ಅಂಬುಜದಳಾಕ್ಷಗೆ
ಗೋಚರ
ಅಂಬುಜದಳಾಕ್ಷಗೆ
[ಸಂಪಾದಿಸಿ]ಅಂಬುಜದಳಾಕ್ಷಗೆ ಮಂಗಳ ||ಪಲ್ಲವಿ||
ಸರ್ವ ಜೀವರಕ್ಷಕಗೆ ಮಂಗಳ ||ಅನು ಪಲ್ಲವಿ||
ಜಲಧಿಯೊಳಾಮ್ನಾಯ ತಂದಗೆ
ಮಂಗಳಕುಲಗಿರಿ ತಾಳ್ದಗೆ
ಜಯಮಂಗಳನೆಲನ ಕದ್ದಸುರನ ಗೆಲಿದಗೆ
ಮಂಗಳಚೆಲುವ ನರಸಿಂಹಗೆ ಶುಭಮಂಗಳ ||1||
ವಸುಧೆಯ ಈರಡಿಗೈದಗೆ
ಮಂಗಳವಸುದಾಧಿಪರಳಿದಗೆ
ಜಯಮಂಗಳದಶಕಂಧರನನ್ನು ಗೆಲಿದಗೆ
ಮಂಗಳಪಶುಗಳ ಕಾಯ್ದಗೆ ಶುಭ ಮಂಗಳ ||2||
ಪುರ ತ್ರಯ ವಧುಗಳ ಗೆಲಿದಗೆ
ಮಂಗಳತುರಗ ವಾಹನನಿಗೆ
ಜಯ ಮಂಗಳವರ ನೆಲೆಯಾದಿಕೇಶವನಿಗೆ
ಮಂಗಳಪರಮ ಪತ್ನಿವ್ರತಗೆ ಶುಭ ಮಂಗಳ ||3|||[೧][೨]
ನೋಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
[ಸಂಪಾದಿಸಿ]- ↑ ರಾಘವೇಂದ್ರ ಫೌಂಡೇಶನ್ ಅವರ ಸಂಗ್ರಹ
- ↑ ಕನಕದಾಸರ ಕೃತಿಗಳು -ಟಿ.ಕೃಷ್ನಯ್ಯಸೆಟ್ಟಿ & ಸನ್ಸ್ ೧೯೪೦.