೭೦
ಅಂತು ದಶರಥಮಹೀನಾಥಂ ಸಂತಾನ ಸಮೃದ್ಧಿಯಿನತಿಪ್ರವರ್ಧಮಾನಸುಖಾ
ಧೀನ ಮಾನಸನಾಗಿರ್ಪುದುಂ---
ಕಂ|| ಅವನೀವಲ್ಲಭ ತನಯರ್
ನವ ಶಶಿಕಲೆಯಂತೆ ಪಡೆದು ನಯನೋತ್ಸವಮಂ||
ದಿವಸಕ್ರಮದಿಂದಂ ವೃ|
ದ್ಧಿವಡೆದರಮರಾವನೀಜದಗೆಯೆಂಬಿನೆಗಂ||೧೩೮||
ನಸುನಗೆ ಕಮಳದ ಸಿರಿಯಂ
ನಸುನಗೆಜನನಿಯರ ಲೋಚನಭ್ರಮರಂಗಳ್||
ಮುಸುರಿದುವು ಮೋಹವಲ್ಲರಿ
ಪಸರಿಸಿ ಪರ್ವಿದುದು ಸುತರ ಲಾಲಾಜಲದಿಂ||೧೩೯||
ತಳರಡಿ ಯಿಡುವತ್ತಲೆ ಪರಿ
ದೆಳಸುವ ಜನನಿಯರ ದಿಟ್ಟ ಮಣಿಕುಟ್ಟಿಮಮಂ||
ಬಳಸೆ ಪೊಸತಲರ್ದ ನೆಯ್ದಿ
ಲ್ಗೊಳದೊಳಗಣ ರಾಜಹಂಸನಂ ನೆನೆಯಿಸಿದರ್||೧೪೦||
ಚ|| ಅರಳೆಲೆ ಮತ್ತಿಗಾಯ್, ಪುಲಿಯುಗುರ್ ನವರತ್ನದ ಕಂಕಣಂಗಳುಂ|
ಗುರುಮುಡೆನೂಲ ಪೊನ್ನ ಮಣಿಕಿಂಕಿಣಿ ರನ್ನದ ಫಂಟೆ ನೂಪುರಂ||
ವರ ವಲಯಂಗಳೆ೦ಬ ಪಲವಂದದ ಚಂದದ ಬಾಳಿವಂದಮೊ|
ಪ್ಪಿರೆ ಪಿತೃಮಾತೃಗಳ್ಗೆ ಪಡೆದರ್ ತನಯರ್ ನಯನೋತ್ಸವಂಗಳಂ||೧೪೧||
ಅಂತು ದಶರಥ ಮಹೀನಾಥನ ಸಾಮ್ರಾಜ್ಯಶ್ರೀಯ ಮಣಿಮಯಾಭರಣ
ದಂತೆ ಸೊಗಯಿಸುವ ಸುತರ ಬಾಲಕೇಳೀದರ್ಶನದಿಂ ಸುಮಿತ್ರೆಯ ನಯನಪುತ್ರಿಕೆ
ನಲಿದು ನರ್ತಿಸೆಯುಂ, ಕೈಕೆಯ ತನುಲತಿಕೆ ಪುಳಕ ಕಳಿಕೆಯಂ ತಳೆಯೆಯುಂ,
ಸುಪ್ರಭೆಯ ಮನಃಪ್ರಮೋದಮುದಿತೋದಿತಮಾಗೆಯುಂ ರಾಮ ಲಕ್ಷ್ಮಣ ಭರತ ಶತ್ರುಘ್ನರನುಕ್ರಮದಿಂ ಶೈಶವಮನತಿಕ್ರಮಿಸೆ---
ಕಂ|| ವಸುವ ದುದವನ್ನರ್ಥಂ
ವಸುರ್ಧೆಲ್ ಕ೦ದು ಪೊನ್ನ ಮಳೆಯಂ ದಾನ | ವ್ಯಸನಿ ದಶರಥನದೇಂ ಪೊಸ ಯಿಸಿದನೊ ಚೌಲೋಪನಯನ ಮಹಿಮೋತ್ಸವಮಂ
|| ೧೪೨ ||