48
ನಾರದನು ಇಂದ್ರ ಸಭೆಯಲ್ಲಿ ಹೇಳಲು ನಿನ್ನ ಧರ್ಮವನ್ನು ಪರೀಕ್ಷಿಸಲೋಸುಗ ದೇವೇಂದ್ರನ ಅಪ್ಪಣೆಯಂತೆ ನಾನಿಲ್ಲಿಗೆ ಬಂದು, ಈ ರೀತಿ ಮಾಡಿದೆನು, ದೀನಸಂರಕ್ಷಣೆಯಲ್ಲಿ ನಿನಗಿರುವ ಶ್ರದ್ಧೆಯಿಂದ ನಾನು ಸಂತೃಪ್ತಳಾದನು, ಬೇಕಾದವರವನ್ನು ಕೇಳು "ಎಂದಿತು, ವಿಕ್ರಮನ ಆ ಕಾಮಧೇನುವೇ ತನ್ನ ಬಳಿಯಿರಬೇಕೆಂದು ಬಯಸಿದನು. ಆ ಧೇನುವು ಹಾಗೆಯೇ ಆಗಲೆಂದು ಒಪ್ಪಿ, ವಿಕ್ರ ಮನ ಅರಮನೆಯಲ್ಲಿಯೇ ಇದ್ದಿತು ಇದನ್ನರಿತ ಬ್ರಾಹ್ಮಣನೊಬ್ಬನು ಆಗೋವು ತನಗೆ ಬೇಕೆಂದು ವಿಕ್ರಮರಾಯನನ್ನು ಕೇಳಲು, ರಾಯನು ಪ್ರತಿಮಾತಾಡದೆ, ಸಂತೋಷದಿಂದ ಆದೇವಲೋ ಕದ ಧೇನುವನ್ನು ವಿಪ್ರನಿಗೆ ಕೊಟ್ಟನು. ನೀವೂ ಹಾಗೆ ಮಾಡಿರುವಿರೋ???
ಭೋಜನು ತಲೆ ಬಾಗಿದನು.
***
ಇಪ್ಪತ್ತೇಳನೆಯ ಸಾಲಭಂಜಿಕೆಯು ಉದೀರಿಸಿ ತೇನೆಂದರೆ:__
"ವಿಕ್ರಮರಾಜನು ಒಂದು ಸಮಯದಲ್ಲಿ ದೇಶಪರ್ಯಟನೆ ಮಾಡುತ್ತಾ, ಒಂದಾನೊಂದು ನಗರದ ಬಳಿ ಬಂದು ಮನೋಹರವಾದ ಸರೋವರವನ್ನೂ, ದೇವಮಂದಿರವನ್ನೂ ಕಂಡು, ನಾಲ್ಕೈದು ದಿನಗಳು ಅಲ್ಲಿ ನಿಲ್ಲಬೇಕೆಂದು ಸಂಕಲ್ಪಿಸಿ, ದೇವತಾಲಯವನ್ನು ಹೊಕ್ಕು ದೆವತಾ ಸಂದರ್ಶನಮಾಡಿಕ್ಕೊಂಡು ರಂಗ ಮಂಟಪಕ್ಕೆ ಬರಲು, ಅಲ್ಲಿ ಒಬ್ಬ ಸುಂದರಪುರುಷನು ದಿವ್ಯದು ಕೂಲಗಳನ್ನುಟ್ಟು, ರತ್ನಾಭರಣಗಳನ್ನು ತೊಟ್ಟು, ಗಂಧಪುಷ್ಪಗಳಿಂದ ಶೋಭಿಸುತ್ತಾ, 'ಜನರೊಡನೆ ವಿನೋದವಾಗಿ ಕುಳಿತಿದ್ದುದನ್ನು ನೋಡಿದರು, ಸ್ವಲ್ಪ ಹೊತ್ತಿನಲ್ಲಿ ಆವ್ಯಕ್ತಿಯ, ಅವನೊಡನೆ ಇದ್ದ ವರೂ ಹೊರಟು ಹೋದರು. ವಿಕ್ರಮನು ಅವ