ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಸತೀಹಿತೈಷಿಣಿ

ಧರ್ಮಾವತಾರ - ಪಂಚಾಯಿತರ ಕಡೆಗೆ ತಿರುಗಿ, - 'ವಿನೋದನ ವಿದ್ಯಮಾನವೆಲ್ಲವನ್ನೂ ಕೇಳಿ ತಿಳಿದಿರುವಿರಷ್ಟೆ; ನಿಮ್ಮ ಅಭಿಪ್ರಾಯವೇನು?

ಪಂಚಾಯಿತರು - ವಿನೋದನು ದೊಡ್ಡ ಮನೆತನಕ್ಕೆ ಸೇರಿದವನೂ, ಶ್ರೀಮಂತನೂ, ವಿದ್ಯಾವಿನಯ ಸಂಪನ್ನನೂ, ಗೌರವಸ್ಥನೂ ಆಗಿರುವನು. ಈತನ ಈ ಬಗೆಯ ಅಚಾತುರ್ಯಕ್ಕೆ ಚಪಲೆ, ತಂತ್ರನಾಥ, ಗಿರಿಯಮ್ಮ ಇವರೇ ಕಾರಣಭೂತರು. ಇವರುಗಳ ದೋಷಾರೋಪಗಳಿಂದ ವಿನೋದನು ಇಂತಹ ಅಕಾರ್ಯವನ್ನು ಮಾಡಿರುವನು. ಕೃತಘ್ನನೂ, ಘಾತಕನೂ ಆದ ತಂತ್ರನಾಥನೇ ಚಪಲೆಯನ್ನು ಹೊಡೆದು ಕೊಂದನೆಂಬುದಕ್ಕೆ ಸಂಶಯವಿಲ್ಲ. ಪತ್ನಿಯನ್ನೂ ಮತ್ತು ಚಪಲೆಯನ್ನೂ ವಧಿಸಲು ಪ್ರಯತ್ನಿಸಿದ ಅಪರಾಧಗಳು ಮಾತ್ರವೆ ವಿನೋದನ ಮೇಲೆ ಆರೋಪಿತವಾಗುವಂತವುಗಳು. ಒಂದು ಕೊಲೆಮಾಡಿ ತಲೆ ತಪ್ಪಿಸಿಕೊಂಡಿದ್ದ, ಮತ್ತೊಂದು ಕೊಲೆಗೂ ಕಯ್ಯೆತ್ತಿದ ತಂತ್ರನಾಥನು ದಂಡಾರ್ಹನು. ದೊಹಿಗಳನ್ನು ಆಗಾಗಲೇ ದಂಡಿಸಬೇಕೆಂಬುದು ವಿದಿತವಿಷಯವು. ವಿನೋದನಿಗೆ ಆತನ ವಾಙ್ಮೂ ಲದಿಂದ ಈಗ ಜ್ಞಾನೋದಯವಾಗಿರುವಂತೆ ತೋರಿ ಬರುತ್ತಿರುವುದರಿಂದ ಇವನನ್ನು ಸರಿಯಾದ ಹೊಣೆಗಾರರ ನಂಬಿಕೆಯ ಮೇಲೆ ಬಿಟ್ಟರೂ ಬಿಡಬಹುದು.

ಧರ್ಮಾವತಾರಿ - ವಿನೋದನ ಕಡೆಗೆ ತಿರುಗಿ,...... “ವಿನೋದ! ಸಭಿಕರು ನಿನ್ನನ್ನು ತಪ್ಪಿತಸ್ಥನಾಗಿದ್ದರೂ, ಜ್ಞಾನೋದಯದಿಂದ ಮುಕ್ತಾರ್ಹನೆಂದು ಹೇಳುತ್ತಿರುವುದರಿಂದೆಯೂ, ಕಾಗದ ಪತ್ರಗಳಲ್ಲಿ ನೀನು ಕೊಲೆಗೆ ಕಾರಣನಲ್ಲವೆಂಬುದು, ಅಷ್ಟಾಗಿ