೧೦೩
ಪತಿಯ ಪದಾರವಿಂದಮನರಿಂದಮನರ್ಚಿಸಿದಂ ಕಿರೀಟ ಕೀ|
ಲಿತ ಹರಿನೀಲ ರತ್ನ ರುಚಿ ಮಂಜರಿ ಯೆಂಬ೧ತಸೀ ಲತಾಂತದಿಂ||೧೨||
ಅ೦ತು ಸರ್ವಾ೦ಗಪ್ರಣತನಾಗಿ--
ಕಂ||ತಂದೆಂ ರಮ್ಯಕ ವನ ಜಿನ
ಮಂದಿರದ ಕೆಲಕ್ಕೆ ಮಿಥಿಳೆಯಿಂ ಜನಕನನೆ೦||
ದಿಂದುಗತಿಗನುಚರಂ ಪೋ
ದಂದಮುಮಂ ಬ೦ದತೆರನುಮ೦ ನೆರೆ ಪೇಳ್ದಿಂ||೧೩||
ಆಗಳಾ ವಿಯಚ್ಚರಾಧಿರಾಜನತಿಹರ್ಷಚಿತ್ತನಂಗಚಿತ್ತಮನಿತ್ತು---
||ಮ||ಸ್ರ||ಗಗನಾಂತರ್ಭಾಗದೊಳ್ ಪೂಗೊಳವಲರ್ದವೊಲಿಂಬಾಗೆ ಚಿತ್ರಾತಪತ್ರ೦|
ಪಗಲಂ ಭೂಷಾಂಶು ಜಾಲಂ ದ್ವಿಗುಣಿಸೆ ಮುಗಿಲ೦ ಮುಟ್ಟಿ ನಾನಾಧ್ವಜ೦ಗಳ್||
ಭಗವಜ್ಜೈನಾಂಘ್ರಿ ಪೂಜಾ ಪರಿಕರ ಸಹಿತಂ ಮಂಗಳಾತೋದ್ಯನಾದ|
ಸ್ಥಗಿತಾಶಾ ಖಂಡನಾಖಂಡಲ ವಿಭವದಿನೇಳ್ತಿಂದನಾ ಖೇಚರೇಂದ್ರಂ||೧೪||
ಆಸಮಯದೊಳ್--
ಕ೦||ಇದು ಖಚರ ಲೋಕಮಿಾಬ
ರ್ಪುದೆ ಖೇಚರ ನಿಚ ಯಮೆಂದು ಮನದೊಳ್ ಜನಕಂ||
ಪದೆದೀಕ್ಷಿಸುವನ್ನೆಗಮದು
ಪುದಿದುದು ಮಣಿ ಮಕುಟ ಕಿರಣದಿಂದಾಬನಮಂ||೧೫||
ಅಂತು ಗಗನ ತಳದಿನವನೀ ತಳಕ್ಕವತರಿಸಿದಿಂದುಗತಿ ಮಂದಗತಿಯಿಂ ಜಿನ ಮಂದಿರಮಂ ಬಲಗೊಂಡೊಳಗಂ ಪೊಕ್ಕು ದರ್ಶನ ಸ್ತುತಿಗೆಯ್ದನೇಕಾರ್ಚನೆಗಳಿ ನರ್ಚಿಸಿ--
ಕಂ||ಆ ಗಗನ ಚರ ಪ್ರವರಂ
ಸ್ವಾಗತ ನಂಭಾಷಣಂಗಳಿಂ ಜನಕನನ||
ಭ್ಯಾಗತನಂ ಮನ್ನಿಸಿದಂ
ಶ್ರೀಗೆಂತುಂ ವಿನಯಮೊಂದೆ ಭೂಷಣಮಲ್ತೇ||೧೬||
೧.ಸಿತಾಲತಾಂತದಿಂ. ಕ. ಖ.; ಲತಾಂತಮಾಲೆಯಂ