ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಮಾನಂದ
೬೫

ನಿನ್ನ ಈ ದಿವ್ಯರೂಪದ ಸಾಕ್ಷಾತ್ಕಾರಲಾಭವು ಯಾವ ಪುಣ್ಯಪುರುಷನಿಗೆ ಅನುಗ್ರಹಿಸಲ್ಪಡುವುದೊ, ಆತನ ಸುಕೃತಕ್ಕೆ ಪರಿಮಿತಿಯುಂಟೆ? ನಿನ್ನ ಅ೦ತರ೦ಗೆ ಕೃಪಾಕಟಾಕ್ಷಕ್ಕೆ ಪಾತ್ರನಾದವನನ್ನು ಮತ್ತಾವ ಬಗೆಯ ಕ್ಷಣಿಕವಾದ ರೂಪತೃಷ್ಣೆಯಾಗಲೀ ಬಳಿಗೆ ಸೇರುವುದೇ ? ಎಂದಿಗೂ ಇಲ್ಲ. ಅ೦ತಹನಲ್ಲಿ ದುರ್ವ್ಯಸನ ಚಿಂತೆಗಳು ಹೇಗೂ ಸೇರುವುದಿಲ್ಲ. ಇದು ಸತ್ಯವಾದುದು. ಆದರೆ, ಎಲೈ ಜನನೀ! ನಿನ್ನ ದಿವ್ಯ ರೂಪ ನಾಕ್ಷಾತ್ಕಾರಲಾಭವನ್ನು ನನಗೆ ಅನುಗ್ರಹಿಸು | ಹೇ, ಭಗವತಿ ! ಸಕಲ ಧರ್ಮಕರ್ಮ-ಕ್ರಿಯಾಕಲಾಪಗಳಿಗೂ ಸಾಫಲ್ಯವನ್ನುಂಟುಮಾಡುವ ಸತ್ಯವೇ ಶಿರಸ್ಟಾಗಿಯೂ, ಭಕ್ತಿಯೇ ಫಾಲಸ್ಥಲವಾಗಿಯೂ, ಆತ್ಮೋನ್ನತಿಯನ್ನು ಹೊಂದಲು ಅತ್ಯಂತ ಮುಖ್ಯವೂ ಮಾನವನ ಸುಗುಣಗಳಿಗೆ ಕಾ೦ತಿಪ್ರದವೂ ಆದ ವಿನಯವೇ ಸರ್ವಾ೦ಗ ಪರಿಪುಷ್ಟತೆಯನ್ನು ತೋರುವ ನಾಶಿಕವಾಗಿಯೂ, ಮತ್ತು ಶಾಶ್ವತ ಸುಖದಾಯಕರಾದ ಚಂದ್ರಸೂರ್ಯರಂತೆ ಪರಿಶೋಭಿಸುವ ವಿವೇಕ, ಜ್ಞಾನಗಳೇ ನೇತ್ರಗಳಾಗಿಯೂ, ಅಮೃತಧಾರಾಮಯವಾದ ಸುಧಾ ಪರಿಪೂರ್ಣ ಪಾತ್ರದಂತೆ ಪರಿಶೋಭಿಸುವ ವೇದವೇ ವದನವಾಗಿಯ, ವೇದದ ರಸಾಸ್ವಾದನಮಾಡಲು ಮಾರ್ಗವನ್ನು ತೋರುತ್ತಿರುವ ವೇದಾಂಗಗಳೇ ದಂತಪಂಕ್ತಿಯಾಗಿಯೂ ಸಮಸ್ತ ವಸ್ತುಸ್ಥಿತಿಯನ್ನೂ ಸರಸವಾಗಿ ವರ್ಣಿಸಿ, ಭಗವನ್ನಾಮಗುಣ ಕಧನಕ್ಕೆ ಮನವನ್ನಾಕರ್ಷಿಸುವ ಮಂತ್ರದಂತಿರುವ ಕವಿತಾಶಕ್ತಿಯೇ ರಸನೆಯಾಗಿಯ ಪ್ರಕಾಶಿಸುತ್ತಿರುವ ಈ ನಿನ್ನ ದಿವ್ಯಾನನದ ಸೌಂದರ್ಯವನ್ನು ವರ್ಣಿಸಲು ಕೇವಲ ಬಾಲಮಾತ್ರನಾದ ನನಗೆ ಸಾಧ್ಯವೇ ? ತಾಯಿ ! ಈ ನಿನ್ನ ಸರ್ವಾ೦ಗಸ್ವರೂಪವರ್ಣನೆಯನ್ನು ಮಾಡಬೇಕೆಂದರೆ, ನರನು ಸಹಸ್ರಫಣಿಯಾದ ಆದಿಶೇಷನೇ ಆಗಬೇಕಲ್ಲದೆ ಸಾಮಾನ್ಯರಿಗೆ ಸಾಧ್ಯವಲ್ಲ. ಎಲೈ ವಾಗ್ದೇವಿ | ಇಂತಹ ಅದ್ಭುತ ಮಹಿಮಾನ್ವಿತೆಯಾದ ನಿನ್ನಲ್ಲಿ ನಾನು ಅನನ್ಯಭಕ್ತಿಭಾವದಿಂದ ಪ್ರಣಮಿಸುತ್ತಿರುವನು. ಕೃಪಾದೃಷ್ಟಿ