ವಿಷಯಕ್ಕೆ ಹೋಗು

ಮಂಕುತಿಮ್ಮನ ಕಗ್ಗ-ಕಂತು ೪.

ವಿಕಿಸೋರ್ಸ್ದಿಂದ
<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೪; ಪದ್ಯ ೯೧ ರಿಂದ ೧೨೦-[ಮೊದಲ ಸಾಲು.]

ಮಂಕುತಿಮ್ಮನ ಕಗ್ಗ;:ಅರ್ಥಸಹಿತ

[ಸಂಪಾದಿಸಿ]

ಪ್ರಪಂಚ ಆಕುಂಚನ.- 091

[ಸಂಪಾದಿಸಿ]
ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ |
ಸುಮವಪ್ಪುವುದಂತೆ ಮರುವಗಲು ಮಗುಳ್ದಂತು ||
ಅಮಿತ ಪ್ರಪಂಚನಾಕುಂಚನಾವರ್ತನ |
ಕ್ರಮವೇ ವಿಶ್ವಚರಿತ್ರೆ – ಮಂಕುತಿಮ್ಮ ||
  • ಕಮಲವುದಯದೊಳರಳಿ = ಕಮಲವು + ಉದಯದೊಳು + ಅರಳಿ, ಸುಮವಪ್ಪುವುದಂತೆ = ಸುಮವು + ಅಪ್ಪುವುದಂತೆ,ಪ್ರಪಂಚನಾಕುಂಚನಾವರ್ತನ = ಪ್ರಪಂಚನ + ಆಕುಂಚನ + ಆವರ್ತನ
  • ಮುಗುಳಾಗಿ = ಮೊಗ್ಗಾಗಿ, ಸುಮವಪ್ಪುವುದಂತೆ = ಹೂವಾಗುವುದಂತೆ, ಮರುವಗಲು = ಮತ್ತೆ ಹಗಲು, ಅಮಿತ = ಮಿತವಿಲ್ಲದ,ಪ್ರಪಂಚನಾಕುಂಚನಾವರ್ತನ = ಪ್ರಪಂಚದ ಹರಡುವುದು ಸೇರಿಕೊಳ್ಳುವುದು

[]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.