ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೨೩


(ಎಲ್ಲರೂ ಪುಷ್ಪಾಂಜಲಿಯನ್ನರ್ಪಿಸಿ ಕರತಾಡನಮಾಡುವರು.)

ಇಂತು ಪಂಚಮಾಂಕಕ್ಕೆ ಮಂಗಳ೦.

ಸೂತ್ರಧಾರ:-( ಸಭೆಯನ್ನು ವಂದಿಸಿ ) ಮಹನಿಯರಿಗೆ ವಂದನೆ. ತಾವೆಲ್ಲ ರ ಸದಯಾಂತಃಕರಣವಾಗಿ ಸಾಕ್ಷಾತ್ಕರಿಸಿ, ಶಕ್ತ್ಯುಚಿತ ವಾಗಿ ಮಾಡಿದ ನಮ್ಮ ಈ ವಿಧವಾದ ಸತ್ಕಾರದಿಂದ ಸುಪ್ರೀತರಾಗಿ. ನಮ್ಮೆಲ್ಲರನ್ನೂ ಅನುಗ್ರಹಿಸಿದುದಕ್ಕಾಗಿ ಧನ್ಯವಾದಗಳು, ಮತ್ತು ಇಂದಿನ ಈ ನವೀನ ಕೃತಿಯಲ್ಲಿ ತೋರಿರಬಹುದಾದ ನ್ಯೂನಾತಿರಿಕ್ತ ಗಳನ್ನು ಸಹಜ ಕ್ಷಮೆಯಿಂದ ಮನ್ನಿಸಿ, ಗುಣಸಂಗ್ರಹ ಮಾಡಿದುದ ಕ್ಕಾಗಿ ನಿಮ್ಮೆಲ್ಲರಿಗೂ ನಮ್ಮ ಕೃತಜ್ಞ ತಾಪೂರ್ವಕವಾದ ವಂದನೆಗಳು. ಭಗವಂತನು ನಮ್ಮ, ನಿಮ್ಮಲ್ಲಿ ಇಂದಿನ ಸೌಜನ್ಯಭಾವವೇ ದೃಢಮೂಲವಾಗಿ ಬೆಳೆದು, ದೇಶಕ್ಕೂ ದೇಶಪಾಲಕರಿಗೂ ಹಿತವನ್ನು೦ಟುಮಾಡುವಂತೆ ಅನುಗ್ರಹಿಸಬೇಕೆಂಬುದೇ ನಮ್ಮ ನಿರಂತರದ ಸಂ ಪ್ರಾರ್ಧನೆಗಳು, ( ಅಸ್ತು.)

ಇಲ್ಲಿಗೆ ಇಷ್ಟಕ್ಕೆ ರಮಾನಂದ ರೂಪಕವು.

ಕೃ ಷ್ಣಾ ರ್ಪ ಣಂ.