ಬಾಲಕನಾದಕಾರಣ ಕ್ಷಮೆಗೆ ಅರ್ಹನು. ನಾನು ಅವನನ್ನು ಕ್ಷಮಿಸಿರುವೆನು, ನೀನೂ ಕ್ಷಮಿಸತಕ್ಕುದು" ಎಂದು ಹೇಳಿ ಹೊರಟು ಹೋದನು. ಎಲೈವಿಕ್ರಮರಾಜನೆ, ಆ ಬ್ರಾಹ್ಮಣನ ಗುಣವು ದೊಡ್ಡದೋ ಆ ರಾಜನ ಗುಣತ್ರ ದೊಡ್ಡದೊ?,,
ವಿಕ್ರಮ:-ರಾಜನ ಗುಣವೇ ದೊಡ್ಡದು.
ಈ ರೀತಿ ವಿಕ್ರಮನ ಮೌನಮತವು ಭಂಗವಾಗಲು ಭೇತಾಳನು ಬನ್ನಿಮರವನ್ನು ಸೇರಿದನು, ಪ್ರನಃ ವಿಕ್ರಮನು ಅವನನ್ನು ಹಿಡಿದು ತಂದನು, ಪುನಃ ಭೇತಾಳೆನು ಕಥೆ ಹೇಳಿ ಮೌನವನನ್ನು ಭಂಗಪಡಿಸಿದನು, ಈ ರೀತಿ ಒಟ್ಟಿಗೆ ಇಪ್ಪತ್ತೈದಾವರ್ತಿ ನಡೆಯಿತು. ಕಡೆಗೆ ಭೇತಾಳನು ಹೀಗೆಂದನು: "ಎಲೈ ರಾಜನೆ, ನಿನ್ನ ಬುದ್ಧಿವಂತಿಕೆಯಿಂದಲೂ ಧರ್ಮಪರತೆಯಿಂದಲೂ ತುಂಬಾ ಸಂತುಷ್ಟನಾದೆನು. ಈಗ ನಾನು ಹೇಳುವುದ ಕೇಳು. ನೀನು ಆ ಕಾಪಾಲಿಕ ಸನ್ಯಾಸಿಯ ಬಳಿಗೆ ನನ್ನನ್ನು ಕರೆದೊಯ್ದು ರೆ, ಅವನು ನಿನ್ನನ್ನು ಯಜ್ಞಕುಂಡಕ್ಕೆ ಸಾಷ್ಟಾಂಗವಾಗಿ ನಮ ಸ್ಕರಿಸಹೇಳಿ, ನೀನು ಮಲಗಿದಕೂಡಲೆ ನಿನ್ನಶಿರವನ್ನು ತರಿದು ಪೂರ್ಣಾಹುತಿ ಕೊಟ್ಟು ತಾನು ಅನೇಕ ಸಿದ್ದಿಗಳನ್ನು ಹೊಂದುವನು.ಅದಕ್ಕೆ ಪ್ರತಿಯಾಗಿ ನೀನೇ ಪ್ರಣಾಮ ವಿಧಿಯನ್ನು ಮಾಡಿ ತೋರಿಸು' ಎಂದು " ನೀನೇ ಕೇಳಿದರೆ, ಅವನು ಪ್ರಣಾಮ ಮಾಡುವನು. ಆಗ ನೀನೇ ಅವನ ಶಿರವನ್ನು ಖಂಡಿಸಿ ಪೂರ್ಣಾಹುತಿ ಮಾಡು. ಯಜ್ಞದೇವತೆಯು ನಿನ್ನವಳಾಗುವಳು ಎಂದನು, ವಿಕ್ರಮಾದಿತ್ಯನು ಭೇತಾಳನು ಹೇಳಿದಂತೆಯೇ ಎಲ್ಲವನ್ನೂ ನಡೆಸಲು, ದೇವತೆಯು ಪ್ರತ್ಯಕ್ಷಳಾಗಿ "ವರವನ್ನು ಬೇಡು "ಎಂದಳು. -
ವಿಕ್ರಮನು: ದೇವಿ ಈಕಾಸಾಲಿಕನನ್ನು ಬದುಕಿಸಿ ಅವನ ಇಷ್ಟ ಇಳನ್ನು ನೆರವೇರಿಸು, ನಾನು ಸ್ಮರಿಸಿದಾಗ ನನ್ನಲ್ಲಿ ದಯೆ ಮಾಡು ."