ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೮೦
ನಡೆದದ್ದೇ ದಾರಿ
೧೬ ಆಗಸ್ಟ್, ೧೯೫೮.

ಮಧ್ಯಾಹ್ನ ಇಂದು ಎಷ್ಟು ಆರಾಮು ನಿದ್ದೆ ಹತ್ತಿತ್ತು.ಎಷ್ಟೋ ದಿನಗಳಿಂದ
ಮಧ್ಯಾಹ್ನ ಮಲಗಿರಲಿಲ್ಲ.ಇವತ್ತು ಸತ್ತಂತೆ ನಿದ್ದೆ ಮಾಡಿದೆ. ಆಫೀಸಿನ ಚಿಂತೆಯಿಲ್ಲ. ಅಕೌಂಟಿನ ಚಿಂತೆಯಿಲ್ಲ.
ಮತ್ತು ಹ್ಞಾ, ಮುಖ್ಯವಾಗಿ ಆ ಗಡ್ಡದ ಬಾಸ್‌ನ
ಚಿಂತೆಯಿಲ್ಲ.
ನಾನು ಕ್ಷಮೆ ಕೇಳುತ್ತೀನಿ, ಆವನು ಹೇಳಿದ ಹಾಗೆ ಕೇಳುತ್ತೀನಿ- ಅಂತ ತಿಳಿದಿದ್ದ
ಆ ಸಾಬ.'ಇಲ್ಲಿ ನೋಡು ಲಿಲಿ,ನಿನ್ನನ್ನ ಕೆಲಸದಿಂದ ಡಿಸ್ಮಮಿಸ್ ಮಾಡಿದ ಆರ್ಡರ್
ಬಂದಿದೆ-ಜನರಲ್ ಮ್ಯಾನೇಜರ್‌ರಿಂದ'-ಅಂದ,ನನ್ನನ್ನೇ ನೋಡುತ್ತ.
ನನಗೆ ಗೊತ್ತಿರಲಿಲ್ಲವೆ ಅದರ ಇತಿಹಾಸ?ಯಾರು ನನ್ನ ಬೇಜವಾಬ್ದಾರಿಯ
ಬಗ್ಗೆ, ನಡತೆಯ ಬಗ್ಗೆ ದೂರು ಕೊಟ್ಟಿದ್ದರೆಂದು, ಯಾಕೆ ಕೊಟ್ಟಿದ್ದರೆಂದು ಎಲ್ಲ ಪುಷ್ಪಾ
ಕುಲಕರ್ಣಿ ಹೇಳಿದ್ದಳು. ಈ ಬಾಸ್‌ನ ಪಿ. ಎ ಅಲ್ಲವೆ ಆಕೆ.
'ವಿಚಾರ ಮಾಡು ಲಿಲಿ,ನಿನ್ನ ಕೆಲಸ ಉಳಿಸಿಕೊಡ್ತಉಳಿಸಿಕೊಡ್ತೀನಿ ಅಲ್ಲಾಕೆ
ಕಸಮ್'- ನನಗೆ ಬೇಕಾಗಿರಲಿಲ್ಲ. ಈ ಬಾಸ್‌ನ ಟಿ. ಬಿ ಹೆಂಡತಿ ಊರಿಗೆ
ಹೋದಾಗಲೆಲ್ಲ ಅವನ ಹಾಸಿಗೆಯ ಸಂಗಾತಿಯಾಗುವುದು. ಅದೂ ಸಹ ಅದರಿಂದ
ಏನೂ ಉಪಯೋಗವಾಗದೇ ಇರುವಾಗ, ಬರೇ ಈ ನೌಕರಿಯ ಸಲುವಾಗಿ ಅವನ ಕುರುಚಲು ಗಡ್ಡ-ಅವನ
' ಅಲ್ಲಾಕೆ ಕಸಮ್' ಸಹಿಸುವುದು ನನಗೆ ಬೇಕಾಗಿರಲಿಲ್ಲ.
ಮನೆಗೆ ಬಂದಾಗ ಮೈ-ಮನಸ್ಸು ಭಾರ-ಭಾರ. ಗಾಢ ನಿದ್ದೆ ಬಂತು.... ಕನಸಿನಲ್ಲಿ
ಯಾರೋ ನನ್ನನ್ನು ಗಟ್ಟಿಯಾಗಿ ಎದೆಗೊತ್ತಿಕೂಂಡ ಹಾಗೆ; 'ನಾ ಇದ್ದೀನಿ ನಿನ್ನ ಕೂಡ.
ಎಂದೂ ನಿನ್ನ ಕೈಬಿಡೋದಿಲ್ಲ. ನಿನಗೆ ಬೇಕಾದ್ದೆಲ್ಲ ಕೊಡ್ತೀನಿ. ಹ್ಞಾ,ಮಗು ಕೂಡ.
ಎಷ್ಟು ಬೇಕು ಹೇಳು?ಒಂದು? ನಾಲ್ಕು? '-ಅಂದ ಹಾಗೆ.
ಯಾರದು ಆ ಬಿಗಿಯಾದ ಅಪ್ಪುಗೆ? ಆ ಬೀಸಾದ ತೋಳುಗಳು?
-ಎಷ್ಟೊತ್ತು ಕಂಡೆನೋ ಇದೇ ಕನಸನ್ನ!ನನ್ನ ಸುತ್ತಲೆಲ್ಲ ಸಣ್ಣ-ಸಣ್ಣ
ಮಕ್ಕಳು. ಎಷ್ಟೊಂದು ಮುದ್ದಾಗಿದ್ದ ಮಕ್ಕಳ್ಳು....ಎಲ್ಲ ನನ್ನವೇ.
ಅವುಗಳ ಮಧ್ಯೆ ಆ ಮಕ್ಕಳನ್ನು ನನಗೆ ಕೂ‌ಟ್ಟ ಆ ಅಗಲ ಎದೆಯ ಗಂಡಸು-
-ಯಾರು?
ಫಕ್ಕನೆ ಎಚ್ಚರವಾಗಿತ್ತು.

೨೦ ಆಗಸ್ಟ್,೧೯೫೮.

ಛಿ, ವಿನಯ ಸಾಳಕಾರ ತೀರ ಹೇಡಿ.ತೀರ ನಿರುಪಯೋಗಿ.ಅವನ ಫಿಲೊಸೊಫಿ,
ಅವನ ಪ್ಲೆಟೋನಿಕ್ ಪ್ರೀತಿ, ಅವನ ವಾದ- ಎಲ್ಲ bogus.