ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತೀಯರ ಇತಿಹಾಸವು.

೩೦೮

ಮಕ್ಕಳನ್ನು ಹುಗಿಯುವ ರೂಢಿಯನ್ನು ಮುರಿದರು. ಬಹುಸ್ಪ್ರತಿತ್ವದ ಪದ್ಧತಿಯನ್ನು ತಳ್ಳಿ, ವ್ಯಭಿಚಾರ ಮಾಡುವವನಿಗೆ ಫಟಕಿಯು ಶೀಕ್ಷೆಯನ್ನೂ, ವ್ಯಭಿಚಾರಿಣಿಗೆ ದೇಹಾಂತ ಶೀಕ್ಷೆಯನ್ನೂ ವಿಧಿಸಿ, ಸಮಾಜದೊಳಗೆ ಶೀಲದ ಮೇಲ್ಮೆಯನ್ನೂ ಬೆಳೆಯಗೊಟ್ಟರು. ತಮ್ಮ ಧರ್ಮದವರೆಲ್ಲರೂ ಬಾ೦ಧವ್ಯದಿಂದ ನಡೆದುಕೊಳ್ಳಬೇಕೆಂದು ಪೈಗಂಬರವರ ಮನೀಷೆಯಿದ್ದರೂ ಕೊನೆಯ ವರೆಗೂ ಅದು ಸಫಲವಾಗದೆ ಉಳಿಯಿತು. ಮಹಮ್ಮದವರ ಉಪದೇಶಾಮೃತವು ಬರಿಯ ಗಂಡಸರಲ್ಲೇ ಮೂಡದೆ ಹೆಂಗಸರಲ್ಲಿಯೂ ಬೇರು ಬಿಟ್ಟುಕೊಂಡಿತು. ಆದರಿಂದ ಆವೇಶಗೊಂಡವರಾಗಿ, ಮಹಮ್ಮದೀಯ ಸ್ತ್ರೀಯರು ಸಹ ಯುದ್ಧಕ್ಕೆ ಪತಿಗಳೊಡನೆನಾಗಿ, ಅವರಿಗೆ ತಮ್ಮ ಸಹವಾಸದಿಂದ ಧೈರ್ಯಗೊಡುತ್ತಿದ್ದರು; ಮಧುರಗಾನದಿಂದ ಉತ್ಸಾಹವನ್ನುಂಟು ಮಾಡುತ್ತಿದ್ದರು.

ಇಸ್ಲಾಮ ಧರ್ಮದಿಂದ ಹಿಂದುಸ್ಥಾನದ ಮೇಲಾದ ಪರಿಣಾಮ:-ಅರಬಸ್ಥಾನದಲ್ಲಿ ಹುಟ್ಟಿದ ಇಸ್ಲಾಮಧರ್ಮವು ಹಿಂದುಸ್ಥಾನಕ್ಕೆ ಯಾವ ರೀತಿಯಾಗಿ ಪರಿಣಮಿಸಿತೆಂಬದನ್ನು ನೋಡುವದೊಂದು ಚರಿತ್ರೆಗಾರರ ಕೆಲಸವಿದೆ. ಅರಬಸ್ಥಾನವು ಇಸ್ಲಾಮಧರ್ಮವನ್ನು ಸ್ವೀಕರಿಸುವದಕ್ಕಿಂತ ಮುಂಚೆ ಸಹ ಹಿಂದೂದೇಶಕ್ಕೂ ಅರಬಸ್ಥಾನಕ್ಕೂ ವ್ಯಾಪಾರದ ಸ೦ಬ೦ಧವಿದ್ದಿತು. ಅ೦ತೂ ಅರಬರಿಗೆ ಹಿಂದುಸ್ಥಾನದ ಬಗ್ಗೆ ಎಲ್ಲ ಸ೦ಗತಿಯು ಚನ್ನಾಗಿ ಗೊತ್ತಿತ್ತು; ಆದರೂ ಕೈಯಲ್ಲಿ ಬಲವಿಲ್ಲದವರಿಗೆ ಕೈ ಬಳಿಯಿರುವ ವಸ್ತುವಿನ ಕಡೆಗೆ ಲಕ್ಷ ಹೋಗುವದೆಂತು? ಮಹಮ್ಮದ ಪೈಗಂಬರವರ ಉದ್ಬೋಧದಿಂದ ಎಚ್ಚರಾಗಿ ರಾಜಕೀಯ ಧಾರ್ಮಿಕ ಕಾರ್ಯಗಳನ್ನು ರಟ್ಟೆಯ ಬಲದಿಂದ ಸಾಧಿಸಬೇಕೆಂಬು ದಿವ್ಯ ಮ೦ತ್ರವು ಕಿವಿಗೆ ಬಿದ್ದೊಡನೆ ಅರಬರು ತಮ್ಮ ಜನರನ್ನು ಗುಂಪು ಗಟ್ಟಿಕೊಂಡು ಬೇರೆ ಬೇರೆ ಪ್ರದೇಶಗಳಲ್ಲಿ ನುಗ್ಗಿ ಹಳ್ಳಿಪಳ್ಳಿಗಳನ್ನು ಸುಲಿದು ಸುಡುವರು, ಅಲ್ಲಿನ ಜನರನ್ನು ದಾಸರನ್ನಾಗಿ ಮಾಡುವದು, ಇವೇ ಅಮಾನುಷ ಕರ್ಮಗಳನ್ನು ಎಗ್ಗಿಲ್ಲದೆ ನಡೆಯಿಸಿದರು. ಇದರಿಂದ ಮುಸಲ್ಮಾನಧರ್ಮವೂ, ರಾಜ್ಯವೂ ಎರಡೂ ಬೆಳೆದುವು. ಅಷ್ಟೇಕೆ! ಕಾಡುಜನರೆ೦ದೆನಿಸಿಕೊಳ್ಳುವ ಮುಸಲ್ಮಾನರು ಮು೦ದೆ ಸುಧಾರಣೆಯ