ಕ೦|| ಶ್ರೀವನಿತೆ ವಕ್ಷದೊಳ್ ಮು
ಕ್ತಾವಳಿಯಂತೆಸೆಯೆ ತೊಟ್ಟಿಲೊಳ್ ಪಟ್ಟಿತ್ತ||
ಲ್ಭೂವಳಯಂ ಭುಜದೊಳ್ ಶೋ
ಭಾವಹಮೆನೆ ಪೆಂಪುವೆತ್ತನಭಿನವಪಂಪಂ
ಎಳನೇಸರಂತೆ ಜಗಮಂ
ಬೆಳಗಿದನೆಳದಿಂಗಳಂತೆ ಸಕಲ ಧರಿತ್ರೀ||
ತಳಮನೆರಗಿಸಿದನೆಳವೆಯೊ
ಳಿಳೆ ಬಣ್ಣಿಸೆ ದಶರಥಂ ಭಗೀರಥಚರಿತಂ
ಆ ವಂಶಜರ ಗುಣಂಗಳ
ನಾವಗ ಮೊಳಕೊಂಡು ತನ್ನವಿಶದ ಯಶೋ ಮು||
ಕ್ತಾವಳಿಯಂ ಧರೆಗಿತ್ತು,ಧ
ರಾವಲ್ಲಭನತ್ಯುದಾತ್ತನೆನೆ ಪೆಸರ್ವಡೆದಂ,
ಚಿರಕಾಲದ ಕಳಿವೂವೆಂ
ದಿರದೆ ವಿರಿಂಚಿಯ ಮುಖಾರವಿಂದಮನುಳಿದಾ||
ದರದಿಂದಿರ್ದಳ್ ಸಿತಮಧು
ಕರವಧು ವಾಗ್ವಧು ನರೇಂದ್ರ ಮುಖಸರಸಿಜದೊಳ್
ಜಡದಿಯ ರತ್ನಂಗಳ್ಪೊಂ
ದೊಡವಿನುಪಾಶ್ರಯದಿನೆಸೆವವೋಲ್ ದಶರಥನಿ೦||
ಜಡಜಜನ ವಿದ್ಯೆಗಳ್ ನೂ
ರ್ಮಡಿಸಿದುವಾಶ್ರಯ ವಿಶೇಷಮೇಂ ಕೇವಲಮೇ
ಅರುವತ್ತು ನಾಲ್ಕು ವಿದ್ಯೆಯ
ನರಿದುಂ ದಶರಥನ ಚಿತ್ತಮನುರಾಗದಿ ನೇ||
ನೆಲಗಿದುದೊ ಧರ್ಮಶಾಸ್ತ್ರ
ಕಜವುಳ್ಳ೦ವಿಕಥೆಯೊಳ್ ಮನಂ ನಿರಿಸುಗುಮೇ