ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

6

ನಿಜವಾಗಿಯೂ ಸಿಕ್ಕಿದರೆ ಇದನ್ನು ಮಾರಿ ನನ್ನ ದಾರಿ ದ್ರವ್ಯವನ್ನು ಮರೆತೇನ!" ಎಂದುಕ್ಕೊಂಡನು.

ಹಾಗಂದುಕ್ಕೊಂಡ ಕೂಡಲೇ ಅವನ ಕಣ್ಣುಗಳು ತೆರೆಯಲಾದವು, ನೋಡಲು, ಅಲ್ಲಿ ಯಾರೂ ಇರಲಿಲ್ಲ ಅವನಿಗೆ ಕಷ್ಟಗಳೆಲ್ಲವೂ ತೀರಿ, ಬಲು ಆನಂದವಾಗಿತ್ತು. ಏನಹೇಳುವುದಕ್ಕೂ ಅವನಿಗೆ ಬಾಯೇಬಾರದು. ಇದೆಲ್ಲವು ಕನಸಿರಬಹುದೆಂದು ಅವನ ಪುನಃ ಅಂದುಕ್ಕೊಂಡನು. ಅವನ ಕೈಯಲ್ಲಿ ಮಹಾಕಾಂತಿಯುಕ್ತವಾದ ವಜ್ರದ ಪದಕವೊಂದಿತ್ತು.

ಅದನ್ನವನು ನೋಡಿ ನೋಡಿ ಆಶ್ಚರ್ಯಪಟ್ಟು, ಆನಂದದಲ್ಲಿ ಮೈಮರೆತಿರುವಾಗ ಆಗಸದಲ್ಲಿ ಧಳಫಳನೆ ಮಿಂಚಿತು, ಆಗ ವಜ್ರಾಭರಣವೂ ಮತ್ತೊಂದು ಮಿಂಚಿನಂತೆ ಹೊಳೆಯಿತು.ಆಮೇಲೆ ಅರೆನಿಮಿಷದೊಳಗಾಗಿ ಘುಡ ಘುಡನೆ ಗುಡುಗಿತು! ಪೃಥ್ವಿಪಾಲನೂ ಅವನ ವಜ್ರದ ಪದಕವೂ ಎಲ್ಲಿ? ಅಯ್ಯೋ! ಇಬ್ಬರನ್ನೂ ಸಿಡಿಲು ಪಾತಾಳಕ್ಕೆ ತುಳಿದು ಬಿಟ್ಟಿತು!