ವಿಷಯಕ್ಕೆ ಹೋಗು

ಕಾರಿ ಹೆಗ್ಗಡೆಯ ಮಗಳು

ವಿಕಿಸೋರ್ಸ್ದಿಂದ

ಕಾರಿ ಹೆಗ್ಗಡೆಯ ಮಗಳು

[ಸಂಪಾದಿಸಿ]
  • (ಲಾರ್ಡ್ ಉಲ್ಲಿನ್‍ನ ಮಗಳು - ಕವಿ:ಥಾಮಸ್ ಕ್ಯಾಂಪ್ಬೆಲ್; ಅನುವಾದ:ಬಿ.ಎಂ.ಶ್ರೀ.)
ಮೂಲ ಕವನ ಮತ್ತು ಕವಿಯ ವಿಚಾರ
  • ಇದೊಂದು ಸಾಕಷ್ಟು ಉತ್ತಮ ಮಟ್ಟದ ಪ್ರಮಾಣಿತ ಬಲ್ಲಾಡ್, ವಿಶೇಷ ಗಮನಾರ್ಹವಲ್ಲದಿದ್ದರೂ ಆನಂದದಾಯಕವಾಗಿದೆ. ನನಗೆ ತಿಳಿದ ಮಟ್ಟಿಗೆ, ಇದಕ್ಕೆ ಸಂಬಂಧಿಸಿದ ಯಾವುದೇ ಚಾರಿತ್ರಿಕ ಆಧಾರವಿಲ್ಲ. (ಲಾರ್ಡ್ ಉಲ್ಲಿನ್ ಅವರ ಏಕೈಕ ಉಲ್ಲೇಖಗಳನ್ನು ನಾನು ಕವಿತೆಯಲ್ಲಿ ಮಾತ್ರಾ ಉಲ್ಲೇಖಿಸಿದ್ದನ್ನು ಕಂಡಿದ್ದೇನೆ). ಯಾರಾದರೂ ಹೆಚ್ಚಿನದಾಗಿ ತಿಳಿದಿದ್ದರೆ, ಬರೆಯಿರಿ.
  • ರಚನೆಯ ಬಗ್ಗೆ ಒಂದು ತ್ವರಿತ ಟಿಪ್ಪಣಿ; ಮೀಟರ್ ಪ್ರಮಾಣಿತ ಬಲ್ಲಾಡ್ ಹೆಪ್ಟಾಮೀಟರ್ ಆಗಿದೆ, ಇದು ಉದ್ದಕ್ಕೂ ಅಸ್ಥಿರವಾಗಿರುತ್ತದೆ (ಇದು ಹಳೆಯ-ಶೈಲಿಯ ಭಾವನೆಗೆ ಹೊಂದಿಕೆ ನೀಡುತ್ತದೆ); ಪ್ರಾಸದ ಯೋಜನೆ (ಸ್ಕೀಮ್) ಅದೇ ರೀತಿ ಸ್ಥಿರವಾಗಿರುತ್ತದೆ, ಒಂದು ಪದ್ಯವನ್ನು ಹೊರತುಪಡಿಸಿ, ಆ ಪದ್ಯವನ್ನು ಹಿಂದಿನದಕ್ಕೆ ಜೋಡಣೆ ಮಾಡಲು(ಲಿಂಕ್) ಮಾಡಲು ಪ್ರಾಸ ಬದಲಾಯಿಸಲಾಗಿದೆ (ಒಂದು ರೀತಿಯ ಕ್ಯಾರಿ ಓವರ್ ಎಫೆಕ್ಟ್).
  • (ಕ್ಯಾಂಪ್ಬೆಲ್, ಥಾಮಸ್ (ಜನನ ಜುಲೈ 27, 1777, ಗ್ಲ್ಯಾಸ್ಗೋ, ಸ್ಕಾಟ್ .; ಡಿ. ಜೂನ್ 15, 1844, ಬೌಲೋಗ್ನೆ, ಫ್ರಾನ್ಸ್)
  • ಸ್ಕಾಟಿಷ್ ಕವಿ, ಅವರ ಭಾವನಾತ್ಮಕ ಮತ್ತು (ಗಡಸು)ಮಾರ್ಶಿಯಾ ಸಾಹಿತ್ಯಕ್ಕಾಗಿ ಮುಖ್ಯವಾಗಿ ನೆನಪಿಸಿಕೊಳ್ಳುತ್ತಾರೆ; ಲಂಡನ್ ವಿಶ್ವವಿದ್ಯಾನಿಲಯ ಏನಾಯಿತು ಎಂಬುದನ್ನು ಕಂಡುಹಿಡಿಯುವ ಯೋಜನೆಯ ಪ್ರಾರಂಭಿಕರಲ್ಲಿ ಅವರು ಒಬ್ಬರು.(ಬ್ಲಾಗಿಗ:THE WONDERING MINSTRELS)

ಪಡುವ ದಿಬ್ಬದ ಗೌಡನೊಬ್ಬನು
ಬಿಡದೆ ತೊರೆಯನ ಕೂಗಿಕೊಂಡನು;
ತಡೆಯದೀಯದೆ ಗಡುವ ಹಾಯಿಸು
ಕೊಡುವೆ ಕೇಳಿದ ಹೊನ್ನನು

ಆರು ನೀವೀ ಕರಗಿ ಮೊರೆಯುವ
ನೀರು ಕಾಯಲ ಹಾಯುವವರು?
ಪಡುವದಿಬ್ಬದ ಗೌಡ ನಾನೀ
ಮಡದಿ ಕಾರಿಯ ಕುವರಿಯು.

ಓಡಿ ಬಂದೆವು ಮೂರು ದಿವಸ;
ಜಾಡ ಹಿಡಿದು ಹಿಂದೆ ಬಂದರು;
ನಮ್ಮ ನೀ ಕಣಿವೆಯಲಿ ಕಂಡರೆ
ಚಿಮ್ಮಿ ಹರಿವುದು ನೆತ್ತರು.

ಹತ್ತಿ ಕುದುರೆಯ ತರುಬಿ ಬರುವರು.
ಮುತ್ತಿ ಕೊಂಡರೆ ನನ್ನ ಕೊಲುವರು;
ಘೋರದುಃಖದ ನಾರಿಯನು ಬಳಿ
ಕಾರು ನಗಿಸಲು ಬಲ್ಲರು?

ಆಗ ಅಂಜದೆ, ತೊರೆಯನೆಂದನು;
ಬೇಗ, ಜೀಯಾ, ಓಡ ತರುವೆನು.
ಸುಡಲಿ ಹೊನ್ನು, ಬೆಡಗಿ ನಿನ್ನೀ
ಮಡದಿಗೋಸುಗ ಬರುವೆನು.

ಆದುದಾಗಲಿ, ಮುದ್ದಿನರಗಿಣಿ
ಗಾದ ಗಂಡವ ಕಾದು ಕೊಡುವೆನು.
ಕಡಲು ನೊರೆಗಡೆದೆದ್ದು ಕುದಿಯಲಿ
ಗಡುವ ಹಾಯಿಸಿ ಬಿಡುವೆನು.

ತೂರು ಗಾಳಿಗೆ ಕಡಲು ಕುದಿಯಿತು,
ನೀರ ದೆವ್ವಗಳರಚಿಕೊಂಡುವು.
ಹೆಪ್ಪು ಮೋಡದ ಹುಬ್ಬುಗಂಟಿಗೆ
ಕಪ್ಪಗಾದವು ಮುಖಗಳು.

ಕೆರಳಿ ಕೆರಳಿ ಗಾಳಿ ಚಚ್ಚಿತು;
ಇರುಳ ಕತ್ತಲೆ ಕವಿದು ಮುಚ್ಚಿತು;
ಕಣಿವೆಯಿಳಿವರ ಕುದುರೆ ಕತ್ತಿಯ
ಖಣಿಖಣಿಧ್ವನಿ ಕೇಳಿತು!

ಏಳು, ಬೇಗೇಳಣ್ಣ, ಎಂದಳು;
ಹೂಳಿಕೊಳಲಿ ನನ್ನ ಕಡಲು,
ಮುಳಿದ ಮುಗಿಲ ತಡೆಯಬಲ್ಲೆ,
ಮುಳಿದ ತಂದೆಯ ತಡೆಯನು.

ಇತ್ತ ಕರೆಮೊರ ಹಿಂದಕಾಯಿತು;
ಅತ್ತ ತೆರೆಮೊರೆ ಸುತ್ತಿಕೊಂಡಿತು;
ಆಳ ಕೈಯಲಿ ತಾಳಬಹುದೇ
ಏಳು ಬೀಳಿನ ಕಡಲದು!

ಅಲೆಗಳಬ್ಬರದಲ್ಲಿ ಮೀಟಿ
ಮುಳುಗುತಿಹರು, ಏಳುತಿಹರು--
ಕರೆಗೆ ಬಂದ ಕಾರಿಹೆಗ್ಗಡೆ,
ಕರಗಿ ಮುಳಿಸು ಅತ್ತನು!

ತೊಂಡುತೆರೆಗಳ ಮುಸುಕಿನಲ್ಲಿ,
ಕಂಡು ಮಗಳ, ಕರಗಿಹೋದ--
ಒಂದು ಕೈ ನೀಡಿದಳು ನೆರವಿಗೆ,
ಒಂದು ತಬ್ಬಿತು ನಲ್ಲನ!

ಮರಳು, ಮರಳು, ಮಗಳೆ ಎಂದ,
ಮೊರೆವ ಕಾಯಲ ಗಂಟಲಿಂದ;
ಮರೆತೆ, ಒಪ್ಪಿದೆ ನಿನ್ನ ನಲ್ಲನ,
ಮರಳು ಕಂದಾ ಎಂದನು.

ಮರಳ ಬಹುದೇ? ಹೋಗಬಹುದೆ?
ಕರೆಯ ತರೆಯಪ್ಪಳಿಸಿ ಹೊಯ್ದು
ಹೊರಳಿಹೋದುವು ಮಗಳ ಮೇಲೆ,
ಕೊರಗಿನಲಿ ಅವನುಳಿದನು
---♦♦♦---

  • ಅನುವಾದಕರು:ಬಿ. ಎಂ. ಶ್ರೀಕಂಠಯ್ಯ.

[]

Lord Ullin's Daughter

[ಸಂಪಾದಿಸಿ]
  • (Poem By Thomas Campbell.
  • Poems That Every Child Should Know edited by Mary E. Burt.

A chieftain, to the Highlands bound,
⁠Cries, "Boatman, do not tarry!
And I'll give thee a silver pound,
⁠To row us o'er the ferry."

"Now who be ye, would cross Lochgyle,
⁠This dark and stormy water?"
"O, I'm the chief of Ulva's isle,
⁠And this Lord Ullin's daughter.

"And fast before her father's men
⁠Three days we've fled together,
For should he find us in the glen,
⁠My blood would stain the heather.

"His horsemen hard behind us ride;
⁠Should they our steps discover,
Then who will cheer my bonny bride
⁠When they have slain her lover?"

Outspoke the hardy Highland wight,
⁠"I'll go, my chief—I'm ready;
It is not for your silver bright,
⁠But for your winsome lady:

"And by my word! the bonny bird
⁠In danger shall not tarry;
So though the waves are raging white,
⁠I'll row you o'er the ferry."

By this the storm grew loud apace,
⁠The water-wraith was shrieking;
And in the scowl of heaven each face
⁠Grew dark as they were speaking.

But still as wilder blew the wind,
⁠And as the night grew drearer,
Adown the glen rode armèd men,
⁠Their trampling sounded nearer.

"O haste thee, haste!" the lady cries,
⁠"Though tempests round us gather;
I'll meet the raging of the skies,
⁠But not an angry father."

The boat has left a stormy land,
⁠A stormy sea before her,—
When, oh! too strong for human hand,
⁠The tempest gather'd o'er her.

And still they row'd amid the roar
⁠Of waters fast prevailing:
Lord Ullin reach'd that fatal shore,
⁠His wrath was changed to wailing.

For sore dismay'd, through storm and shade,
⁠His child he did discover:—
One lovely hand she stretch'd for aid,
⁠And one was round her lover.

"Come back! come back!" he cried in grief,
⁠"Across this stormy water:
And I'll forgive your Highland chief,
⁠My daughter!—oh my daughter!"

'Twas vain the loud waves lashed the shore,
⁠Return or aid preventing;—
The waters wild went o'er his child,—
⁠And he was left lamenting.[]
      ---♦♦♦---

  • By:Thomas Campbell.
  • Lord Ullin's Daughter
  • Text is available under the Creative Commons Attribution-ShareAlike License; additional terms may apply. *By using this site, you agree to the Terms of Use and Privacy Policy.

ಕವಿಯ ಬಗೆಗೆ

[ಸಂಪಾದಿಸಿ]
A fairly standard ballad - unremarkable but enjoyable. As far as I know, it has no basis in fact (the only references to Lord Ullin I could find referred to the poem), though if anyone knows any better, do write in.
A quick note on the structure - the metre is the standard ballad heptameter, unvarying throughout (which contributes to the old-fashioned feel); the rhyme scheme likewise remains constant, except for one verse where it is changed to link it to the previous one (a sort of carry over effect).
  • (Campbell, Thomas(b. July 27, 1777, Glasgow, Scot.;d. June 15, 1844, Boulogne, France)
  • Scottish poet, remembered chiefly for his sentimental and martia lyrics; he was also one of the initiators of a plan to found what became the University of London.

[]

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. BMSHRI'S POEM
  2. [:en:Poems That Every Child Should Know/Lord Ullin's Daughter]
  3. [http://wonderingminstrels.blogspot.com/1999/09/lord-ullin-daughter-thomas-campbell.html THE WONDERING MINSTRELS]