೩೬
ಮ|| ಬಸಿರಂ ಮೋದಿಕೊಳುತ್ತುಮಳ್ವಿ ನಿಜಧಾತ್ರೀವಕಮಂ ನೋಡಿ ಬೇ|
ವಸವಂ ನಿಮ್ಮ ಮನಕ್ಕೆ ನಿರ್ಭಯದಿನಾವಂ ತಂದನಾತಂಗೆ ಸೈ||
ರಿಸೆನಾನೆಂದು ಸುಕೌಶಲ ಕ್ಷಿತಿಭುಜಂ ಕಟ್ಟಾಗ್ರಹಂಗೆಯ್ಯೆ ಸೂ|
ಚಿಸಿದಳ್ ಕಾಂತೆ ವಸಂತಮಾಲೆ ನಿಜ ಶೋಕೋದ್ರೇಕ ವೃತ್ತಾಂತಮಂ||೪೫||
ಅದಂ ನೆರೆಯೆ ಕೇಳ್ದು--
ಮ||ಪಸುಗೂಸಿಂಗೆನಗಿತ್ತು ರಾಜ್ಯಪದಮಂ ನಿಂದಂ ತಪೋರಾಜ್ಯದೊಳ್|
ವಸುಧಾವಲ್ಲಭನಾ ಮುನೀಶ್ವರನ ಪಾದೋಪಾಂತಮಂ ಪೊರ್ದಿ ಸಾ||
ಧಿಸುವೆಂ ನಿರ್ವೃತಿಸೌಖ್ಯಮಂ ವಿಷಯಸೌಖ್ಯಂ ಮುಖ್ಯಮಲ್ತೆಂದು ಭಾ|
ವಿಸಿ ಬಿಟ್ಟ೦ ಸಿರಿಯಂ ಸುಕೌಶಲನದೇಂ ವೈರಾಗ್ಯಸಂಪನ್ನನೋ||೪೬||
ಕಂ|| ಮುನಿಭೋಜನವಿಷ್ಟಂ ಮ
ಜ್ಜನನಿಯಿನಾಯ್ತೆನ್ನ ದೂಸರಿ೦ ತಾಯ್ಗೇನಾಂ||
ಮುನಿವೆನೊ ಮುನಿಯಪ್ಪನ್ನೆಗ
ಮನಶನಮೆನಗೆಂದು ಚಿತ್ತದೊಳ್ ತರಿಸಂದಂ||||೪೭||
ಅ೦ತು ಪರಿಚ್ಛೇದಿಸಿ--
ಕಂ|| ಧವಲಾತಪತ್ರ ವಾರಣ
ವಿವಿಧ ಧ್ವಜ ಚಾಮರ೦ಗಳ೦ ರಾಜ್ಯಶ್ರೀ||
ಗಿವು ತೊಡವೆಂದವನೊಲ್ಲದೆ
ಭುವನೇಶಂ ರಾಜಭವನಮಂ ಪೊರಮಟ್ಟಂ||೪೮||
ಅ೦ತು ಪೊರಮಟ್ಟು ಪಾದಮಾರ್ಗದಿನುಪವನಮನೆಯ್ದಿ ಕೀರ್ತಿಧರ ಭಟ್ಟಾರ
ಕರಂತ್ರಿ ಪ್ರದಕ್ಷಿಣಂಗೆಯ್ದು ದೀಕ್ಷಾಪ್ರಸಾದವೆಂದು ವಂದಿಸಿ ಕುಳ್ಳಿರ್ಪುದುಮಾಗ
ಳಖಿಲಪರಿಜನಂ ಸಂಭ್ರಮಂಬೆರಸು ಬಂದು--
ಮ|| ಎಮಗಿನ್ನಾರ್ ಶರಣೆಂದು ಮಾಂಡಲಿಕರುಂ ಸಾಮಂತರುಂ ಮಂತ್ರಿ ವ|
ರ್ಗಮುಮಂತ:ಪುರಮುಂ ವಿಲಾಸಿನಿಯರುಂ ಬಾಯ್ವಿಟ್ಟು ಪುಯ್ಯಲೆ ಶೋ|
ಕಮಿದೇಕೀಕೆಯ ಗರ್ಭದರ್ಭಕನೆ ನಿಮ್ಮ ರಕ್ಷಿಸಲ್ಸಾಲ್ಗುಮೆಂ|
ದು ಮಹಾದೇವಿಗೆ ಚಿತ್ರಮಾಲೆಗವರಂ ಭೂಪಾಲನಪ್ಪೈಸಿದಂ||೪೯||
1 ತಾಯಿನ್ನಂ. ಕ. ಖ. ತಾಯಿ ನಂ. , ಫ, ಚ