ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೨

ರಾಮಚಂದ್ರಚರಿತಪುರಾಣಂ

ಮ||ಸ್ರ|| ಅಮರೇಂದ್ರೋದ್ಯಾನದಿ೦ ಪೂಮಳಿ ಕರೆಯೆ ಸುರೇ೦ದ್ರಾಗಮಂ ರಾಗಮಂ ಬೀ|
     ರೆ ಮರುದ್ಗಂಭೀರ ಭೇರೀನಿನದಮೊದವೆ ನಿರ್ವಾಣಕೈವಲ್ಯಮಾಂಗ||
     ಲ್ಯ ಮಹೋತ್ಸಾಹಪ್ರಮೋದಾಮರ ಕಲಕಲಮಾನಂದಮಂಮಾಡೆರೋಮಾಂ|
     ಚಮನಾನಂದಾಶ್ರುವಂ ತಾಳ್ದಿದನಮಲಯಶಂ ಭಾರತೀಕರ್ಣಪೂರಂ||೭೭||

       ಇದು ಪರಮಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ
            ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ
               ಭಾರತೀಕರ್ಣಪೂರ ಶ್ರೀಮದಭಿನವಪಂಪ
                 ವಿರಚಿತಮಪ್ಪ ರಾಮಚಂದ್ರ ಚರಿತ
                  ಪುರಾಣದೊಳ್ ವಂಶವರ್ಣನಂ
                       -ದ್ವಿತೀಯಾಶ್ವಾಸಂ-