ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸುಶೀಲೆ

!!ಶ್ರೀಃ!!

ಪಂಚಮ ಪರಿಚ್ಛೇದ.

______∆______

(ನಮ್ಮ ಸ್ತ್ರೀ ಸಮಾಜದಲ್ಲಿ)

ಗಿರಿಯಮ್ಮನ ಮನೆ ದೊಡ್ಡದಲ್ಲ. ಸಾಮಾನ್ಯವಾದ ಹೆಂಚಿನಮನೆ. ಹಳೆಯ ಪದ್ಧತಿಯಂತೆಯೇ ಕಟ್ಟಲ್ಪಟ್ಟಿದ್ದುದು, ಬೀದಿಯ ಬಾಗಿಲಲ್ಲಿ ಎರಡು ಕಡೆಯಲ್ಲಿಯ ಪಡಸಾಲೆ; ಒಳಹೊಕ್ಕರೆ ಒಂದು ಸಣ್ಣ ನಡುಮನೆ; ಅಲ್ಲಿಂದ ಒಳಗೆ ಹೋದರೆ ದೊಡ್ಡದಾದ ಹಜಾರೆ; ಅವರ ಹಿಂದೆ ಒಂದೆರಡು ಕಿರುಮನೆಗಳು; ಹಿಂಗಡೆಯಲ್ಲಿ ಊಟದ ಅಂಗಳ; ಅದಕ್ಕೆ ಹಿಂಗಡೆ ಹಿತ್ತಲು; ಹಿತ್ತಲಲ್ಲಿ ಬಗೆಬಗೆಯ ಗಿಡಗಳಿದ್ದುವು. ಮಧ್ಯಭಾಗದ ಹಜಾರದಲ್ಲಿಯೇ ಗಿರಿಯಮ್ಮನ ಗಂಡನು ಓಲೆಯ ಪುಸ್ತಕಗಳನ್ನು ಹಿಡಿದು ಓದುತ್ತ ಕುಳಿತಿದ್ದನು.

ತಂತ್ರನಾಥನು ಹೊರಟುಹೋದ ಬಳಿಕ, ಗಿರಿಯಮ್ಮನು ಬಂದು ನಡುವೆಯಲ್ಲಿ ಕುಳಿತಳು. ನಿತ್ಯದಂತೆಯೇ ಬಂದ ವಿನೋದನು ಬಾಗಿಲಲ್ಲಿ ನಿಂದು - "ಅಮ್ಮಾ! ಸಿದ್ದಾಂತಿಯರಿರುವರೆ?” ಎಂದು ಕೇಳಿದನು.

ಗಿರಿ - ಹಜಾರದಲ್ಲಿರುವರು ಹೋಗಪ್ಪ' ಎಂದಾಡಿ ವಿನೋದನನ್ನು ಒಳಕ್ಕೆ ಕಳಿಸಿ, ಅತ್ಯವಸರದಿಂದ ಬೀದಿಗೆ ಬಂದ ದಾರಿಯಲ್ಲಿ ಹೋಗುತ್ತಿದ್ದ ವೆಂಕಮ್ಮ, ಮೀನಾಕ್ಷಮ್ಮ ಎಂಬ ತನ್ನ ಜತೆಗಾರ್ತಿಯಾರನ್ನು ಕೂಗಿ ಕರೆದುಕೊಂಡು ಊಟದಮನೆಗೆ ಹೊರಟುಹೋದಳು. ವಿನೋದನು ಹಜಾರಕ್ಕೆ ಬಂದು ಸಿದ್ಧಾನ್ತಿಯ ಬಳಿಯಲ್ಲಿ ಕುಳಿತು,- ಏನು ಸಿದ್ಧಾಂತಿಗಳೇ| ಏನೇನೋ ವಿಚಾರದಲ್ಲಿರುವಂತಿದೆ?