ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೯

(ರಮಾನಂದನು ಕೌತುಕದಿಂದ ಕ್ಷೇಮದರ್ಶಿಯನ್ನು ನೋಡುವನು.)

ಕ್ಷೇಮದರ್ಶಿ:- ( ಶ್ರೀಮಂತನನ್ನು ಕುರಿತು ) ' ಸುಕುಮಾರರು ಹೊರಡುವದಕ್ಕೆ ಮೊದಲು ಮಾತ್ರ ಸಮ್ಮುಖದಲ್ಲಿ ಅನುಮತಿಯನ್ನು, ಪಡೆಯಬೇಕೆಂಬ ಕುತೂಹಲದಲ್ಲಿ ರುವರು, ಆದುದರಿಂದ, ಗುರುಗಳೂ ಕುಮಾರರೊಡನೆ ದೇವಿಯವರಿಗೆ ಸಂದರ್ಶನಲಾಭವಿತ್ತು, ಬಳಿಕ ತೆರಳಬೇಕೆಂಬುದೇ ನನ್ನ ಪ್ರಾರ್ಥನೆ.

ಶ್ರೀಮ೦ತ:- ಪೂಜ್ಯರೆ! ತಮ್ಮ ಅಭಿಮತವೇನು?

ವಿದ್ಯಾ:- ( ಎದ್ದು ನಿಂತು) ಯುಕ್ತವಿಚಾರವು, ತಪಸ್ವಿನಿಯಾದ ನಿನ್ನ ಪತ್ನಿಯನ್ನು ನೋಡಿಬರುವದು ನನಗೂ ಸಮ್ಮತವೇ ಆಗಿದೆ. ಕುಮಾರರು ಮಾತೃ ದೈವವನ್ನು ವಂದಿಸಿ, ಆಶೀರ್ವಾದ ಹೊ೦ದಿಯೇ ಹೊರಡಬೇಕು-ನಡೆಯಿರಿ, ನಾವೆಲ್ಲರೂ ಇನ್ನು ಹೊರಡುವ. [ಎಲ್ಲರೂ ಹೊರಡುವರು]

ಸ್ಥಾನ ೩:- ವಸುಮತೀ ದೇವಿಯ ಅಂತಃಪುರ.

(ಚೀಟಿಯೊಡನೆ ಶ್ರೀಮಂತನ ಪತ್ನಿಯಾದ ವಸು ಮತೀದೇವಿಯ ಪ್ರವೇಶ.)

ವಸುಮತಿ:- ಸಖಿ! ನಿಜವಾಗಿ ಹೇಳುವೆಯಾ? ರವಿವರ್ಮ ಕುಮಾರನು ಬಂದುದನ್ನು ನೀನು ನೋಡಿದೆಯಾ?

ಚೇಟಿ:- ದೇವಿ! ನಾನು ನೋಡಿಯೇ ಬಂದು ಹೇಳಿದೆನಲ್ಲ, ಸುಳ್ಳನ್ನು ಹೇಳಿಲ್ಲ, ಕುಮಾರನು ನಿಜವಾಗಿಯೂ ಬಂದಿರುವನು.

ವಸುಮತಿ:- ಒಂಟಿಯಾಗಿ ಬಂದನೋ? ಯಾರನ್ನಾದರೂ ಜತೆಗೊಂಡು ಬಂದನೋ?

ಚೇಟಿ: ಅವನ ಸಂಗಡ ನಾಲ್ವರು ಬಂದಿರುವರು. ಆದರೆ ಅವರಲ್ಲಿ ಯಾರೂ ಇಲ್ಲಿಗೆ ಬಂದಿಲ್ಲ, ಎಲ್ಲ ರೂ ಬೇರೆಕಡೆಯಲ್ಲಿ ಉಳಿದಿರುವರು, ರವಿವರ್ಮ ಕುಮಾರನೊಬ್ಬ ನೇ ಇಲ್ಲಿಗೆ ಬಂದಿರುವನು.

ವಸುಮತಿ:- ಹಾಗಾದರೆ ನನ್ನನ್ನು ನೋಡಲು ಇನ್ನೂ ಬರಲಿಲ್ಲವೇಕೆ?