ಸುಮುಖ:- (ವಿನಯದಿಂದ) ಗುರುದೇವ ! ಸ್ವಾಭಾವಿಕವಾಗಿ ಧೂಮ್ರವರ್ಣಾತ್ಮಕವಾಗಿರುವ ಆಕಾಶವು ಶುಭ್ರವರ್ಣವನ್ನು ಹೊಂದುವುದು ಹೇಗೆ ?
ವಿದ್ಯಾ:~ ಹೂಂ ! ಹೇಳಿರಿ; ಹೇಗಿದ್ದರೆ ಶಾರದೆಯು ಪ್ರಸನ್ನ ೪ಾಗುವಳು ?
( ಎಲ್ಲ ರೂ ಒಬ್ಬರ ಮುಖವನ್ನು ಮತ್ತೊಬ್ಬರು ನೋಡುವರು.)
ವಿದ್ಯಾ:- ರಮಾನಂದ ! ನಿನಗೂ ಗೊತ್ತಿಲ್ಲ ?
ರಮಾ:- ಗುರುದೇವ |—
ಕಂದ||"ಬರೆವುದು ವಾಚಿಪುದಲಸದೆ |
ಪರಿಚಾರಿಪುದಲ್ಲಿ ಗಲ್ಲಿ ಬಲ್ಲ ನಿತರೊಳಂ ||
ಸರಸಪ್ರಸಂಗ ಗೈಯ್ಯಲು |
ಸರಸಿಜಭವರಾಣಿಯೊಲಿಯದೇಂ ಮಾಣ್ದ ಪಳೇ ||'
ಎಂಬ ನೀತಿಯನ್ನು ಬಲ್ಲ ವರಿಂದ ಕೇಳಿ ತಿಳಿದಿರುವೆನು.
ವಿದ್ಯಾ:- ಸರಿಯೆ; ಅಕ್ಷರಸ್ಥರ ಮಾರ್ಗವ ಹೇಗಿರತಕ್ಕುದು?
ರಮಾ:- ಬಲ್ಲ ವರಾಡುವುದು ಹೀಗೆ—
ಕಂದ || "ಉಕ್ಕದೆ ಬಿಕ್ಕದೆ ಲಿಪಿಯಂ !
ನಕ್ಕದೆ ತಡವರಿಸದೆಡಹದುಡುಹದೆ ಪದವಿ ||
ಟಕ್ಕರ ಬಣಿಕೆಯೊಳೋದುವು |
ದಕ್ಕರಿಗರ ಮಾರ್ಗಮಲ್ತೆ ಚೂಡಾರತ್ನಾ ||”
ವಿದ್ಯಾ:-- ಓದುವಾತನು ಹೇಗಿದ್ದರೆ ಗಮಕಿಯೆನ್ನಿ ಸುವನು ?
ರಮಾ:- ಹಿರಿಯರು ಹೀಗೆ ತಿಳಿಸಿರುವರು.
ಕ೦ದ | "ಎಡರದೆ ತಡೆಯದೆ ತಲೆಯಂ |
ಕೊಡಹದೆ ಕಡು ವಹಿಲ ಜಾದೃ ವೆನಿಸದೆ |
ಕೆಡಿಸದೆ ಸರ್ವರ ಚಿತ್ರ | 25
ಕೊಡಬಡಲೋದುವನೆ ಗಮಕಿ ಚೂಡಾರತ್ನಾ |