ಶ್ರೀ ವಿಷ್ಣು ವಿಶ್ವಾದಿಮೂಲ

ವಿಕಿಸೋರ್ಸ್ದಿಂದ
Jump to navigation Jump to search
  • ಮಂಕುತಿಮ್ಮನ ಕಗ್ಗ:
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,
ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| (೧)

(ಕಾಣದೊಡಂ+ಅಳ್ತಿಯಂ) (ಪರಬ್ಬೊಮ್ಮಂ+ಎಂದು)

  • ಶ್ರೀ ವಿಷ್ಣು, ಪ್ರಪಂಚಕ್ಕೆ ಮೊದಲು ಮತ್ತು ಮೂಲನಾಗಿರುವವನು,ಮಾಯಲೋಲನಾಗಿರುವವನು,

ದೇವರು, ಸರ್ವರಿಗು ಈಶನಾಗಿರುವವನು ಮತ್ತು ಪರಬ್ರಹ್ಮ(ಪರಬೊಮ್ಮ) ನೆಂದು ವಿವಿಧವಾದ ನಾಮಾವಳಿಗಳಿಂದ ಜನಗಳು ಯಾವುದನ್ನು ಕಾಣದಿದ್ದರು ಪ್ರೀತಿಯಿಂದ(ಅಳ್ತಿಯಿಂ) ನಂಬಿರುವರೋ, ಆ ವಿಚಿತ್ರಕ್ಕೆ ನಮಿಸು.

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ