ಈ ಪುಟವನ್ನು ಪ್ರಕಟಿಸಲಾಗಿದೆ
- ೫೦ -
ಮಾಡಬೇಕು. ಅವರು ಇಲ್ಲಿಯವರೆಗೆ ಅಂತರಿಕ್ಷದ ಮತ್ತು ಹವೆಯ ಸಂಬಂಧವಾದ ಯಾವ ಯಾವ ಆಂಶಗಳನ್ನು ಗೊತ್ತು ಮಾಡುವದಕ್ಕೆ ತಿಳಿದಿರುತ್ತಾರೋ ಅವುಗಳ ಸಂಗಡ ದಿನದ ಉಷ್ಣಮಾನಗಳನ್ನು ಕೂಡಿಸಿ ಕೆಳಗೆ ತೋರಿಸಿರುವಂತೆ ಒಂದು ಪಟ್ಟಿಯನ್ನು ಮಾಡಬೇಕು.
ಹವೆಯ ನಿರೀಕ್ಷಣೆ.
ತಾರೀಖು | ಉಷ್ಣಮಾಪಕ ಯಂತ್ರದ ಪರಮಾವಧಿ, ಕನಿಷ್ಠಾವಧಿ | ಗಾಳಿಬೀಸುವ ದಿಕ್ಕು | ಮೋಡಗಳ ಸ್ಥಿತಿ | ಮಳೆಯ ಪ್ರಮಾಣ |
---|---|---|---|---|
೧ | ||||
೨ | ||||
೩ | ||||
ಒಂದು ದಿನದ ಉಷ್ಣಮಾನದ ಅವಧಿಗಳಿಗೂ ಮರುದಿನದ ಅವಧಿಗಳಿಗೆ ಇರುವ ತಾರತಮ್ಯವನ್ನು ತೋರಿಸಲು ಹಿಂದೆ ಸಾಧಾರಣ ಉಷ್ಣವಾಪಕ ಯಂತ್ರ ನಿರೀಕ್ಷಣೆಯಲ್ಲಿ ವಿವರಿಸಿದಂತೆ ನಕ್ಷೆಯನ್ನು ತಯಾರುಮಾಡಿ ಅದರಲ್ಲಿ ಮೇಲ್ಭಾಗದಲ್ಲಿ ಪರಮಾವಧಿಯನ್ನೂ ಕೆಳಭಾಗದಲ್ಲಿ ಕನಿಷ್ಟಾವಧಿಯನ್ನೂ ಗುರ್ತುಮಾಬಹುದು.