ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

4

ಪೋಪಿಸಿದರು. ಆ ಮಾರಾಯನಹೆಂಡತಿಯು ಅನಂತರ ಆ ಊರಿನಲ್ಲಿಯೇ ಇದ್ದುಕೊಂಡು, ಅಲ್ಲಿ ಒಂದು ಸಣ್ಣ ತೋಟವನ್ನು ಹಾಕಿಕೊಂಡು, ಬಹಳ ದುಃಖದಿಂದಲೂ ಕಷ್ಟದಿಂದಲೂ ಬಾಳುತ್ತಿದ್ದಳು. ಅವಳಿಗೂ ಕಡೆಗಾಲ ಬಂದಿತು? ಆಗ ಅವಳಿಗೆ ತನ್ನ ಮಗನಿಗೆ ನ್ಯಾಯವಾಗಿ ಬರಬೇಕಾಗಿದ್ದ ಸಿಂಹಾಸನಾಧಿಕಾರವು. ದೊರೆಯಲಿಲ್ಲವಲ್ಲಾ! ಎಂದು ಬಲು ಸಂಕಟವಾಯಿತು....? ಹೀಗೆಂದು, ಕಥೆಹೇಳುತ್ತಿದ್ದವಳು ಅಳತೊಡಗಿದಳು.

"ಅಮ್ಮಾ, ಆಮೇಲೇನಾಯಿತು?

"ಮಗು, ನನಗೆ ತಿಳಿಯದು..?

"ಅಮ್ಮಾ, ಈಗ ಆ ತಾಯಿ ಮಕ್ಕಳೆಲ್ಲಿರುವರು?"!

"ಮಗು, ಇನ್ನೂ ಹತ್ತರಬಾ.-ನಾನೇನ ಹೇಳಲಿ. ಆ ನಿರ್ಭಾಗ್ಯಳೇ ನಾನು, ಆರತ್ನವೇ ನೀನು"?

ಹೀಗೆ ಉಸುರಿ ಅವಳು ಪ್ರಾಣ ಬಿಟ್ಟಳು.

ಪ್ರಪಂಚವನ್ನ ರಿಯದ ಎಳೆಯ ಹುಡುಗನಾದಾ ಪೃಥ್ಯಾಪಾಲನು, ಆ ಸ್ಥಳವನ್ನು ಆಗಲೇ ಬಿಟ್ಟು, ಹಸಿ ವಿನಿಂದಕಂಗೆಟ್ಟು, ಭಯದಿಂದ ಬುದ್ದಿ ಗೆಟ್ಟು, ಚಳಿ ಯಿಂದ ನಡನಡುಗುತ್ತಾ ಎಲ್ಲಿಗೆ ಹೊರಟು ಹೋದನು.

***

ಕಗ್ಗತ್ತಲೆ, ಅದರಲ್ಲಿ ವಿಪರೀತ ಮಂಜ, ಅದರ ಮೇಲೆ ಬಿರುಗಾಳಿ, ಇಂತಹ ಹೊತ್ತಿನಲ್ಲಿ ದೇವದ್ಯಾರದ ಬಳಿ ಪೃಥಿಪಾಲನು ನಿಶ್ಯಕ್ತನಾಗಿ ಬಿದ್ದಿದ್ದನು, ಅವ