ರೆನ್ನುವುದು ಆಶ್ಚರ್ಯ! ವಿಚಾರವೇನೋ ಇರಬೇಕು, ಇರಲಿ; ಸಂತೋಷ! ಬೇಗ ಬರಲಿ!
(ದ್ವಾರಪಾಲಕನು ಕೈಮುಗಿದು ಹೊರಟು ಹೋಗುವನು.)
(ರವಿವರ್ಮನ ಪ್ರವೇಶ.)
(ರವಿವರ್ಮನು ಶ್ರೀಮಂತನ ಮುಂದೆಬಂದು ತಲೆಬಾಗಿ ನಿಲ್ಲುವನು.)
ಶ್ರೀಮಂತ:- (ಕೈಹಿಡಿದು) ಆಯುಷ್ಯಂತನೆ! ಸುಕ್ಷೇಮಿಯಾಗಿ ರುವೆಯಷ್ಟೆ!
ರವಿ:- ತಮ್ಮ ಅನುಗ್ರಹದಿಂದ ಇಂದಿನವರೆಗೆ ಸುಕ್ಷೇಮ.
ಶ್ರೀಮ೦ತ:- ನಿನ್ನ ಮಾವನು ಸಪರಿವಾರನಾಗಿ ಕುಶಲಿಯೇ?
ರವಿ:- ಕುಶಲಿ.
ಶ್ರೀಮ೦ತ:- ನಿನ್ನ ಮೂವನು ಕಳುಹಿದ ಪತ್ರವು ಇದೇ ನನ್ನ ಕೈ ಸೇರಿತು. ಅದರಲ್ಲಿ ನೀನು ಅಲ್ಲಿಯೇ ವ್ಯಾಸಂಗಮಾಡುತ್ತಿರುವುದಾಗಿ ತಿಳಿದಿತು. ಇದೇನು! ಕರೆಯಿಸಿದಂತೆಯೇ ಬಂದೆ?
ರವಿ:— ಅಲ್ಲಿ ನನ್ನ ವಿದ್ಯಾವ್ಯಾಸಂಗಕ್ಕೆ ಸರಿಯಾದ ಸಹಾಧ್ಯಾಯಿಗಳಾಗಲೀ, ಬೋಧಕರಾಗಲೀ ಇಲ್ಲ. ಅಲ್ಲದೆ ನನಗೆ ತಮ್ಮ ಅಸನ್ನಿಧಾನದಲ್ಲಿರಲು ಮನಸ್ಸು ಸಮ್ಮತಿಸಲಿಲ್ಲ. ಇದಕ್ಕಾಗಿ ನೆನೆದಂತೆ ಹೊರಟು ಬಂದೆನು.
ಶ್ರೀಮಂತ:- ನಿನ್ನ ಮಾವನ ಒಪ್ಪಿಗೆಯನ್ನು ಪಡೆದು ಬಂದೆಯೋ? ಇಲ್ಲವೊ?
ರವಿ:-ಆತನ ಒಪ್ಪಿಗೆಯಿಂದಲೇ ಇಲ್ಲಿಗೆ ಬರುವಂತಾಯಿತು.
ಶ್ರೀಮಂತ:- ಒಳ್ಳೆಯದು, ನಾನೇ ನಿನ್ನನ್ನು ಕರೆಯಿಸಿಕೊಳ್ಳಬೇಕೆಂದಿದ್ದೆನು. ಇದೋ ನೋಡು, ಇವರೇ ಸಾಕ್ಷಾತ್ ಅಭಿನವ ಬೃಹಸ್ಪತ್ಯಾಚಾರರು. ಮಹನೀಯರಾದ ಇವರಲ್ಲಿ ಗುರುಕುಲವಾಸ ಮಾಡಿ, ವಿದ್ಯಾಲಾಭವನ್ನು ಪಡೆಯಬೇಕೆಂದು ನಿನ್ನನ್ನೂ, ನಿನ್ನ ಸಹಜಾತನನ್ನೂ ಇವರಿಗೆ ಒಪ್ಪಿಸುವುದರಲ್ಲಿರುವೆನು. ಮೊದಲು ಇವರಿಗೆ