ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

55

ಭೇತಾಳ: " ನೀನು ಹೇಳದಿದ್ದರೆ ನಾನೇ ಹೇಳುವೆನು. ಕಡೆಗೆ ನಾನು ಕೇಳುವ ಪ್ರಶ್ನೆಗೆ ಉತ್ತರವನ್ನು ತಿಳಿದೂ, ಮೌನಭಂಗ ಭಯದಿಂದ ನೀನು ಮಾತನಾಡದೆ ಹೋದರೆ, ನಿನ್ನ ತಲೆಯು ಸಾವಿರ ಹೋಳಾಗುವುದು ಕೇಳು. ವಿಂಧ್ಯವತಿಯೆಂಬುದೊಂದು ಪಟ್ಟಣ. ಅದರಲ್ಲಿ ಸುವಿಚಾರನೆಯ ದೊರೆ.ಆತನ ಮಗ ಜಯತ್ಸೇನನು ಒಂದು ದಿನ ಬೇಟೆಗೆ ಹೊರಟು, ಒಂದು ಕಾಡಾನೆಯನ್ನು ಹಿಂಬಾಲಿಸಿ ಅರಣ್ಯದೊಳಕ್ಕೆ ಬಲುದೂರ ಹೋದನು, ಅಲ್ಲಿ ಒಂದು ನದಿಯು ಹರಿಯುತ್ತಿತ್ತು. ಅದರ ದಡದಲ್ಲಿ ಒಬ್ಬ ಬ್ರಾಹ್ಮಣನು ಧ್ಯಾನನಿಷ್ಟನಾಗಿ ಕುಳಿತಿದ್ದನು, ರಾಜಪುತ್ರನು ಕುದುರೆಯಿಂದಿಳಿದು, ಅವನಬಳಿಗೆ ಹೋಗಿ, "ಅಯ್ಯಾ, ಈ ಕುದುರೆಯನ್ನು ನೋಡಿಕ್ಕೊಂಡಿರು, ನಾಮ ನದಿಯೊಳಕ್ಕಿಳಿದ ಸ್ನಾನ ಪಾನಗಳನ್ನು ಮಾಡಿರುವೆನು. ಎಂದನು ಬ್ರಾಹ್ಮಣನು'ಧ್ಯಾನಾ ರೂಢನಾದವನನ್ನು ಹೀಗೆ ತೊಂದಿಪಡಿಸುವುದು ಸರಿಯೇನೈ?, ಎನ್ನಲು, ರಾಜಪುತ್ರನು ಕೋಪಗೊಂಡು, ಆ ವಿಪ್ರವನ್ನು ಚಾಟಮಿಂದ ಚೆನ್ನಾಗಿ ಹೊಡೆದನು. ವಿಪ್ರನು ಅಲ್ಲಿಂದ ಹೊರಟು, ಸುವಿಚಾರ ರಾಜನಲ್ಲಿಗೆ ಜೋಗಿ ಆದ ಸಂಗತಿಯನ್ನ ವಿಘ್ನಾಪಿಸಿದನು. ರಾಜನು ಮಗನೆ ಮೇಲೆ ತುಂಬಾ ಆಗ್ರಹಪಟ್ಟು ಅವನನ್ನು ದೇಶಭ್ರಷ್ಟನನ್ನಾಗಿ ಮಾಡಲು ನಿಶ್ಚಯಿಸಿದನು. ಅಷ್ಟರಲ್ಲಿ ಮಂತ್ರಿಯು "ರಾಜ್ಯಭಾರವನ್ನು ವಹಿಸಲು ಯೋಗ್ಯನಾದ ಕುಮಾರನನ್ನು ರಾಜ್ಯದಿಂದ ಓಡಿಸುವುದು ಉಚಿತವಲ್ಲ" ಎಂದನು. ಹೀಗೆದೊರೆಯು ನ್ಯಾಯಪರವಾಗಿಯೂ, ಮಂತ್ರಿಯು ಅನುಕೂಲವನ್ನು ಯೋಚಿಸಿಯೂ ಬಹುದೂರ ಚರ್ಚಿಸಿದರು.ಕಡೆಗೆ ರಾಜನು ಮಗನನ್ನು ಶಿಕ್ಷಿಸಿಯೇ ತೀರಬೇಕೆಂದು ತಿರ್ಮಾನಿಸಿ, ಹಸ್ತೇಚ್ಛೇದವನ್ನು ವಿಧಿಸಿದನು, ಅಷ್ಟರಲ್ಲಿ ಬ್ರಾಹ್ಮಣನು ಅಡ್ಡ ಬಂದು, "ರಾಜನೆ, ನಿನ್ನ ಧರ್ಮಬುದ್ಧಿಗೆ ಮೆಚ್ಚಿದೆನು.ನಿನ್ನ ಮಗನು ಇನ್ನೂ