ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ರಾಜನು ಸೂರ್ಯದತ್ತವಾದ ಕರ್ಣಾಭರಣಗಳನ್ನು ಅವನಿಗೆ ಕೊಟ್ಟು ಬಿಟ್ಟನು.”

ಭೋಜನು ನಾಚಿಕೆಯಿಂದ ಆ ಸ್ಥಳವನ್ನು ಬಿಟ್ಟನು.

***

ಹತ್ತೊಂಬತ್ತನೆಯ ಸಾಲಭಂಜಿಕೆಯು ಹೇಳಿದ ಉಪಾಖ್ಯಾನ:-

"ವಿಕ್ರಮರಾಜನು ಒಂದಾವರ್ತಿ ಒಡ್ಡೋಲಗದಲ್ಲಿರಲು, ಒ ಬ್ಬ ವನಪಾಲಕನು ಬಂದು, ಒಂದು ಕಾಡಹಂದಿಯಿಂದ ಜನಗಳಿಗೂ, ದನಗಳಿಗೂ, ಬೆಳೆಗಳಿಗೆ ಹಾನಿಯಾಗಿರುವುದೆಂದು ಅರಿಕೆ ಮಾಡಿದನು. ರಾಜನು ಅದನ್ನು ಧ್ವಂಸಮಾಡಲೆಣಿಸಿ, ಬೇಟೆಗೆ ಹೊರಟು, ಆ ಮೃಗವನ್ನಟ್ಟಿಕ್ಕೊಂಡು ಹೋದನು. ಕಡೆಗೆ ಅದು ಒಂದು ದೊಡ್ಡ ಬಿಲವನ್ನು ಹೊಕ್ಕಿತು. ವಿಕ್ರಮನು ಹಿಂಬಾಲಿಸಿಹೋದನು. ಬಹುದೂರ ನೆಲದೊಳಗೆ ಹೊಗಲಾಗಿ ಮಹಾಪ್ರಕಾಶವೊಂದು ಕಾಣಬಂದಿತು. ಹಾಗೆಯೇ ಹೋಗಲು ವಿಕ್ರಮನು ಪಾತಾಳರಾಜ್ಯವನ್ನು ಸೇರಿದನು. ಅಲ್ಲಿ ಬಲಿಚಕ್ರವರ್ತಿಯು ಆಳುತ್ತಿದ್ದನು. ವಿಕ್ರಮನು ಆತನ ದರ್ಶನವನ್ನು ತೆಗೆದುಕ್ಕೊಂಡನು. ಬಲಿಯು ವಿಕ್ರಮನನ್ನು ಸನ್ಮಾನಿಸಿ, ಸ್ನೇಹಿತನನ್ನಾಗಿ ಮಾಡಿಕೊಂಡು, ಬಂದು ರಸವನ್ನೂ ಬಂದು ರಸಾಯನವನ್ನೂ ಬಹುಮಾನವಾಗಿ ಕೊಟ್ಟು, ಕಳುಹಿಸಿ ಕೊಟ್ಟನು. ವಿಕ್ರಮನು ಬರುತ್ತಿರುವಾಗ ದಾರಿಯಲ್ಲಿ ಒಬ್ಬ ಬಡವನು ಬಂದು ಧನವನ್ನು ಯಾಚಿಸಲು, ಆ ತ್ಯಾಗಿಯ, “ನನ್ನಲ್ಲಿ ಈಗ ಧನವಿಲ್ಲ. ಈ ರಸವನ್ನು ನೀನು ಯಾವುದಕ್ಕೆ ಸೋಕಿಸಿದರೆ ಅದು ಹೊನ್ನಾಗುವುದು, ಈ ರಸಾಯನವನ್ನು ಭುಜಿಸಿದರೆ ಮುಪ್ಪುಸಾವುರೋಗ