನುಭವವು ನನಗೆ ಎಷ್ಟೋ ಸಾರೆ ಬಂದಿದೆ. ಆದರಿಂದ ನನಗೆ ಆ ಸುಖವು ಲಭಿಸುವ ಯೋಗವೇ ಇಲ್ಲದಿದ್ದರೂ ನನ್ನ ಕುದುರೆಗಳಿಗಾದರೂ ಆ ಶೀತ ಜಲಸ್ವರ್ಶದ ಸುಖವು ಲಭಿಸ ಲೆಂದು ನನ್ನ ರಥವನ್ನು ಮೇಘಗಳು ತಡೆಹಾಯುವ ಆ ಪ್ರಸಂ ಗಳಲ್ಲಿ ನಾನು ಬೇಕಂತಲೇ ಲಕ್ಷವಿಲ್ಲದವನಂತೆ ನಟಿಸುತ್ತಿರು ತೇನೆ.”

"ಆದರೆ ಚಂದ್ರಾ, ಇದುಂದ ನನ್ನ ಸಂತಾಪವು ಕಡಿಮೆ

ಯಾಗುತ್ತದೆಂದು ಮಾತ್ರ ತಿಳಿಯುವ ಹಾಗಿಲ್ಲ! ನನಗೆ' ಶೀತ ಜಲಸ್ಪರ್ಶದ ಸುಖದ ಅನುಭವವು ಇಲ್ಲವೆಂಬದಿಷ್ಟೇ ಅಲ್ಲ, ಸಂತಾಪ ಪರಿಹಾರಕ ಬೇರೆ ಯಾವ ಸಾಧನವೂ ನನಗೆ ಈ ವರೆಗೆ ಉಪಲಬ್ದವಾಗಿರುವದಿಲ್ಲ. ಭೂಮಂಡಲದ ಜನರಿಗೆ ಮಧ್ಯಾಹ್ನ ಹೊತ್ತಿನಲ್ಲಿ ಬಹಳ ಸೆಕೆಯೆನಿಸಿದರೆ, ಅವರು ಯಾವ ದೊಂದು ಕತ್ತಲೆ ಕೋಣೆಯಲ್ಲಿ ಹೋಗಿ ಕುಳಿತು ಆ ಸೆಕೆಯ ತಾಪವು ತಮಗಾಗದಂತೆ ಮಾಡಿಕೊಳ್ಳುತ್ತಾರೆ; ಮತ್ತು ಆ ಸ್ಥಲಾಂತರದ ತೀರ ಸುಲಭ ಉಪಾಯದಿಂದಲೇ ಅವರಿಗೆ ಎಷ್ಟೊ ಆರಾಮವೆನಿಸುತ್ತದೆ. ಆದರೆ ಮಿತ್ರಾ, ಹಿರಣ್ಯ ಗರ್ಭನೆಂಬ ಹೆಸರಿನಿಂದ ಪ್ರಖ್ಯಾತನಾಗಿರುವ ಈ ನಿನ್ನ ಪ್ರಿಯ ದೀನ ಮಿತ್ರನಿಗೆ ಈ ಜಗತ್ತಿನಲ್ಲಿ ಯಾವದೊಂದು ಕತ್ತಲೆಕೋ ಣೆಯು ಸಹ ಸಿಗುವದು ಶಕ್ಯವಿಲ್ಲ. ನನ್ನ ಮೈಯಲ್ಲಿ ಉರಿ ಉರಿಯಾಗಹತ್ತಿದಾಗ ನಾನು---- "ಎಲ್ಲಿಯಾದರೊಂದು ಕತ್ತಲೆ ಕೋಣೆಯಿದ್ದರೆ, ಯಾರಾದರೂ ತೋರಿಸುವಿರಾ ಎಂದು ವಿಹ್ನ ಲನಾಗಿ ಒದು ಕೇಳಿಕೊಂಡಾಗ ಯಾವನೊಬ್ಬ ಹುಂಬನು----

“ಅಕೋ, ಅಲ್ಲಿ ಆ ಪರ್ವತಗಳ ದರಿಗಳಲ್ಲಿ ಹಾಗು ಆ ವಿಶಾ ಲವಾದ ವೃಕ್ಷಗಳ ಹೊದರುಗಳಲ್ಲಿ ಬೇಕಾದಷ್ಟು ಕತ್ತಲು ಗವಿದದೆ ಎಂದು ಹೇಳುತ್ತಾನೆ! ಆದರೆ ಅವನು ತೋರಿ ಸಿದ ಆ ಪ್ರದೇಶಗಳ ಹತ್ತಿರ ಹೋಗಿ ನೋಡಲು, ನನಗೆ ಎಲ್ಲಿ
ಯೂ ಒಂದು ಕೂದಲೆಳೆಯಷ್ಟು ಕತ್ತಲು ಸಹ ಕಾಣಿಸುವ ಗಿಲ್ಲ! ಇದೆಂಧ ನನ್ನ ದುರ್ಭಾಗ್ಯವು? ಬೆಳಗಿನ ಜಾವದಲ್ಲಿ ಕು, ಅರುಣನು ಸಹದೂರದಲ್ಲಿ ಕತ್ತಲೆಯಿರುವದೆಂದು ನನಗೆ Vುತ್ತಿರುತ್ತಾನೆ. ಆಗ ಕತ್ತಲೆಯು ಮುಂದೆ ಮುಂದೆ ಓಡು ತಿರುತ್ತದೆ; ಮತ್ತು ಬೆನ್ನಟ್ಟಿ ಅದನ್ನು ಒಮ್ಮೆಯಾದರೂ ಹಿಡಿಯುವದಕ್ಕಾಗಿ ನನ್ನ ರಥವನ್ನು ಬಹಳ ಒತ್ತರದಿಂದ ಬಿಡಲಿಕ್ಕೆ ನಾನು ಆರುಣನಿಗೆ ಆಗಾಗ್ಗೆ ಸೂಚಿಸುತ್ತಿರುತ್ತೇನೆ. ಆದರೆ ಆ ಕತ್ತಲೆಯು ಇದು ವರೆಗೂ ನನ್ನ ಹಸ್ತಗತವಾಗಿ ದ್ದರೆ ಆಣೆ. ನನ್ನ ರಥದ ವೇಗದಷ್ಟು ಬೇರೆ ಯಾರ ವೇಗವೂ ಇಲ್ಲೆಂದು ನಾನು ಮನಸ್ಸಿನಲ್ಲಿ ಅಭಿಮಾನವನ್ನು ವಹಿಸಿರುತ್ತೇನೆ; ಆದರೆ ನನಗಿಂತಲೂ ಹೆಚ್ಚು ವೇಗದಿಂದ ಓಡುವ ಈ ಕತ್ತಲೆ ಯೊಂದು ಬಂದಿದೆ. ಕತ್ತಲೆಯು ನನ್ನ ಶತ್ರುವಿರುತ್ತದೆ; ಅಂತೇ ಅದು ನನ್ನ ಎಡಬಲಗಳಲ್ಲಿ ಸಹ ಸುಳಿಯುವದಿಲ್ಲ, ಎಂದು ಎಷ್ಟೋ ಜನರು ಅನ್ನುತ್ತಾರೆ. ಆದರೆ ನಾನಂತೂ ಅದನ್ನು ನನ್ನ ಪರಮ ಮಿತ್ರನೆಂದು ಭಾವಿಸುತ್ತೇನೆ. ಅದಕ್ಕೆ ಭೆಟ್ಟಿ ಯಾಗಬೇಕೆಂದು ನಾನು ಉತ್ಕಟೇಚ್ಛೆಯುಳ್ಳವನಾಗಿದ್ದೇನೆ. ಎಂದಾದರೊಮ್ಮೆ ಅದು ನನಗೆ ಗಂಟು ಬಿದ್ದರೆ, ವಿಶ್ರಾಂತಿ ಗಾಗಿ ಅದರ ಬಳಿಯಲ್ಲಿ ಯಾವದೊಂದು ಕತ್ತಲೆ ಕೋಣೆ ಯನ್ನಷ್ಟು ನನಗೋಸ್ಕರವಾಗಿ ಕೇಳಿಕೊಳ್ಳುವವನಿದ್ದೇನೆ. ಆದರೆ ಇದೆಲ್ಲ ಆ ಕಗ್ಗತ್ತಲೆಯು ನನಗೆ ಗಂಟು ಬಿದ್ದಾಗ ಮಾತ್ರ ಆಗತಕ್ಕ ವಿಚಾರವು. ನನಗಾಗದ ಯಾವನೊಬ್ಬನು ನನ್ನ ಸಂಬಂ ಧದ ಇಲ್ಲದ ಸುಳ್ಳು-ಸೊಡರುಗಳನ್ನು ಅದರ ಮನಸ್ಸಿನಲ್ಲಿ ತಂಬಿರುವಂತೆ ನನಗೆ ಕಾಣುತ್ತದೆ, ಮಿತ್ರಾ ಸುಧಾಕರಾ, ನಿನಗೆಂ ಧಾ ದರೂ ಆ ಕತ್ತಲೆಯು ಗಂಟು ಬಿದ್ದರೆ, ನೀನು ನನ್ನ ಮನ 'ನ ನಿಜವಾದ ಅಭಿಲಾಷೆಯನ್ನು ಅದಕ್ಕೆ ತಿಳಿಸಿ, ಒಮ್ಮೆ ನನ್ನ ಅದರ ಗಂಟು ಹಾಕಿಕೊಡು.”

ಸೂರ್ಯನ ಈ ಭಾಷಣವನ್ನು ಕೇಳಿ, ಚಂದ್ರನು ಮನ ಸ್ಸಿನಲ್ಲಿ ಅಸ್ಪುಟವಾಗಿ ಬಹಳ ಹೊತ್ತಿನ ವರೆಗೆ ನಕ್ಕನು. ಆದರೆ ಆ ನಗೆಯು ಕೊಂಚವೂ ಬೈಲಿಗೆ ಬೀಳದಂತೆ ಅವನು ಎಚ್ಚರಿಕೆ ಯನ್ನು ತಾಳಿದ್ದನು. ಯಾಕಂದರೆ, ಸೂರ್ಯನು ತನಗಿಂತ ಲು ಶ್ರೇಷ್ಠನ, ತನ್ನ ಪರಿಪೋಷಕನೂ ಆಗಿರುವದರಿಂದ ಅವನ ಅವಮಾನವಾಗಬಾರದೆಂದು ಅವನ ಸನ್ನಿಧಿಯಲ್ಲಿರುವ ವರೆಗಾದರೂ, ಅಂದರೆ ಅಮಾವಾಸ್ಯೆಯ ದಿವಸ ಸ್ವಲ್ಪವೂ ನಗಬಾರದೆಂದು ಚಂದ್ರನು ನಿಶ್ಚಯಿಸಿದ್ದನು; ಮತ್ತು ಅವನು ಆ ನಿಯಮವನ್ನು ಈ ವರೆಗೂ ತಪ್ಪದೆ ಪಾಲಿಸುತ್ತ ಬಂದಿರು ವನು. ಆದ್ದರಿಂದ ಮೇಲೆ ಹೇಳಿದಂತೆ ಚಂದ್ರನು ಸೂರ್ಯನ ಮಾತನ್ನು ಕೇಳಿ ಮನಸ್ಸಿನಲ್ಲಿ ಹೊಟ್ಟೆ ತುಂಬ ನಕ್ಕರೂ, ಆ ನಗೆಯು ಹೊರಗೆ ಸ್ವಲ್ಪವೂ ಕಾಣದಂತೆ ಎಚ್ಚರಪಟ್ಟಿದ್ದನು. ಬಳಿಕ ಅವನು ತನ್ನ ನಗೆಯನ್ನು ಅಲ್ಲಿಂದಲೇ ಬಚ್ಚಿಟ್ಟು ಸೂ ರ್ಯನೊಡನೆ ಕೆಲವು ಸುಖ-ಸಲ್ಲಾಪಗಳನ್ನಾಡಬೇಕೆಂದಿದ್ದನು. ಆದರೆ ಅಷ್ಟರಲ್ಲಿ ತನ್ನ ದುಃಖದ ಜ್ವಾಲೆಗಳನ್ನು ತಡೆಯಲಸ ಮರ್ಥನಾದ ಸೂರ್ಯನು ವ ಅತ್ತೆ ಮಾತಾಡಲುಪಕ್ರಮಿಸಿ ದನು:- "ಚಂದ್ರಾ ನನಗೆ ಸುಖವಿಲ್ಲ-ಸಮಧಾನವಿಲ್ಲ, ಗೆಳೆಯರೂ ಇಲ್ಲ, ಬೇಕಾದವರೂ ಇಲ್ಲ, ನಿದ್ದೆಯ ಇಲ್ಲ, ಶಾಂತತೆಯ ಇಲ್ಲ, ಶೀತಲವೂ ಇಲ್ಲ. ನೀರಿನ ತಂಪಿನಿಂದಾ ಗುವ ಸುಖವು, ಇಲ್ಲವೆ ಕತ್ತಲೆಯೊಳಗೆ ಆರಾಮಿಗಾಗಿ ಕುಳಿ ತರೆ ಆಗುವ ಸಮಾಧಾನವು ಹೇಗಿರುತ್ತದೆಂಬದು ನನಗೆ ಗೊ ಇಲ್ಲ. ಈ ದುಃಖದಿಂದ ನಾನುಹಗಲಿರುಳು ಒಂದೇ ಸವನೆ ಸುಟ್ಟು ಬೆಯ್ಯುತ್ತಿರುತ್ತೇನೆ. ನಾನು ಇಷ್ಟು ದುಃಖಪಡು ತಿದ್ದರೂ, ಸುಮ್ಮನೆ ಮಾತಾಡಿಸಲಿಕ್ಕೆಂದು ನನ್ನೆಡೆಗೆ ಯಾರೂ
ಹಣಿಕಿ ಸಹ ಹಾಕುವದಿಲ್ಲ. ಭೂಮಂಡಲದಲ್ಲಿ ಯಾವನಿಗಾದ ಹರೂ ತುಸ ದುಃಖವಾದರೆ, ಅವನ ಆಪ್ತರು, ಇಷ್ಟರು, ಬಂಧು-ಬಾಂಧವರು, ನೆರೆಹೊರೆಯವರು ಅವನನ್ನು ಮಾತಾಡಿ ಸಲಕ್ಕೆಂದು ತಿಂಗಳ ಗಟ್ಟಲೆ ಅವನ ಮನೆಗೆ ಬಂದು, ತೋರಿಕೆ ಯಲ್ಲಿಯೇ ಯಾಕಾಗಲೊಲ್ಲದು, ಅವನ ದುಃಖದ ಸಮಭಾಗಿಗ ೪ಾಗುತ್ತಾರೆ. ಆದರೆ ನನ್ನ ವಿಪರೀತ ಭೋಗದ ಮೂಲಕ ನನ್ನೆ ಡೆಗೆ ಯಾವನೂ ಒಂದು ಕ್ಷಣ ಹೊತ್ತಿನ ಮಟ್ಟಿಗೆ ಸಹ ಬರ ಲಿಕ್ಕೆ ಮನಸ್ಸು ಮಾಡುವದಿಲ್ಲ. ಇಲ್ಲೆನ್ನಲಿಕ್ಕೆ ಕೆಲವು ಜನ ಯಕ್ಷ-ಗಂಧರ್ವ-ಕಿನ್ನರ ದಂಪತಿಗಳು ತಮ್ಮ ವಿಮಾನಗ ಇನ್ನಾರೋಹಣ ಮಾಡಿ ಮೇಲೆ ಆಕಾಶದಲ್ಲಿ ಬರುತ್ತಿರುವದನ್ನು ನಾನು ಎಷ್ಟೋ ಸಾರೆ ನೋಡುತ್ತೇನೆ. ಅವರಲ್ಲಿಯ ಯಾವ ನೊಬ್ಬನು ನನ್ನ ಬಳಿಗೆ ಬಂದರೆ ಅವನೊಡನೆ ಕ್ಷೇಮಸಮಾ ಚಾರದ ನಾಲ್ಕು ಮಾತು-ಕಥೆಗಳನ್ನಾಡುವದರಲ್ಲಿ ಎಷ್ಟೋ ಮನೋರಂಜನವಾದೀತೆಂದು ಬಗೆದು, ನಾನು ಅವರ ಗತಿಯ ಕಡೆಗೆ ಟಕಮಕ ದೃಷ್ಟಿಯಿಂದ ನೋಡುತ್ತಿರುತ್ತೇನೆ; ಹಾಗು ಅವರ ಸ್ವಾಗತ ಮಾಡುವದಕ್ಕಾಗಿ ನಾನು ನನ್ನ ಸ್ಥಾನದಿಂದ ತುಸು ಕೆಳಗಿಳಿದು ಅವರ ಬಳಿಗೆ ಹೋಗಬೇಕೆಂದು ಸಹ ಪ್ರ ಯತ್ನ ಪಡುತ್ತಿರುತ್ತೇನೆ. ಆದರೆ ನಾನು ತಮ್ಮ ಕಡೆಗೆ ಬರುತ್ತೆ ನೆಂಬದು ಅವರಿಗೆ ತಿಳಿದ ಕೂಡಲೆ ಅವರು ದೂರಿಂದಲೇ ನನಗೆ ಶರಣುಹೊಡೆದು, ತಮ್ಮ ವಿಮಾನದ ಚುಕ್ಕಾಣಿಯನ್ನು ಕೆಳ ಗಡೆ ತಿರುಗಿಸಿ, ಹಿಮಾಲಯ ಪರ್ವತದೊಳಗಿನ ಬರ್ಫ ಮಯ ವಾದ ಗುಹೆಗಳಲ್ಲಿ ಪ್ರವೇಶಿಸಿ ಬಿಡುವರು. ಮಿತ್ರಾ, ಹಿಂದ ಕೈ ಒಬ್ಬಾನೊಬ್ಬ ಶಿಖಾಮಣಿಯು ಮೇಣದ ರೆಕ್ಕೆಗಳನ್ನು ಧರಿಸಿಕೊಂಡು ಆಕಾಶದಲ್ಲಿ ಉದ್ಘಾಣ ಮಾಡುತ್ತ ನನ್ನೆಡೆಗೆ ಬರಲಿಕ್ಕೆ ಹೊರಟಿದ್ದನಂತೆ; ಆದರೆ ನನ್ನ ಸಮೀಪಕ್ಕೆ ಬಂದ
ಬಂದ ಹಾಗೆ ಅವನ ಆ ಮೇಣದ ರೆಕ್ಕೆಗಳು ಕರಗಿ ನೀರಾಗಿ ಹೋಗಲು, ಆ ಬಡವನು ತನ್ನ ಇಚ್ಛೆಯ ವಿರುದ್ದವಾಗಿ ನೈಸ ರ್ಗಿಕ ಗುರುತ್ವಾಕರ್ಷಣದಿಂದ ಆ ಮಧ್ಯ ಪ್ರದೇಶದಿಂದಲೇ ಭೂಮಿಗೆ ಜಗ್ಗಲ್ಪಟ್ಟನು. ನನ್ನ ಮಿತ್ರರ ಹಾಗು ನನ್ನ ಸಮ ಗಮಕ್ಕೆ ಪ್ರತಿಬಂಧ ಮಾಡುವ ಗುರುತ್ವಾಕರ್ಷಣವೆಂಬ ಇದಾ ವ ಶತ್ರುವು ಹೊಸದಾಗಿ ಜನಿಸಿರುವದೋ ಯಾರಿಗೆ ಗೊತ್ತು? ಬ್ರಾಹ್ಮಣರೆಂಬುವವರು ನನ್ನ ಪರಮ ಭಕ್ತರಿರುತ್ತಾರೆಂದು ನಾನು ಕೇಳಿರುತ್ತೇನೆ; ಆದರೆ ಅವರು ಯಾವಾಗ ತಮ್ಮ ಉ ಪಾಸನಾ ಕಾರ್ಯವನ್ನು ಮಾಡುವರೋ ಆವಾಗ ತಮ್ಮ ಕೈ ಗಳನ್ನು ನನ್ನ ಕಡೆಗೆ ತೋರಿಸುವರು. ಅವರು ಅಫಲ್ಯ ಪ್ರದಾ ನದ ಮಿಷದಿಂದ ಬೊಗಸೆಯೊಳಗೆ ನೀರು ಹಿಡಿದಿದ್ದ ತಮ್ಮ ಕೈಗಳನ್ನು ನನ್ನ ಕಡೆಗೆ ಮಾಡುವದನ್ನು ನೋಡಿದರೆ, ನನ್ನ ಕಡೆಗೆ ಮಾಡಿದ ತಮ್ಮ ಹಸ್ತಗಳಿಗೆ ಆಕಸ್ಮಿಕವಾಗಿಯಾದರೂ ನನ್ನ ಉಷ್ಣತೆಯ ಬಾಧೆಯಾಗಿ ಅವು ಕಮರಿ ಹೋಗದಿರವದ ಕ್ಕಾಗಿಯೇ ಅವರು ತಮ್ಮ ಬೊಗಸೆಯಲ್ಲಿ ನೀರು ಹಿಡಿಯುತ್ತಿ ರಬಹುದೆಂದು ನನಗನಿಸುತ್ತದೆ. ತಾವರೆಗಳನ್ನು (ಸೂರ್ಯನಿಂದ ಅರಳುವ ಕಮಲಗಳನ್ನು ನನ್ನ ಭಕ್ತಕೋಟಿಯಲ್ಲಿ ಎಷ್ಟೋ ಮಂದಿ ಕವಿಗಳು ಸೇರಿಸಿರುತ್ತಾರೆ. ಆದರೆ ನನ್ನನ್ನು ಪ್ರೀತಿ ಸುವ ತಾವರೆಗಳಾದರೂ ನನ್ನೊಡನೆ ಎಷ್ಟು ಸಂಕೋಚದಿಂದ ನಡಕೊಳ್ಳುತ್ತವೆಂದು ನನಗರಿಯದ ಸಂಗತಿಯಾಗಿರುವದಿಲ್ಲ. ತಮ್ಮ ಶರೀರವನ್ನೆಲ್ಲ ಯಾವದೊಂದು ಪುಷ್ಕರಣಿಯ ಜಲಾಶ ಯದಲ್ಲಿ ಮುಳುಗಿಸಿಟ್ಟು, ಅವು ಕೇವಲ ತಮ್ಮ ಮುಗುಳುನಗೆ ಯ ಪ್ರಫುಲ್ಲಿತ ಮುಖದಿಂದ ಕೆಲಹೊತ್ತಿನ ವರೆಗೆ ಮಾತ್ರ ನನ್ನ ಕಡೆಗೆ ನೋಡುತ್ತಿರುತ್ತವೆ! ನನಗೆ ಇಷ್ಟು ನಾಚಿ ತಮ್ಮ ಶರೀ ರವನ್ನೆಲ್ಲ ಮುಚ್ಚಿಕೊಂಡು ನನ್ನನ್ನು ಪ್ರೀತಿಸುವ ಆ ತಾವರೆಗೆ
ಳನ್ನು ನಾನೂ ವಿಶೇಷವಾಗಿ ಆದರಿಸುವದಿಲ್ಲ. ಈ ಪ್ರಕಾರ ನನ್ನ ನಿಸ್ಸಿಮ ಭಕ್ತರೇ ನನ್ನನ್ನು ಹೀಗೆ ಸ್ಪಷ್ಟವಾಗಿ ಉದಾ ಸೀನ ಮಾಡುತ್ತಿರುವಂಬದು ನನಗೆ ಆಗಾಗ್ಗೆ ಕಂಡು ಬರುತ್ತಿ ರುವದರಿಂದ ನನ್ನ ಮನಸ್ಸು ಬಹತಿ ಉದ್ವಿಗ್ನ ವಾಗುತ್ತ ಹೋಗುತ್ತದೆ. ಆದರೆ ನಾನಾದರೂ ನನ್ನ ಆ ಭಕ್ತರಿಗೇಕೆ ಹೆಸರಿಡಬೇಕು? ಪ್ರತ್ಯಕ್ಷ ನನ್ನ ಹೆಂಡತಿಯಾದ ಸಂಜ್ಞಾ ದೇವಿ ಯು ಸಹ ನನ್ನ ತಾಪಕ್ಕೆ ಬೇಸತ್ತು ನನ್ನನ್ನು ತೊರೆದು ಹೋ ದದ್ದು ನನಗೆ ಗೊತ್ತಿಲ್ಲೇನು? ಮತ್ತು ಅದಕ್ಕಾಗಿ ಅವಳ ತಂದೆಯು ನನ್ನನ್ನು ಒಂದು ಗಾಲಿಯ ಮೇಲೆ ಚಲ್ಲಿ ಕೊಟ್ಟು, ಗಾಣದ ಎತ್ತಿನಂತೆ ಗರಗರ ತಿರುಗಲಿಕ್ಕೆ ಹಚ್ಚಿರುವನು; ಹಾಗು ಅವನು ತನ್ನಲ್ಲಿಯ ಅರ್ನದಿಂದ ನನ್ನ ಶರೀರದ ತುಂಡು ತುಂ ಡುಗಳನ್ನಾ ಗಮಾಡಿರುವನು! ಹೀಗೆ ನನ್ನ ಗೃಹ ಸೌಖ್ಯವೇ ಆಗಿ ರಲಿಕ್ಕೆ ಹೆರವರು ನನ್ನ ಬಳಿಗೆ ಬಂದು ಹೋಗದಿದ್ದರೆ, ನಾನು ದುಃಪಿಸುವದಾದರೂ ಏಕೆ? ನನ್ನ ಕಡೆಗೆ ಯಾರೂ ಬರುವದಿ ಲೈಂಬ ಕೂಗಾಟವು ಸತ್ಯಕ್ಕೆ ಸ್ಮರಿಸಿರುವದಿಲ್ಲೆಂದು ಕೆಲವರಿಗನಿ ಸಬಹುದಾಗಿದೆ; ಯಾಕಂದರೆ, ಕೆಳಗೆ ವರ್ಣಿಸಿದ ಎರಡು ವಿಧದ ಜನರು ನನ್ನ ಬಳಿಗೆ ಬರುತ್ತಿರುವದಕ್ಕೆ ನಾನೂ ಸುಳ್ಳ ನ್ನು ವಂತಿಲ್ಲ, “ದ್ಯಾ ವಿಮೆ ಇರುವೌ ಲೋಕೇ ಸೂರ್ಯಮಂಡಲ ಛೇದಿನ್‌ ಪರಿವಾಡ ಯೋಗಯುಕ್ತ ರಣೇಚಾಭಿಮುಖೇಹತಃ||

ಯೋಗಿಗಳು, ರಣಾಂಗಣದಲ್ಲಿ ನುಡಿದಂಥ ವೀರರು,

ಇವರಿಬ್ಬರೇ ಸೂರ್ಯಮಂಡಲವನ್ನು ಭೇದಿಸತಕ್ಕವರು ಆದರೆ ಚಂದ್ರಾ, ಅವರ ಬರುವಿಕೆಯಿಂದ ನನಗಾವ ಸುಖವಾ ಗುತ್ತಿರಬಹುದೆಂಬದನ್ನು ನೀನೇ ಹೇಳು, ನನ್ನೊಡನೆ ಮಾತು ಕಥೆಗಳನ್ನಾಡುವವರೂ, ನಗೆಯಾಡಿ-ಕೆಲೆದಾಡ್ತಿ ಮನೋರಂ
ಜನವನ್ನು ೦ಟು ಮಾಡುವ ಸಂಗಡಿಗರೂ ನನಗೆ ಬೇಕಾಗಿರು ತ್ತಾರೆ. ಆದರೆ ಆ ಹೆಣಗಳಿಂದ ನನಗೇನಾಗಬೇಕಾಗಿದೆ. ಇತ್ತಿತ್ತಲಾಗಿ ಅಂಧ ಜನರೂ ನನ್ನೆಡೆಗೆ ಒರದಂತಾಗಿದ್ದಾರೆ. ಯಾಕಂದರೆ ಪ್ರಚಲಿತ ಯುದ್ಧ -ಮಹಾಯುದ್ಧಗಳಲ್ಲಿ ಎದುರಾ ಎದುರ ನಿಂತು ಕಾದುವ ಪದ್ಧತಿಯೇ ನಾಮಶೇಷವಾಗಿ ಬಿಟ್ಟಿದೆ! ಮತ್ತು ಯೋಗಿಗಳ ಬಗ್ಗೆ ಮಾತಾಡುವವೆಂದರೆ, ಈಗ ವೇಷಧಾರಿಗಳೆ ಎಲ್ಲೆಲ್ಲಿಯೂ ಕಾಣತ್ತಾರೆಯೇ ಹೊರ ತು ನಿಜವಾದ ಯೋಗಿಯೆಂಬುವವನೊಬ್ಬನೂ ದೃಗ್ಗೋಚರವಾ ಗುವದಿಲ್ಲ. ಇಂಥ ಸ್ಥಿತಿಯಲ್ಲಿಯ ಯಾವನೊಬ್ಬ ಮಹಾ ಶೂರನಾಗಲಿ, ಶ್ರೇಷ್ಟ ಯೋಗಿಯಾಗಲಿ ತನ್ನ ಸಾಮರ್ಥ್ಯದಿಂದ ನನ್ನೆಡೆಗೆ ಬಂದರೂ ಅವರಿಂದ ನನಗಾವ ಸುಖವಾಗುವಂತಿದೆ? ಅವರಲ್ಲಿ ಯಾವನು ಬಂದರೂ ಮೇಲಿನ ಶ್ಲೋಕದಲ್ಲಿ ವಿವರಿಸಿ ದಂತೆ ಅವನು ನನ್ನ ಹೃದಯವನ್ನು ವಿದಾರಣ ಮಾಡಿಯೇ ರೋಗತಕ್ಕವನು! ಸುಧಾಕರಾ, ಇಂಧನ ಕೃತಿಯಿಂದ ನನಗೆ ಎಂಥ ಸುಖವಾದೀತು? ಮೊದಮೊದಲು ಇಂಧ ಅನೇಕ ಜನರು ನನ್ನ ಕಡೆಗೆ ಬರುತ್ತಿದ್ದರು; ಹಾಗು ಅವರು ತಮ್ಮ ಬಿರುದನ್ನು ಕಾಯ್ದುಕೊಳ್ಳು ವದಕ್ಕಾಗಿ ನನ್ನ ಹೃದ ಯದಲ್ಲಿ ಹಲವು ಛಿದ್ರಗಳನ್ನುಂಟು ಮಾಡಿರುತ್ತಾರೆ. ನನ್ನ ಮೈಮೇಲೆ ಎಂಥವೋ ಕಪ್ಪು ಕಲೆಗಳಿರುತ್ತವೆಂದು ಎಷ್ಟೋ
ಜನರು ಭಾವಿಸುತ್ತಾರೆ. ಆದರೆ ಅವು ನಿಜವಾಗಿ ಕಲೆಗಳಿ ರದೆ, ಆ ಮಹಾತ್ಮರು ಕೆಡವಿದ ತೂತುಗಳೇ ಆಗಿರುತ್ತ ವೆಂಬದು ಪಾಪ, ಆ ದೋಷೋಕ ದೃಷ್ಟಿಯವರಿಗೇನು ಗೊತ್ತು? ಮಿತ್ರಾ, ಈ ದುಃಖದಿಂದ ನಾನು ದಿನೇ ದಿನೇ ಕ್ಷೀಣವಾ ಗುತ್ತ ನಡೆದಿದ್ದೇನೆ. ಮತ್ತು ಈ ಶಕ್ತಿಪಾತದಿಂದ ನನ್ನ ಅಂತವು ಯಾವಾಗಾದೀತೆಂಬದು ಕೂಡ ಊಹಿಸಲಶಕ್ಯವಾ ಟಿ!
ಗಿರುತ್ತದೆ. ಎಷ್ಟು ತೀವ್ರವಾಗಿ ನನ್ನ ಮರಣವು ಸಮೀಪಿ ಸುವರೋ, ಅಷ್ಟು ತೀವ್ರ ಅದು ನನಗೆ ಬೇಕಾಗಿರುತ್ತದೆ. ಚಂದ್ರಾ, ಸಿಂಹಿಕ ಪುತ್ರನಾದ - ರಾಹುವೆಂಬ ರಾಕ್ಷಸನು ಬಾಲ್ಯದಿಂದಲೇ ನಮ್ಮ ಕಡು ವೈರಿಯಾಗಿರುವನೆಂಬದು ನಿನಗೆ ಗೊತ್ತೇ ಇದೆ. ಮತ್ತು ಅವನನ್ನು ಮಹಾಶತ್ರುವೆಂದು ನಿನ್ನಂ ತೆಯೇ ನಾನೂ ಮೊದಮೊದಲು ತಿಳಿಯುತ್ತಿದ್ದನು. ಆದರೆ ಈಚೆಗೆ ಎಂದಿನಿಂದ ನಾನು ಜೀವಕ್ಕೆರವಾಗಬೇಕೆನ್ನ ಹತ್ತಿರುವೆ ನೋ, ಅಂದಿನಿಂದ ಆ ತೀಕ್ಷ್ಯ ಹಗೆಯಾದ ರಾಹುವನ್ನು ಕೂಡ ನಾನು ನನ್ನ ಪರಮ ಮಿತ್ರ ವರ್ಗದಲ್ಲಿ ಸೇರಿಸಿಕೊಂಡಿರು ತೇನೆ. ಈ ಶತ್ರುವು ನನ್ನನ್ನು ಕಾಯಮವಾಗಿ ನುಂಗಿಬಿ ಜ್ಞಾನೇನೆಂದು ನಾನು ಅಭಿಲಾಷೆಪಡುತ್ತಿದ್ದೆವು. ಆದರೆ ತನ್ನ ವೈರಿಯು ತನಗೆ ದುಃಖ ಕೊಡಲಿಕ್ಕೆ ಸಿದ್ಧನಾಗಿರುತ್ತಾ ನೆಯೇ ಹೊರತು, ದುಃಖದಿಂದ ತನ್ನನ್ನು ಮುಕ್ತ ಮಾಡಲಿಕ್ಕೆ ತತ್ಪರನಾಗಿರುವದಿಲ್ಲೆಂಬ ತತ್ವವು ಇತ್ತಿತ್ತಲಾಗಿ ನನ್ನ ಮನ ದಟ್ಟಾಗಹತ್ತಿರುತ್ತದೆ. ಆ ದುಷ್ಟ ರಾಹುವು ಒಮ್ಮೊಮ್ಮೆ ನನ್ನನ್ನು ಅರ್ಧಮರ್ಧ ನುಂಗಿ ಉಗುಳಿ ಬಿಟ್ಟರೆ, ಕೆಲಕೆಲವು ಪ್ರಸಂಗದಲ್ಲಿ ಅವನು ನನ್ನನ್ನು ಸಂಪೂರ್ಣವಾಗಿ ನುಂಗಲಿಕ್ಕೆ ಪ್ರಯತ್ನಿಸಿದರೂ, ಅಷ್ಟೊತ್ತಿನಲ್ಲಿ ನನಗೆ ಕೊಡತಕ್ಕಷ್ಟು ಕೈ ಶವನ್ನೆಲ್ಲ ಕೊಟ್ಟು ಪುನಃ ಅವನು ನನ್ನನ್ನು ಕಾರಿಕೊಂಡು ಬಿಡುತ್ತಿರುತ್ತಾನೆ. ನನ್ನನ್ನು ನುಂಗುವದಕ್ಕಾಗಿ ರಾಹುವು ನನ್ನ ಸವಿಸಮೀಪಕ್ಕೆ ಬಂದ ಹಾಗೆ ಅವನನ್ನು ನೋಡಿ ನನಗೆ ಪರಮಾನಂದವೆನಿಸುವದು; ಮತ್ತು ನನ್ನ ಕುತ್ತಿಗೆಯು ಅವನ ದವಡೆಯೊಳಗೆ ಸಿಕ್ಕು ಜಿಬ್ಬಿ ಜಿಬ್ಬಿಯಾಗುವ ಹಾಗೆ ನಾನು ಅದನ್ನು ಮುಂದಕ್ಕೆ ಬೊಗ್ಗಿಸಿ ನಿಲ್ಲುತ್ತೇನೆ. ಹಾಗು ನಾನು ಇನ್ನು ನನ್ನಿ ಅಖಂಡ ಸಂತಾಪದಿಂದೊಮ್ಮೆ ಪಾರಾಗುವೆ
ನೆಂದು ತಿಳಿಯುತ್ತಿರುತ್ತೇನೆ. ಆದರೆ ಒಂದೆರಡು ಗಳಿಗೆಯಾದ ಬಳಿಕ ನೋಡುವಷ್ಟರಲ್ಲಿ ಕೇವಲ ದುಃಖದಿಂದ ಬಳಲಲಿ ಕಂದು ಜನ್ಮವೆತ್ತಿದ ಈ ನಿನ್ನ ಹಿರಿಯಣ್ಣನು ಪುನಃ ಅಮ ರನಾಗಿಯೇ ಇರುತ್ತಾನೆ. ಈ ಸ್ಥಿತಿಯಲ್ಲಿ ಅಮರನಾಗಿರು ವದಾದರೂ ಒಂದು ಪ್ರಕಾರದ ಶಿಕ್ಷೆಯೇ ಆಗಿರುತ್ತದಲ್ಲವೆ? ಮಾರುತಿಯು ಹುಟ್ಟಿದೊಡನೆಯೇ ಯಾವದೊಂದು ಕೆಂಪಾದ ಹಣ್ಣೆಂದು ನುಂಗಿ ನನ್ನನ್ನು ಈ ದುಃಖದಿಂದ ಮುಕ್ತನನ್ನಾಗ ಮಾಡುವ ಮೊದಲನೇ ಪರೋಪಕಾರದ ಕೆಲಸಕ್ಕೆ ಪ್ರಯತ್ನಿಸಿ ದ್ದನು. ಆದರೆ ನನ್ನ ದೈವಹೀನತ್ವದಿಂದ ಅವನ ಆ ಪ್ರಯತ್ನ ವು ಸಫಲವಾಗಲಿಲ್ಲ. ಯಾಕಂದರೆ ಆ ಮಹಾಬಲಿಷ್ಠ ವಜ್ರ ಶರೀರದ ಹನುಮಪ್ಪನ ಶಕ್ತಿಗಿಂತಲೂ ಈ ದುರ್ದೆನಿಯ ಸಾಮರ್ಥವು ಆಗ ಬಲವಾಯಿತು. ಜಯದ್ರಧನ ವಧದ ಪ್ರಸಂಗದಲ್ಲಿ ಶ್ರೀ ಕೃಷ್ಣ ಪರಮಾತ್ಮನು ನನ್ನನ್ನು ಕೆಲ ಹೊತ್ತು ತನ್ನ ಚಕ್ರದ ಮರೆಗಿರಿಸಿದ್ದನೆಂಬದು ನಿನಗರಿಯದ ಸಂಗತಿಯಲ್ಲಿ ಆ ಕಾಲಕ್ಕೆ ಭಗವಾನ್ ಶ್ರೀ ಕೃಷ್ಣನಿಗೆ ನಾನು ಬಹಳವಾಗಿ ಹೇಳಿಕೊಂಡೆನು. ಅದೇನಂದರೆ,-“ಕೃಷ್ಣಾ, ಮುಹೂರ್ತಮಾತ್ರವೇ ನನಗೇಕೆ ಈ ಸುದರ್ಶನದ ಮರೆಗಿರ ಲಿಕ್ಕೆ ಹೇಳುತ್ತೀ? ನಾನು ಸಂಪೂರ್ಣವಾಗಿ ನಿಲಯಂ ದಲಿಕ್ಕೆ ಸಿದ್ಧನಾಗಿರುತ್ತೇನೆ. ಆದ್ದರಿಂದ ಈ ಸುದರ್ಶನವನ್ನು ನೀನು ಕ್ಷಣ ಮಾತ್ರ ನನ್ನ ಮುಂದಿಡದೆ, ಶ್ರೀ ಭೀಷ್ಮಾಚಾ ರ್ಯರ ಮೇಲೆ ಇದನ್ನು ನೀನು ಹೇಗೆ ಪ್ರಯೋಗಿಸಲಿಕ್ಕೆ ಸಿದ್ಧ ನಾಗಿದ್ದೆಯೋ, ಆ ಪ್ರಕಾರ ನೀನು ಈ ಸುದರ್ಶನಚಕ್ರವನ್ನು ನನ್ನ ಮೈ ಮೇಲೆ ಚಲ್ಲು. ಅಂದರೆ ನಿನ್ನ ಜಯದ್ರಥ ವಧದ ಕಾರ್ಯವೂ ಕೊನೆಗಾಣುವದು; ಹಾಗು ನನ್ನ ಆತ್ಮ ವಧದ ಕೆಲಸವೂ ಪೂರೈಸುವದು, ಆದರೆ ನನ್ನನ್ನು ಕರ್ಣನ ತಂದೆ
ಯೆಂದು ತಿಳಿದೋ ಏನೋ, ನನ್ನ ಮೇಲೆ ಪರೋಪಕಾರ ಮಾ ಡುವ ಬುದ್ದಿಯು ಆ ದ್ವಾರಕಾಧೀಶ್ವರನಾದ ಶ್ರೀ ಕೃಷ್ಣ ಪರ ಮಾತ್ ನಲ್ಲಿಯ ಹುಟ್ಟಲಿಲ್ಲ. ಚಂದಾ, ಇದರ ಮೇಲಿಂದ ನಾನು ನನ್ನ ಜೀವಿತದ ಬಗ್ಗೆ ಎಷ್ಟರ ಮಟ್ಟಿಗೆ ಬೇಸರಗೊಂಡಿ ರುವೆನೆಂಬದರ ಕಲ್ಪನೆಯು ನಿನಗಾಗಬಹುದು. ನಾನು ನನ್ನಿ ಜೀವಿತದ ರಹಸ್ಯವನ್ನು ಈ ವರೆಗೆ ಯಾರಿಗೂ ಹೇಳಿದ್ದಿಲ್ಲ; ಆದರೆ ಈ ದಿವಸ ನನ್ನ ಮನಸ್ಸು ತಡೆಯದ್ದರಿಂದ ಇದನ್ನು ನಿನ್ನೆ ದುರಿಗೆ ತೋಡಿಕೊಂಡಿರುತ್ತೇನೆ. ನಿನ್ನೆದುರಿಗೆ ಇದು ವರೆಗೆ ತೋಡಿಕೊಳ್ಳದಿರುವದರ ನಿಜವಾದ ಕಾರಣವೇನೆಂದರೆ, ನನ್ನ ತಾಪವು ನಿನಗಾಗಬಾರದೆಂದು ನನ್ನಿಂದಾದಷ್ಟು ದೂರವಿ ರಬೇಕೆಂಬ ಇಚ್ಛೆಯಿಂದ ನೀನು ಕದಾಚಿತ್ ನನಗೆ ಭೆಟ್ಟಿಯ ಗುತ್ತಿರಲಿಕ್ಕಿಲ್ಲ. ಅಂತೇ ನಾನಾದರೂ ಅದೇ ಕಾರಣದಿಂದ ನಿನ್ನಿಂದ ಶಕ್ಯವಿದ್ದಷ್ಟು ಅಂತರದಲ್ಲಿ ಓಡಾಡುತ್ತಿರುತ್ತೇನೆಂ ಬದು ನಿನ್ನ ಲಕ್ಷ್ಯದಲ್ಲಿ ಬಂದಿರಲಿಕ್ಕಿಲ್ಲ. ಒಬ್ಬ ಅಣ್ಣನು ತನ್ನ ಬೆನ್ನಿಗೆ ಬಿದ್ದ ಖಾಸ' ತಮ್ಮನನ್ನು ಈ ಪ್ರಕಾರವಾಗಿ ಎಂದೂ ತಿರಸ್ಕರಿಸಬಾರದೆಂಬದು ನನಗೆ ತಿಳಿಯುತ್ತದೆ! ಆದರೆ ಮಾಡಲೇನು? ನನಗೆ ನನ್ನಿ ದುಃಖ ಪೂರ್ಣ ಜೀವಿತವು ಸಾಕು ಸಾಕಾಗಿ ಹೋಗಿರುತ್ತದೆ. ಮತ್ತು ಈ ಜೀವಿತವು ಯಾವಾ ಗೊಮ್ಮೆ ತೀರಿ ಹೋದೀತೋ ಎಂದೆನಿಸಿರುತ್ತದೆ. ಈ ಪ್ರಕಾ ರದ ಮನಸ್ಸಿನ ಸ್ಥಿತಿಯ ಮೂಲಕ ನಾನು ನಿನ್ನಿಂದ ಸಾಧ್ಯವಿ ದ್ದಷ್ಟು ದೂರವೇ ಇರುತ್ತೇನೆ. ಯಾಕಂದರೆ, ನೀನು ಅಮ್ಮ ತದ ಆಗರವೇ ಆಗಿರುತ್ತೀಯಷ್ಟೇ, ನಿನ್ನ ಅರ್ದ ಸ್ವಭಾವ ಹೈನುಸರಿಸಿ, ನೀನು ನಿನ್ನಿ ಅಣ್ಣನ ದುಃಖವನ್ನು ನೋಡಲಾ ರದ ದುಃಖದಿಂದ ಒಂದಾನೊಂದು ಚಂದ್ರಕಾಂತ ಕಲ್ಲಿನಂತೆ ಕರಗಹತ್ತಬಹುದು. ಆಗ ನಿನ್ನ ಕಣ್ಣುಗಳಿಂದ ದುಃಖಾಶ್ರುಗ
ಳು ಟಪಟಪನೆ ಉದುರಹತ್ತಿದವೆಂದರೆ, ಆ ನಿನ್ನ ದ್ರವರೂಪವಾ ದ ಅಮೃತದ ಒಂದಾನೊಂದು ಹನಿಯು ಆಕಸ್ಮಿಕವಾಗಿನನ್ನ ಮೈಮೇಲೆ ಬೀಳಬಹುದು.ಹಾಗು ಅದರಿಂದ ನಾನುಹೆಚ್ಚಾ ಗಿಯೇ ಅಮರನಾಗಲು, ನನ್ನ ಈ ದುಃಖಗಳೂ ನನ್ನೊಡನೆ ಅಮರವಾದರೆ ಅವುನಾಶವಾಗಲಿಕ್ಕೆ ಮಾರ್ಗವೇ ಉಳಿಯಲಿ ಕೈಲ್ಲೆಂದು ನಾನು ಯಾವಾಗಲೂ ಅಂಟಿದೂರಿರುತ್ತೇನೆ. ಆ ಷ್ಟೇ ಅಲ್ಲ, ನೀನೀಗ ನನ್ನೊಡನೆ ಮಾತಾಡುತ್ತಿರುವಾಗ ಇಲ್ಲವೆ ನನ್ನ ಕಡೆಗೆ ನೋಡುತ್ತಿರುವಾಗ ನಿನ್ನ ಪರಿಚಾರಕನಾದ ಆ ವಸಂತನಲಹರಿಯಮಲಕ ಎಲ್ಲಿಯಾದರೂ ನಿನ್ನ ಬಾಯೊಳಗಿನ ಅಮೃತದ-ಉಗುಳಿನ ಒಡಕು-ಗಿಡಕು ನನ್ನ ಮೇಲೆ ಹಾರಿ ಬಿದ್ದಿತೋ,ಹೇಗೋ...ಎಂಬಬಗ್ಗೆ ನನ್ನ ಎದೆಯ ಕ್ಷಣಕ್ಷಣಕ್ಕೆ ಧಸ್ಸನ್ನುತ್ತದೆ.

V

ಮಿತ್ರನ ಈ ಭಾಷಣದಿಂದ ಚಂದ್ರನಿಗೆ ಬಹಳ ಕೆಡಕೆನಿ ಸಿತು, ಅಮೃತದಲ್ಲಿ ಕೂಡ ಏನಾದರೂ ದೋಷವಿದ್ದೀತೆಂಬ ದರ ಕಲ್ಪನೆಯು ಕೂಡ ಚಂದ್ರನಿಗಿಲ್ಲ! ತನ್ನ ಅಗ್ರಜನ ದುಃಖ ಪರಿಷ್ಟುತವಾದ ಚರಿತ್ರವನ್ನು ಕೇಳಿ, ಅಂತರಂಗ ದಲ್ಲಿ ಕಳವಳಗೊಂಡ ಚಂದ್ರನ ಮನಸ್ಸಿನಲ್ಲಿ ಅಣ್ಣನ ಬೆನ್ನ ಮೇಲೆ ಮಮತೆಯಿಂದ ಕೈಯಾಡಿ ಅವನನ್ನು ಸಂತೈಸಬೇ ಕೆಂಬ ವಿಚಾರವುಂಟಾಯಿತು. ಆದರೆ ಯಾವನು ಅಮೃತದ ಒಂದು ಯಃಕಶ್ಚಿತ್ ಕಣಕ್ಕೆ ಸಹ ಹೆದರುತ್ತಿರುವನೋ ಅಂಥ ವನು ಪ್ರತ್ಯಕ್ಷ ಸುಧಾಕರನಾದ ನನ್ನನ್ನು ತನ್ನ ಮೈಗೆ ನಿಶ್ಚಯವಾಗಿ ಮುಟ್ಟಿಗೊಡಲಿಕ್ಕಿಲ್ಲೆಂಬದು ಪ್ರತಿ ಕ್ಷಣದಲ್ಲಿ

ಚಂದ್ರನಿಗೆ ಹೊಳೆಯಲು ಅವನು ಸುಮ್ಮನಾಗಿಬಿಟ್ಟನು.

ಇಷ್ಟರಲ್ಲಿ ಸೂರ್ಯನು ಮತ್ತೆ ಚಂದ್ರನಿಗೆ-ಚಂದ್ರಾ' ನನ್ನ ಗತಿಯ ಲೆಕ್ಕದಿಂದ ಪ್ರತಿಯೊಬ್ಬ ಮನುಷ್ಯನ ಆಯುಷ್ಯ ವನ್ನು ಬೋಯಿಸರು ಕಂಡು ಹಿಡಿಯುತ್ತಾರೆ. ಆದರೆ ಹತ ಭಾಗ್ಯನಾದ ಪ್ರತ್ಯಕ್ಷ ಈ ಸೂರ್ಯನು ಇನ್ನು ಎಷ್ಟು ದಿವಸಗಳ ವರೆಗೆ ಬಾಳುತ್ತಾನೆ; ಹಾಗು ಈತನ ಇಹಲೋ ಕದ ಯಾತ್ರೆಯು ಯಾವ ದಿವಸ ಮುಗಿಯುತ್ತದೆ? ಇತ್ಯಾದಿ ಭವಿಷ್ಯಗಳನ್ನು ಈ ವರೆಗೆ ಯಾವನೆ ಇಬ್ಬ ಗಣಕನೂ ಕುಂಡಲಿ ಯನ್ನು ಹಾಕಿ ವರ್ತಿಸಿರುವದಿಲ್ಲ. ನಿಜವಾದ ನನ್ನ ಜನ್ಮ ಕಾಲ ವೇ ತಮಗೆ ತಿಳಿದಿರವವಿತ್ತೆಂದು ಎಲ್ಲ ಜ್ಯೋತಿಷಿಗಳೂ ಅನ್ನು ತಾರೆ. ಅದರಿಂದ ನನ್ನ ರಾಶಿ, ನಕ್ಷತ್ರ, ಜನ್ಮಲಗ್ನ ಮುಂತಾದವುಗಳಲ್ಲೊಂದೂ ಅವರಿಗೆ ಗೊತ್ತಾಗದೆ ಅವರು ನಿರುಪಾಯರಾಗಿದ್ದಾರೆ. ಹೀಗಿಲ್ಲದಿದ್ದರೆ ನಾನು ಹುಟ್ಟಿದಂದಿ ನಿಂದ ಸಾಯುವವರೆಗಿನ ನನ್ನ ಎಲ್ಲ ಸಂಗತಿಗಳ ಭವಿಷ್ಯವನ್ನು ಪ್ರಸಿ ದ್ಧಿಸಲಿಕ್ಕೆ ಅವರು ಹಿಂದು ಮುಂದೆ ನೋಡುತ್ತಿದ್ದಿಲ್ಲ. ಆದರೂ ಆ ಜೋಯಿಸರಲ್ಲಿಯೇ ಕೆಲವು ಜನ ಉಪದ್ವಾಸಿಗಳಾದ ಗಣ ಕರು ಇತ್ತಿತ್ತಲಾಗಿ ಜನ್ಮ ತಾಳಿ ಆಮಗೆ ನನ್ನ ಜನ್ಮ ಕಾಲ ವು ಗೊತ್ತಿರದಿದ್ದರೂ, ಅವರು ನನ್ನ ಮರಣ ಕಾಲವನ್ನು ಕಂಡು ಹಿಡಿದು ಪ್ರಸಿದ್ಧಿಸಿರುವರು! ಅತ್ಯಂತಾನಂ ದದ ಅವರ ಈ ಭವಿಷ್ಯವನ್ನು ಕೇಳಿ, ನನಗೆ ಮಿಗಿಲಾದ ಸಂತೋಷವಾಗುತ್ತಲಿದೆ. ಜೋಯಿಸರ ಅದೂರ ದರ್ಶಕಬುದ್ದಿ ಯಮಲಕವಾಗಲಿ, ಗ್ರಹಗಳ ಚಂಚಲಸ್ವಭಾವದಿಂದಾಗಲಿ ಅವರ ಎಲ್ಲ ಭವಿಷ್ಯಗಳು ಬಹು ಮಟ್ಟಿಗೆ ಸುಳ್ಳು ಬೀಳುತ್ತಿದ್ದ ರೂ, ನನ್ನ ಮರಣ ವಿಷಯದ ಅವರ ಈ ಭವಿಷ್ಯ ವಾದರೂ ದಿಟವಾಗಲೆಂದು ನಾನು ಸದಾಸರ್ವದಾ ಅಪೇಕ್ಷಿಸುತ್ತಿ ದುತ್ತೇನೆ.

ಅಣ್ಣನ ಈ ಮರಣೇಚ್ಛೆಯ ವಾರ್ತೆಯನ್ನು ಕೇಳಿ ಸದ್ಗ

ದಿತ ಅಂತಃಕರಣದ ಚಂದ್ರನು ಗದ್ದ ದಸ್ವರದಿಂದ ಮಿತ್ರನನ್ನು ಕುರಿತು-ಎಲೈ ಸೂರ್ಯನಾರಾಯಣಾ, ಹೀಗೇಕೆ ಅಭದ್ರ ವಾಗಿ ನುಡಿಯುತ್ತೀ? ಹೀಗೆ ಅಶುಭವನ್ನು ಎಂದೂ ಮಾತಾಡ ಬಾರದು. ಒಬ್ಬಾನೊಬ್ಬ ದುಷ್ಟಜೋಯಿಸನು ನಿನ್ನ ವಿಷಯದ ಈ ಅನಿಷ್ಟ ಭವಿಷ್ಯವನ್ನು ತೆಗೆದಿರಬಹುದು; ಆದರೆ ಅವನ ಆ ನಿಂದ ಭವಿಷ್ಯವು ಎಲ್ಲಕ್ಕೂ ಮೊದಲು ಸುಳ್ಳಾಗಲೆಂದು ನಾ ನೊಬ್ಬನೇ ಇಚ್ಛಿಸುತ್ತಿರುವನಂತು, ಈ ತ್ರಿಭುವನ ವಾಸಿಗಳ ದ ಸಕಲ ಚರಾಚರ ಪ್ರಾಣಿಗಳ ಹಾಗೆ ಬಯಸುತ್ತವೆ. ಮತ್ತು ಇಂಧ ಮಹತ್ವದ ವಿಷಯದ, ಜನ್ಮ ಕಾಲವು ಗೊತ್ತಾ ಗದೆ ತೆಗೆದ ಮರಣಕಾಲದ ಭವಿಷ್ಯವು ನಿಜವಾದೀತೆಂಬದು ನನಗೆ ಸ್ವಲ್ಪವೂ ಶಕ್ಯವಾಗಿ ತೋರುವದಿಲ್ಲ. ಕೆಲವು ಸಣ್ಣ ಪ್ರಟ್ಟ ಬಾಬುಗಳಲ್ಲಿ ಈ ಗಣಕರ ಭವಿಷಗಳು ನಿಜವಾಗುವ ದು ಸತ್ಯವಿದೆ. ನಾವು ನವಗ್ರಹಗಳೆಲ್ಲರೂ ಸೈರ (ಮನಸಿಗೆ ಬಂದಹಾಗೆ ಸಂಚುಸುವವರು) ಸಂಚಾರಿಗಳೆಂದು ತಿಳಿದಿರು ತೇವೆ. ಆದರೆ ಈ ಜ್ಯೋತಿಷಶಾಸ್ತ್ರ ನಿಪುಣರು ನಮ್ಮ ಕೈ " ಕಾಲುಗಳನ್ನು ಕಟ್ಟಿ ಬಿಟ್ಟಿದ್ದಾರೆ; ಅವರು ಗೊತ್ತುಪಡಿಸಿದ ಕಾ ಲಕ್ಕಿಂತ ತುಸು ಮಟ್ಟಿಗೆ ಸಹ ನಾವು ಹೆಚ್ಚು-ಕಡಿಮೆ ಹಿಂದೆಮುಂದೆ ಆಗುವಂತಿರುವದಿಲ್ಲ. ಈ ದಿವಸ ಸೂರ್ಯನು ಇಂಥ ಸ್ಥಳದಲ್ಲಿರತಕ್ಕದ್ದು ಎಂದು ಅವರು ಹೇಳಿದರೆಂದರೆ ನೀನು ಸತ್ತು ಕೆಟ್ಟಾದರೂ ಆ ಸ್ಪಳವನ್ನು ಮುಟ್ಟಿಯೇ ತೀರಬೇಕಾ ಗುತ್ತದೆ. ಬಹಳ ಮಾತಾಡುವದರಿಂದೇನು ಪ್ರಯೋಜನ? ಹೇ ಸೂರ್ಯನಾರಾಯಣಾ, ನಾವೀಗ ನಮ್ಮ ಸುಖ-ದುಃಖಗಳನ್ನು ಪರಸ್ಪರರಿಗೆ ಹೇಳುತ್ತ ನಡೆದಿರುವೆನಷ್ಟೇ? ಇವನ್ನಾದರೂ ಬಾಳ ಹೊತ್ತಿನವರೆಗೆ ಒಟ್ಟಿಗೆ ಕುಳಿತು “ ತೋಡಿಕೊಳ್ಳಬೇಕೆಂದರೆ ಅದಕ್ಕೆ ಆ ಜೋಯಿಸರ ಸಮ್ಮತಿಯಲ್ಲಿರುವದು? ನಾವಿಬ್ಬ
ರೂ ಎಷ್ಟೊತ್ತಿನವರೆಗೆ ಪರಸ್ಪರರ ಸನ್ನಿಧಿಯಲ್ಲಿ (ಪರಸ್ಪರರ ಸಹವಾ ಸದಲ್ಲಿ) ರತಕ್ಕದ್ದು ಹಾಗು ಎಷ್ಟೊತ್ತಾದನಂತರ ನಾವು ನಮ್ಮ ಯತಿಯಿಂದ ವಿಭಕ್ತರಾಗಿ ಬೇರೆ ಬೇರೆ ಮಾರ್ಗಗಳಿಂದ ಹ್ಯಾಗೆ ದಾಲಕ್ರವಿಸತಕ್ಕದ್ದು ಎಂಬದನ್ನು ಕೂಡ ಅವರು ನಿಶ್ಚಯಿ ಸಿದ್ದಾರೆ. ಇಷ್ಟೇ ಅಲ್ಲ, ಅವರು ಗೊತ್ತುಪಡಿಸಿದ ನಮ್ಮ ಇಂದಿನ ಸಂಯೋಗಕಾಲವು ಈಗ ತೀರ ಸಮೀಪಿಸಿದಂತಾಗಿದೆ. ಯಾಕಂದರೆ, ಗಣಕರು ಈ ದಿವಸ ಅಮಾವಾಸ್ಯೆಯನ್ನು ಬಹಳ ಸ್ವಲ್ಪ ಗಳಿಗೆ ಇಟ್ಟಿದ್ದಾರೆ; ಹಾಗು ಅವರು ಇಂದೇ ಪ್ರತಿಪದೆಯನ್ನು ಗಣಿಸಿರುವದುಂದ, ಇಂದು ಸಾಯಂಕಾಲ ದಲ್ಲಿ ಭೂಮಿಯ ಮೇಲಿನ ಜನರಿಗೆ ಪ್ರತಿಪದೆಯ ಚಂದ್ರ ದರ್ಶ ನವು ಆಗಿಯೇ ತೀರಬೇಕೆಂಬ ಅವರ ಸಕ್ತ ಹುಕುಂ ನನಗಾ ಗಿದೆ. ಜ್ಯೋತಿಷಿಗಳ ಈ ಹುಕುಮಿನ ಸಂಗತಿಯು ಭೂಮಂ ಡಲದಲ್ಲಿ ಈ ಪೂರ್ವದಲ್ಲಿಯೇ ಪ್ರಕಟವಾಗಿರುವದರಿಂದ ಪೃಥ್ವಿತಲದ ಮೇಲಿನ ಜನರು ನನ್ನನ್ನು ನೋಡುವಕ್ಕಾಗಿ ಪಶ್ಚಿಮ ದಿಕ್ಕಿನ ಅಕಾಶದ ಕಡೆಗೆ ಉತ್ಸುಕತೆಯಿಂದ ಎವೆಯಿ ಇದೆ ನೋಡತೊಡಗಿದ್ದಾರೆ; ಮತ್ತು ಭಾವೀ ಸುವರ್ಣ ಲಾಭದ ಭ್ರಮೆಯಿಂದ ಅವರು ತಂತಮ್ಮ ಸದ್ಯದ ದೋತರ-ಪಂಜೆಗಳ ನೂಲುಗಳನ್ನು ಪರಿಹರಿದು ನನಗೇರಿಸಲಿಕ್ಕೆ ಸಿದ್ಧರಾಗಿರು ತ್ತಾರೆ. ಇತ್ತ ನೋಡು, ಈ ನೈದಿಲೆಗಳು (ಚಂದ್ರನನ್ನು ನೋಡಿ ಅರಳುವ ಕಮಲಗಳು) ಕೂಡ ನನ್ನ ದರ್ಶನದ ಆಪೇ ಕ್ಷೆಯಿಂದ ತಮ್ಮ ಮುಖಗಳನ್ನು ಮಂದ ಮಂದವಾಗಿ ಅರಳಿಸುತ್ತಿವೆ; " ಮತ್ತು ಈ ಚಕ್ರವಾಕ ಪಕ್ಷಿಗಳು ನನ್ನ ಒಂದೆರಡು ದಿನಗಳ ಅದರ್ಶನದಿಂದ ನೀರಡಿಸಿ, ಅಮೃತಬಿಂದು ಗಳನ್ನು ಕುಡಿಯಲಿಕ್ಕೆಂದು ಮೇಲೆ ಮೋರೆಮಾಡಿಕೊಂಡು, ಇನ್ನೂ ಬಿಸಿಲಿರುವದಾದರೂ ಆಕಾಶದಲ್ಲಿ ವಿಹರಿಸತೊಡಗಿವೆ. ಸಾರಾಂಶ, ಈ ಜ್ಯೋತಿಷಿಗಳು ತಮ್ಮ ಕಠಿಣವಾದ ನಿಯಮ
ಗಳಿಂದ ಗ್ರಹ, ನಕ್ಷತ್ರ ದೇವ, ದಾನವ, ಮನುಷ್ಯ, ಪಶು, ಪಕ್ಷಿ, ಮೊದಲಾದವರನ್ನು ಬಿಗಿದುಬಿಟ್ಟಿದ್ದಾರೆ. ಅವರ ಸಂ ಬಂಧದ ಇದೆಲ್ಲ ಸಂಗತಿಯು ವಾಸ್ತವವಾಗಿದ್ದರೂ ಅವರು ವರ್ತಿಸಿದ ಭವಿಷ್ಯಗಳು ಸಟೆಯಗುವದಿಲ್ಲೆಂಬಂತಿಲ್ಲ; ಮತ್ತು ನಾನಾದರೂ ಈಗ ಇಚ್ಚಿಸುವದೇನಂದರೆ, ನಿನ್ನ ಮರಣ ಸಂ ಬಂಧವಾಗಿ ಯಾವ ಜೋಯಿಸರು ಭವಿಷ್ಯವನ್ನು ಹೇಳಿರು ವರೋ, ಅವರ ಭವಿಷ್ಯವು ಸಂಪೂರ್ಣವಾಗಿ ಸುಳ್ಳಾಗಲಿ!

ಆಗ ಸೂರ್ಯನು ನಡುವೆ ಬಾಯಿ ಹಾಕಿ___ "ಬೇಡ-

ಬೇಡ, ಚಂದ್ರಾ, ಹೀಗೆ ಅಭದ್ರವಾಗಿ ಮಾತಾಡಬೇಡ. ನನ್ನ ಅಂತಕಾಲದ ವಿರುದ್ಧವಾಗಿ ನೀನು ಹೀಗೆ ಕೊಂಚಮಾತ್ರವೂ ಸದಿಚ್ಛೆಯನ್ನು ವಹಿಸಬೇಡ. ಈ ಕಡು ದುಃಖದಿಂದ ನನಗೆ ಮೈ ಮುಕ್ತವಾಗಗೊಡು, ನೀನು ನನ್ನ ನಿರ್ವಾಣ ಸುಖಕ್ಕೆ ಅಡ್ಡಾಗಬೇಡ. ನಾನು ಈ ಸರಿ ದುಃಖದಿಂದ ಬದುಕಿಯಾ ದರು ಮಾಡುವದೇನದೆ? ಚಂದಾ, ನಿನ್ನ ಮಾತು ಬೇರಿದೆ. ಈಗ ನೀನು ಸಾರಿದಂತೆ ನಿನ್ನ ಆಗಮನಕ್ಕಾಗಿ ಇಡಿ ಜಗತ್ತೇ ಉತ್ಸುಕವಾಗುತ್ತದೆ; ಹಾಗು ನಿನ್ನ ಉದಯವಾದರೆ ಸರ್ವ ಜಗತ್ತೇ ಸಂತೋಷಪಡುತ್ತದೆ. ಆದರೆ ನನ್ನ ಸ್ಥಿತಿಯು ಹಾಗಿ ರುವದಿಲ್ಲ. ನನ್ನ ಉತ್ಕರ್ಷವು ಯಾರಿಗೂ ಸಹನವಾಗುವದಿಲ್ಲ; ಇಷ್ಟೇ ಅಲ್ಲ, ನನ್ನ ಅಧಃಪಾತವು ಯಾವಾಗಾದೀತೆಂದು ಎಲ್ಲ ರೂ ಹಾದೀ ನೋಡುತ್ತಿರುತ್ತಾರೆ. ಈಗ ನನಗೂ ನನ್ನ ಜೀ ವಿತದಲ್ಲಿ ಅರ್ಥವುಳಿದಿರುವದಿಲ್ಲ. ಆದ್ದರಿಂದ ಮರಣವು ಎಷ್ಟು ಬೇಗನೆ ಬಂದೀತೋ, ಅಷ್ಟು ಬೇಗನೆ ಅದು ನನಗೆ ಬೇಕಾಗಿರುತ್ತದೆಂದು ನಾನನ್ನು ತ್ತೇನೆ. ನಾನು ಈ ಅಸಹ್ಯ ದುಃಖದಿಂದ ಒಂದೇ ಸವನೆ ಉರಿಯುತ್ತಿರುತ್ತೇನೆ; ಮತ್ತು ಎಂದಿಲ್ಲೊಂದು ದಿವಸ ನನ್ನ ಕೈ ಕಾಲುಗಳು ತಣ್ಣಗಾಗತ ಕ್ಯವೇ ಎಂದು ಈ ಸೂರ್ಯ ಶರೀರದ ಧನ್ವಂತರಿಗಳಾದ
ಜ್ಯೋತಿಷ ಶಾಸ್ತ್ರ ನಿಪುಣರ ಮತವಾಗಿರುತ್ತದೆ. ಮಿತ್ರಾ ಚಂದ್ರಾ, ನಮ್ಮ ಕೆಳಗಿನ ಈ ಭೂತಲದ ಮೇಲಿನ ಮನು ಮೂರ ಶರೀರಗಳು ಅವರು ಸತ್ತ ಬಳಿಕ ಸುಡಲ್ಪಡುತ್ತವೆ. ಆದರೆ ಈ ನಿನ್ನ ಮಿತ್ರನ ಶ್ರೇಷ್ಠತ್ವವೂ, ಹತಭಾಗ್ಯತ್ವವೂ ಮಿಗಿಲಾಗಿರುವದರಿಂದ, ನನ್ನ ದೇಹವು ನಾನು ಜೀವಗಿಂಗಿ ರುವಾಗಲೇ ಸುಡುತ್ತಿರುತ್ತದೆ. ಈ ನನ್ನ ದುರ್ಭಾಗ್ಯಕ್ಕೇನೆ ಬೇಕು? ಈ ಬಗೆಯ ಈ ಶ್ರೇಷ್ಟತನ ನನಗೆ ಸಾಕಾ ಗಿದೆ. ಸೂರ್ಯನ ದೇಹದ ಉಷ್ಣತೆಯು ಬರಬರುತ್ತ ಕಡಿಮೆ ಯಾಗುವದರಿಂದ ಒಂದಾನೊಂದು ದಿನ ಅದು ವಿಶೇಷವಾಗಿ ಅವನು ಇಲ್ಲದಂತಾಗುವನೆಂದು ಕೆಲವು ಶೋಧಕ ಗಣಕರು ಗಣಿತ ಹಾಕಿ ನಿಶ್ಚಯಸಿದರೆ, ಉಳಿದ ಎಷ್ಟೋ ಅಹಂಮನ ಜೋಯಿಸರು ಅವರನ್ನು ಹುಚ್ಚರ ವರ್ಗದಲ್ಲಿ ಸೇರಿಸಿ ನಗು ವರು. ಆದರೆ ನಾನು ನನ್ನ ಕಷ್ಟಮಯ ಜೀವಿತಕ್ಕೆ ಬಹಳ ವಾಗಿ ಬೇಸತ್ತಿರುವದರಿಂದ ಎಂದಾದರೊಂದು ದಿನ ಆ ಗಣ ಕರು ವರ್ತಿಸಿದ ನನ್ನ ಮರಣದ ಭವಿಷ್ಯವನ್ನು ಸತ್ಯವಾಗ ಮಾಡಲಿಕ್ಕೆ ನಾನು ಪ್ರಯತ್ನಿಸದೆ ಇರಲಿಕ್ಕಿಲ್ಲ,

ಬಳಿಕ ಚಂದ್ರನು ಮನಸ್ಸಿಲ್ಲದಿದ್ದರೂ ತನ್ನ ಗತಿಯ

ದಿಕ್ಕನ್ನು ಸಾವಕಾಶವಾಗಿ ಬದಲಿಸುತ್ತ-'ಎಲೈ ಭಾಸ್ಕರಾ, ಹೀಗೆ ನೀನು ನಿರಾಶನಾಗಬೇಡ. ನೀನು ನಿನ್ನ ಚಿತ್ರವನ್ನು ತುಸು ಶಾಂತವಾಗಮಾಡು. ಈ ಪ್ರಕಾರದ ದುಷ್ಟ ವಿಚಾರದಿಂದ ನಿನ್ನ ತಲೆಯು ಇರ್ಮಣಹೊಂದಿರುವಾಗ, ನಿನ್ನ ಬಳಿಯಲ್ಲಿದ್ದು ನಿನ್ನ ಶರೀರದ ಬಗ್ಗೆ ಎಚ್ಚರಿಕೆ ಪಡುವರಾರಾದರೂ ನಿನಗೆ ಅವಶ್ಯ ಎಗಿ ಬೇಕು. ನಿನಗೆ ಯಾವದಾದರೂ ಶೈತ್ಯೋಪಚಾರ ವನ್ನು ಮಾಡಿ, ನಿನ್ನ ಪ್ರಕೃತಿಯನ್ನು ಸುಧಾರಿಸುವದು ನನ್ನ ಕರ್ತವ್ಯವಾಗಿದೆ; ಆದರೆ ಮಾಡಲೇನು? ಈ ಮೊದಲೇ ಸೂಚಿಸಿದಂತೆ ನಮ್ಮಿರ್ವರ ವಿಯೋಗದ ಕಾಲವು ಬಂದೇ ಬಿಟ್ಟಿ
ತು, ನಿನ್ನ ಇಂಥ ಮರಣೋನ್ಮುಖವಾದ ಅವಸ್ಥೆಯಲ್ಲಿ ಯ ನಿನ್ನೊ ಬ್ಬನನ್ನೇ ಬಿಟ್ಟು ಕೊಟ್ಟು, ನಾನು ನನ್ನ ಕೆಲಸದ ಮೇಲೆ ಹಾಜರಾಗಲಿಕ್ಕೇ ಬೇಕಾಗಿರುತ್ತದೆ. ಪರಾಧೀನ ತೆಯ ಬಗ್ಗೆ ಉಪಾಯವೇ ಇಲ್ಲ! ಈ ದುಃಸ್ಥಿತಿಯಲ್ಲಿ ನಾನು ನಿನ್ನ ಬಳಿಯಿಂದ ಹೋಗುವಂತೆಯಇಲ್ಲ; ನಿಲ್ಲುವಂತೆಯೂ ಇಲ್ಲ.

ಹೊರಟು ಹೋಗಲಿಕ್ಕೆ ಕೈಸನ್ನೆ ಯನ್ನು ಮಾಡುತ್ತ

ಸೂರ್ಯನು ಚಂದ್ರನನ್ನು ಕುರಿತು-ಹೋಗು, ಹೋಗು; ಚಂದ್ರಾ, ನೀನು ಹೊರಟು ಹೋಗು. ಚಂದಾ, ನೀನು ನಿಂತರೂ ನನ್ನ ಸಂತಾಪವು ಸ್ವಲ್ಪವೆ ನಿಲ್ಲುವಂತಿದೆ. ಅದು ನನ್ನ ಜೀವಿತದೊಡನೆಯೇ ಲಯವಾಗತಕ್ಕದ್ದು; ಅದ್ದರಿಂದ ನಿನಗೆ ನನ್ನ ಕಡೆಗೆ ಲಕ್ಷ ಗೊಡದೆ ಹೊರಟುಹೋಗೆಂ ದು ಹೇಳುತ್ತೇನೆ. ನಿನ್ನಂತೆ ನನಗಾದರೂ ಇಂಥ ಈ ಕುಣ ಸ್ಥಿತಿಯಲ್ಲಿಯೂ ಸ್ವೀಕೃತ ಕಾರ್ಯಕ್ಕಾಗಿ ನನ್ನ ದಾರಿ ಯ ಹಿಡಿಯಬೇಕಾಗಿದೆ. ನಮೀ ರ್ವರ ಈ ಕ್ಷಣಿಕ ಸುಖಕರ ವಾದ ಬಂಧ:-ಸಮಾಗಮದ ಅವಧಿಯು ತೀರಿತು. ಇಗೋ ಇತ್ರ ನೋಡು, ನನ್ನ ರಥವೂ ಬೇರೆ ದಿಕ್ಕಿನ ಮಾರ್ಗವನ್ನು ಹಿಡಿಯಿತು. ನಾವು ಹೀಗೆ ಪರಸ್ಪರರ ಕಡೆಯ, ಭಟ್ಟಿಯನ್ನು ತಕೊಳ್ಳ ಹತ್ತಿರುವಷ್ಟರಲ್ಲಿ, ಇದು ನೋಡು, ನಮ್ಮಿರ್ವರ ರಧಗಳ ನಡುವೆ ಎಷ್ಟೊಂದು ಅಂತರವಾಯಿತು!ಅರುಣಾ, ನಮ್ಮಿಬ್ಬರು ಬಂಧುಗಳ ಈ ಕಡೆಯ ಬೆಟ್ಟಿಗೆ ಸ್ವಲ್ಪಾದರೂ ಹೆಚ್ಚು ವೇಳೆ ಸಿಗಲೆಂದು ನೀನು ನನ್ನ ಕುದುರೆಗಳ ಕಡಿವಾಣಗ ಳನ್ನು ಬಹು ನಿಷ್ಟುರತೆಯಿಂದ ಜಗ್ಗಿ ಹಿಡಿಯುತ್ತಿರುವೆ; ಆದರೆ ಇದರಿಂದೆಷ್ಟು ವೇಳೆ ಸಿಕ್ಕಿತು? ನಾನೂ ಹೊರಡಲೇಬೇಕು!-- ಚಂದ್ರಾ, ಹೋಗು, ನೀನು ಇನ್ನು ಹೊರಟುಹೋಗು... ಅರುಣಾ, ಕುದುರೆಗಳ ಲಗಾಮುಗಳನ್ನು ಜಗ್ಗ ಬೇಡ, ಬಿಡು. ನನ್ನ ಸಲುವಾಗಿ ಪಾಪ! ಆ ಬಡ ಪ್ರಾಣಿಗಳಿಗಾಗುವ ಕಷ.
ವನ್ನು ನಾನು ನೋಡಲಾರೆನು.-ಚಂದ್ರಾ, ನಿನ್ನ ರಥವು ಮುಂದೆ ಹೊರಟು ಹೋಗಿದ್ದರೂ ನೀನು ನಿನ್ನ ದೃಷ್ಟಿಯನ್ನು ಹಿಂದುರಿಗಿಸಿ ನೋಡುತ್ತಿರುವೆಯಲ್ಲ? ನೀನು ಹೀಗೆ ಎಷ್ಟೋ ತಿನ ವರೆಗೆ ನೋಡುವೆ?_ಅರುಣಾ, ನವ, ಕುದುರೆಗಳ ಕಡಿವಾಣಗಳನ್ನು ತೀರ ಸಡಿಲಾಗಿ ಬಿಡು, ಮತ್ತು ಅದಕ್ಕೆ ಮನೋವೇಗದಿಂದ ಓಡಗೊಡು.ಚಂದ್ರಾ, ನೀನು ಕಂಬನಿ ಗಳನ್ನು ಒರಿಸಿಕೊಂಡು ಒಂದುರಿಗಿ ನೋಡುವದನ್ನು ಬಿಟ್ಟು ಕೊಟ್ಟು ನಿನ್ನ ರಥದ ಗತಿಯ ಕಡೆಗೆ ಲಕ್ಷಗೊಡು. ಅಂದರೆ, ಅದು ಅಸ್ಥಲಿತವಾದೀತು.

ತನ್ನ ಕಣ್ಣುಗಳನ್ನು ಒರಿಸುತ್ತೊರಿಸುತ್ತ ಚಂದ್ರನು----

“ಎಲೈ ಅಣ್ಣನೇ, ನಾನು ನಿನ್ನೆಡೆಗೆ ತಿರುಗಿ ನೋಡದಿರುವದು ಶಕ್ಯವೇ ಇಲ್ಲ. ನೀನು ಎಲ್ಲಿಂದ ಎಷ್ಟು ಕಾಣುವೆಯೋ, ಅಲ್ಲಿಂದಅಷ್ಟೇ ನಾನು ನಿನ್ನ ಕಡೆಗೆ ನೋಡದೆ ಇರಲಿಕ್ಕಿಲ್ಲ. ನನ್ನ ಜೀವಿತವೆಲ್ಲ ನಿನ್ನನ್ನವಲಂಬಿಸಿರುತ್ತದೆ. ನಿನ್ನನ್ನು ಬಿಟ್ಟರೆ, ನನ್ನ ಹೃದಯವೆಲ್ಲ ಕತ್ತಲು ಗವಿಯಬಹುದು. ನಿನ್ನ ವಿಯೋಗ ದುಃಖವು ನನ್ನಿಂದ ಸಹಿಸಲಶಕ್ಕವು. ಆದ್ದರಿಂದ ನಾನು ಈಗ ಹೋಗುತ್ತಿದ್ದರೂ, ಇನ್ನೊಂದು ತಿಂಗಳಿಗೆ ನಿನ್ನ ಭೆಟ್ಟಿಗಾಗಿ ನಿನ್ನೆಡೆಗೆ ನಿಶ್ಚಯವಾಗಿ ಬರದಿರಲಾರೆನು!

ಹೀಗೆ ಚಂದ್ರನು ಮಾತಾಡುತ್ತಿರಲಿಕ್ಕೆ ಸೂರ್ಯ-ಚಂ

ದ್ರರ ರಥಗಳ ನಡುವಿನ ಅಂತರವು ಬೆಳೆಯಿತು. ಹಾಗೂ ಪರ ಸ್ಪರರು ಮಾತಾಡುವ ಮಾತುಗಳು ಪರಸ್ಪರರಿಗೆ ಸ್ಪಷ್ಟವಾಗಿ ಕೇಳದಾದವು. ಆಗ ಸೂರ್ಯನು ತನ್ನ ಮೊರೆಯನ್ನು ಹಿಂದಿ ರುಗಿಸಿ ಚಂದ್ರನಿಗೆ ಕೈಸನ್ನೆ ಮಾಡುತ್ತ ಗಟ್ಟಿಯಾಗಿ “ಬೇಡ, ಬೇಡ, ಚಂದ್ರಾ, ನೀನಿನ್ನು ನನ್ನ ಬಳಿಗೆ ಬರ ಬೇಡ, ನಾನು ಇನ್ನು ಮುಂದೆ ನಿನಗೆ ಭೆಟ್ಟಿಯಾಗಲಿಕ್ಕಿಲ್ಲ. ಇಂದಿನ ಈ ಭೆಟ್ಟಿಯೇ ನನ್ನ ನಿನ್ನ ಕಡೆಯ ಭೆಟ್ಟಿಯೆಂದು ತಿಳಿದುಕೊ, ಎಂದು ನುಡಿದನು.

ಸೂರ್ಯನ ನಿರಾಶೆಯ ಈ ನುಡಿಯನ್ನು ಕೇಳಿ ಚಂದ್ರ

ನಿಗೆ ಬಹಳ ಕೆಡಕೆನಿಸಿತು. ಆದರೆ ಚಂದ್ರನ ತಲೆಯು ಶಾಂ ತವಾದದ್ದರಿಂದ, ಸೂರ್ಯನಾರಾಯಣನು ಅವಿನಾಶಿಯ, ಅಜರನೂ, ಅಮರನೂ ಎಂಬ ವಿಚಾರವು ಅವನಲ್ಲಿ ಜಾಗ್ರತವಾ ಗಿತ್ತು. ಅದರಿಂದ ಅವನು ಕೂಡಲೆ ಸೂರ್ಯನನ್ನು ದೇಶಿ ಸಿ--ಎಲೈ ಸೂರ್ಯನಾರಾಯಣಾ, ನಿನ್ನ ತಲೆಯೊಳಗಿನ ಈ ಭ್ರಮೆಯನ್ನು ನೀನು ತೆಗೆದು ಹಾಕು, ನಿನ್ನ ನನ್ನ ಕಡೆಯ ಬೆಟ್ಟಿಯೆಂದು ನೀನೆಂದೂ ಭಾವಿಸತಕ್ಕದ್ದಲ್ಲ. ಯಾವ ಸಚ್ಚಿದಾ ನಂದ ಸರಮೇಶನು ನಮ್ಮೆಲ್ಲರನ್ನು ಹುಟ್ಟಿಸಿರುವನೋ ಅವನ ಇಚ್ಛೆಯು ಹೀಗಿರುವದಿಲ್ಲ. ಹಾಗೂ ಆತನ ಇಚ್ಛೆಯ ವಿನಃ ಯಾವ ಸಂಗತಿಯು ಎಂದೂ ಘಟಿಸಲಾರದು.

ರಥವು ಒತ್ತರದಿಂದಲೂ ಚಂದ್ರನಿಂದ ಬಹುದೂರವಾ

ಗಿಯ ನಡೆದಿದ್ದರೂ ಕೂಡ ಸೂರ್ಯನು ಯಾವ ಪರಮೇ ಶ್ವರನ ಇಚ್ಛೆಯ ಬಗ್ಗೆ ನೀನಿಷ್ಟು ವಿಶ್ವಾಸವನ್ನು ವಹಿಸಿರುವ ಯೋ ಆ ಪರಮೇಶ್ವರನು ನನಗೆ ಈ ವರೆಗೆ ಎಲ್ಲಿಯ ಭೆಟ್ಟಿಯಾಗಿರುವದಿಲ್ಲವಲ್ಲ? ಅವನು ನನಗೆಂದಾದರೂ ಕೂಡಿ ದರೆ, ನನ್ನನ್ನು ಈ ಸರಿ ದುಃಖಮಯ ಸ್ಥಿತಿಯಲ್ಲಿಡುವದ ರಿಂದ ನಿನಗಾವ ಪುರುಷಾರ್ಥವು ಲಭಿಸುವದದೆಯೆಂದು ನಾನು ಅವನಿಗೆ ಸ್ಪಷ್ಟವಾಗಿ ವಿಚಾರಿಸತಕ್ಕವನಿದ್ದೇನೆ. ಆದರೆ ಅವ ನು ನನಗೆಲ್ಲಿಯ ಕಾಣುವದಿಲ್ಲ, ಎಂದು ಒದರಿ ಹೇಳಿದನು.

“ಅವನಂತೂ ಎಲ್ಲಿನೋಡಿದದಲ್ಲಿ ಕಾಣುತ್ತಾನೆ ಎಂದು

ಚಂದ್ರನು ಕೂಗಿದನು.

ಸೂರ್ಯ-ಹಾಗಾದರೆ ನಾನು ಅವನನ್ನು ಪ್ರತಿನಿ

ತ್ಯವೂ ಶೋಧಿಸುತ್ತಿರುತ್ತೇನೆ, ಅವನ ಗಂಟು ಬೀಳುವ ಸಲು ವಾಗಿ ಹಾಗು ಅವನಿಗೆ ಈ ಪ್ರಶ್ನೆಯನ್ನು ಕೇಳುವಸಲುವಾಗಿ
ಈಗೆಷ್ಟೋ ವರ್ಷಗಳಿಂದ ಈ ವಿಶ್ವವಲಯದ ಸುತ್ತಲೂ ನಾನು ಭ್ರಮಣಮಾಡುತ್ತಲಿದ್ದೇನೆ. ಇಂದಿಗೂ ನನಗೆ ಅವನ ದರ್ಶನವಾಗಿರುವದಿಲ್ಲ. ಆದರೆ ಆ ವಿಶ್ವೇಶ್ವರನನ್ನು ಇನ್ನು ಹುಡುಕದೆ ಬಿಡುವಹಾಗಿಲ್ಲ. ಎಂಬ ದೃಢನಿಶ್ಚಯದಿಂದ ನಾನು ನನ್ನಿ ಸಂಕ್ರಮಣವನ್ನು ಪ್ರಾರಂಭಿಸುತ್ತೆನೆ ಅವನು ಎಲ್ಲಿಯಾದರೂ ಕತ್ತಲೆಯಲ್ಲಿ ಅಡಗಿಕೊಂಡು ಕೂತಿರದಿದ್ದರೆ; ನಾನು ಅವನನ್ನು ಶೋಧಿಸದೆ ಬಿಡಲಿಲ್ಲ. ಯಾವನು ಬಾನೊಬ್ಬ ಅಜ್ಞಾನಾಂಧ ಡೋಂಗಿಗೆ ಕೂಡ ಕಾಣುತ್ತಾ ನೆಂದು ಅನ್ನುತ್ತಾರೆಯೋ, ಅವನು ಜಗಜರು ರ್ಭೂತನಾದ ಈ ಸೂರ್ಯನಿಗೆ ಕಾಣಬಾರದೆಂಬದು ಬಹಳ ಸೋಜಿಗದ ಸಂಗತಿಯಾಗಿರುತ್ತದೆ.

ಹೀಗೆ ಸೂರ್ಯನು ನುಡಿದನು, ಆದರೆ ಈ ಭಾಷಣದ

ಕಡೆಕಡೆಯ ಭಾಗವು ಚಂದ್ರನಿಗೆ ಕೇಳಿಸಲೇ ಇಲ್ಲ. ಆಗ ಆ ಇಬ್ಬರ ರಥಗಳ ನಡುವೆ ಬಸತಿ ಆಂತರವಾಯಿತು. ನೂ ರ್ಯನ ರಥವು ಬಹು ಒತ್ತರದಿಂದ ನಡೆಯತೊಡಗಿತ.. ಹಾಗು ಚಂದ್ರನು ಕ್ರವು ಕ್ರಮವಾಗಿ ಹಿಂದೆ ಬೀ'ನರ ದನು. ಈ ಪ್ರಕಾರವಾಗಿ ಆ ಸೂರ್ಯ-ಚಂದ್ರರ ರರಗಲ್ ನಡುವಿನ ಅಂತರವು ಕ್ರಮೇಣ ಹೆಚ್ಚಾಗುತ್ತ ನಡೆದದ ರಿಂದ ಅವರೀರ್ವರ ಭಾಷಣವು ಸಹಜವಾಗಿಯೇ ಅಶಕ್ಯ ವಾಗಿ ಅದು ಕಟ್ಟಾಗಿಹೋಯಿತು.