ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೦
ಸತೀಹಿತೈಷಿಣೀ

ಚಿತ್ರಕ:-( ಮುಂದೆ ಬಂದು ಕೈಕಟ್ಟಿ ನಿಲ್ಲುವನು.)
ಕ್ಷೇಮ:- ಅಯ್ಯ! ರಮಾನಂದನ ವಿಷಯದಲ್ಲಿ ರವಿವರ್ಮ ಕುಮಾರನೂ, ಕಳಿಂಗ, ನಳರೂ ನಿರಪರಾಧಿಗಳೆಂದು ನಾನು ಹೇಳುವೆನು ನಿನ್ನ ಅಭಿಪ್ರಾಯವೇನು?
ಚಿತ್ರಕ-ಮಹಾಸ್ವಾಮಿ! ಹುಲಿಯನ್ನು ಸಾಧುವಾದ ಹಸುವೆಂದು ಹೇಳುವಂತೆಯೇ ಕುಮಾರನ ಪ್ರಾಣಾಪಹಾರಿಗಳಾದವರನ್ನು ನಿರಪರಾಧಿಗಳೆಂದು ಹೇಳಬಹುದು,
ಕ್ಷೇಮ:- ಹೇಗೆ ಹೇಗೆ? ಇವರಲ್ಲಿ ದೋಷವೇನು? ಏನು ಮಾಡಿದರು?
ಚಿತ್ರಕೆ:-ಮತ್ತೇನೂ ಇಲ್ಲ. ಗುರುಗಳ ಮನೆಯಿಂದ ಒಂಟಿಯಾಗಿ ಬರುತ್ತಿದ್ದ ಕುಮಾರನನ್ನು ಹಿಂದಿನಿಂದ ಹೊತ್ತುಕೊಂಡು ಹೋಗಿ ಮ೦ದಾರಣ್ಯದಲ್ಲಿ ಕಡಿದುಹಾಕಿ ಬರಬೇಕೆಂದು ಮಾತ್ರ ನನಗೆ ಕಟ್ಟು ಮಾಡಿದರು.
ಕ್ಷೇಮ:- ಈ ಅಧಮಕಾರ್ಯವನ್ನು ಮಾಡಿ ಇವರಿಂದ ನೀನು ಹೊಂದಿದ ಪ್ರತಿಫಲವೇನು?
ಚಿತ್ರಕ:- ಕುಮಾರನ ಮೈಮೇಲಿದ್ದ ಉಡುವು, ತೊಡವುಗಳು ಮತ್ತು ಇಪ್ಪತ್ತು ವರಹಗಳು ನನಗೆ ಪ್ರತಿಫಲವಾಗಿ ಬಂದುವು. ಇವಲ್ಲದೆ, ಇನ್ನೂ ಹತ್ತು ವರಹಗಳನ್ನು ಕೊಡುವುದಾಗಿ ಮಾತುಕೊಟ್ಟಿದ್ದರು.
ಕ್ಷೇಮ:- ರಮಾನಂದನ ಸೇವಕನೆಲ್ಲಿ? ಏನಾದನು?
ಚಿತ್ರಕ:- ಅವನೂ ನಮ್ಮನ್ನು ಪ್ರತಿಭಟಿಸಿ, ನಮ್ಮಿಂದ ಕಾಲವಾದನು.
ಕ್ಷೇಮ:- ಹಾಗಾದರೆ ರಮಾನಂದನ್ನೇನು ಮಾಡಿದಿರಿ? ಎಲ್ಲಿ ಬಿಟ್ಟು ಬಂದಿರಿ?
ಚಿತ್ರಕ-(ತಲೆ ತಗ್ಗಿಸಿ ನಿಲ್ಲುವನು.)