<ಮಂಕುತಿಮ್ಮನ ಕಗ್ಗ
- ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ
- ಹುಲ್ಲು ಬಯಲೊಂದೆಡೆಯಿನೊಂದಕ್ಕೆ ನೆಗೆದು
- ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೋ
- ಡೆಲ್ಲಿಯೋ ಸುಖ ನಿನಗೆ – ಮಂಕುತಿಮ್ಮ
- ಚೆನ್ನಲ್ಲಿ= ಚೆನ್ನ + ಅಲ್ಲಿ// ಚೆನ್ನೆಲ್ಲೊ= ಚೆನ್ನ + ಎಲ್ಲೋ// ಚೆನ್ನೆನುತೆಣಿಸಿ= ಚೆನ್ನ+ಎನುತ +ಎಣಿಸಿ// ಬಯಲೊಂದೆಡೆಯಿನೊಂದಕ್ಕೆ= ಬಯಲ+ಒಂದೆಡೆಯಿಂದ+ಇನ್ನೊಂದಕ್ಕೆ/ಪೋಲ್ತೋಡೆಲ್ಲಿಯೋ = ಪೋಲ್ತೊಡೆ + ಎಲ್ಲಿಯೋ
- ಪೋಲ್ತೊಡೆ = ಹೋಲಿಸಿದಂತೆ, ಹಾಗೆ.
- ಒಂದು ವಿಶಾಲವಾದ ಹುಲ್ಲ ಬಯಲಲ್ಲಿ,ಒಂದು ಆಕಳ ಕರು ಚಂಗು ಚಂಗೆಂದು ನೆಗೆಯುತ್ತಾ ‘ ಒಳ್ಳೆಯ ಹುಲ್ಲು ಇಲ್ಲಿದೆ, ಆಲ್ಲಿ ಚೆನ್ನಾಗಿದೆ ಅಥವಾ ಇನ್ನೂ ಎಲ್ಲೋ ಚೆನ್ನಾಗಿರಬಹುದು" ಎಂದು ಯೋಚಿಸಿ, ಎಲ್ಲ ಕಡೆ ಓಡಿ, ಕಡೆಗೆ ಎಲ್ಲಿಯೂ ಮೆಲ್ಲದೆಯೇ ಓಡಿ ಓಡಿ ದಣಿವಂತೆ ಇದೆ ನಿನ್ನ ಪರಿಸ್ತಿತಿ. ಈ ವಸ್ತುವಿನಲ್ಲಿ ಸುಖವಿದೆ, ಆ ವಸ್ತುವಿನಲ್ಲಿ ಆನಂದವಿದೆ ಅಥವಾ ನಾ ಹುಡುಕುವ ಸುಖ ಮತ್ತು ಆನಂದ ಬೇರೆ ಯಾವ ವಸ್ತುವಿನಲ್ಲಿದೆಯೋ ಎಂದು ವಸ್ತುವಿನಿಂದ ವಸ್ತುವಿಗೆ ಮತ್ತು ವಿಷಯದಿಂದ ವಿಷಯಕ್ಕೆ ನೆಗೆ – ನೆಗೆದು ನೀ ದಣಿಯುತ್ತಿದ್ದೀಯಲ್ಲ, ನಿನಗಾವುದರೊಳಗೆ ಸುಖ ? ಎಂದು ಸುಖದಾಸೆಯ ಭ್ರಮೆಯಲ್ಲಿ ಸುತ್ತುವ ನಮ್ಮನ್ನು ಒಂದು ಪ್ರಶ್ನೆಯನ್ನು ಕೇಳಿದ್ದಾರೆ.
[೧]
-೦♦♦♣♣♣♣♣♣♣♣♣♣♣♣♦♦೦-
|